Friday, August 22, 2025
No menu items!
HomeNewsLIC Recruitment 2025-LIC ಯಲ್ಲಿ ಸರ್ಕಾರಿ ಉದ್ಯೋಗಕ್ಕೆ ಅವಕಾಶ! ಬರೋಬ್ಬರಿ 841 ಹುದ್ದೆಗಳಿಗೆ ಅರ್ಜಿ ಆಹ್ವಾನ!

LIC Recruitment 2025-LIC ಯಲ್ಲಿ ಸರ್ಕಾರಿ ಉದ್ಯೋಗಕ್ಕೆ ಅವಕಾಶ! ಬರೋಬ್ಬರಿ 841 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಸರ್ಕಾರಿ ಉದ್ಯೋಗದ ಕನಸನ್ನು ಕಾಣುತ್ತಿರುವ ಯುವ ಜನರಿಗೆ ಸುವರ್ಣ ಅವಕಾಶ! ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಹಾಗೂ ವಿಮಾ ಸಂಸ್ಥೆ ವತಿಯಿಂದ ಅಸಿಸ್ಟೆಂಟ್ ಆಡ್ಮಿನಿಸ್ಟ್ರೇಟಿವ್ ಆಫೀಸರ್ (AAO) ಮತ್ತು ಅಸಿಸ್ಟೆಂಟ್ ಇಂಜಿನಿಯರ್ (AE) ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಇದು ಭಾರತ ಸರ್ಕಾರದ ಅತಿದೊಡ್ಡ ಒಂದು ವಿಮಾ ಕಂಪನಿಯಾಗಿದ್ದು1956 ರಲ್ಲಿ ಸ್ಥಾಪನೆಯಾಗಿದೆ. ಅಲ್ಲದೆ ಭಾರತೀಯ ನಾಗರಿಕರಿಗೆ ಜೀವ ವಿಮಾ ಯೋಜನೆಗಳನ್ನು ನೀಡುವುದು ಹಾಗೂ ಅವರ ಆರ್ಥಿಕ ಭದ್ರತೆಯನ್ನು ಬಲಪಡಿಸುವುದರ ಮುಖ್ಯ ಉದ್ದೇಶವಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಕೋರಿದೆ.

ಇದನ್ನೂ ಓದಿ: Mobile kitchen Subsidy-ಮೊಬೈಲ್ ಕಿಚನ್ ಪ್ರಾರಂಭಿಸಲು ₹4.0 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

ಪ್ರಸ್ತುತ ಇಂದಿನ ಲೇಖನದಲ್ಲಿ ಉದ್ಯೋಗವಕಾಶವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಯಾವೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ? ಅರ್ಜಿಯನ್ನು ಸಲ್ಲಿಸಲು ಶುಲ್ಕವೆಷ್ಟು? ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳಾವುವು? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಪ್ರಮುಖ ದಿನಾಂಕಗಳ ವಿವರ? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Vacancy Application-ಎಲ್‌ಐಸಿ 2025 ಹುದ್ದೆಗಳ ವಿವರ ಈ ಕೆಳಗಿನಂತಿದೆ:

ಒಟ್ಟು ಹುದ್ದೆಗಳು: 841

  1. ಅಸಿಸ್ಟೆಂಟ್ ಆಡ್ಮಿನಿಸ್ಟ್ರೇಟಿವ್ ಆಫೀಸರ್ (AAO)-ಜನರಲಿಸ್ಟ್: 350 ಹುದ್ದೆಗಳು
  2. ಅಸಿಸ್ಟೆಂಟ್ ಆಡ್ಮಿನಿಸ್ಟ್ರೇಟಿವ್ ಆಫೀಸರ್ (AAO)-ಸ್ಪೆಷಲಿಸ್ಟ್: 410 ಹುದ್ದೆಗಳು
  3. ಅಸಿಸ್ಟೆಂಟ್ ಇಂಜಿನಿಯರ್ (AE): 81 ಹುದ್ದೆಗಳು

ಇದನ್ನೂ ಓದಿ: Muskaan Scholarship-ಮುಸ್ಕಾನ್ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಈ ಹುದ್ದೆಗಳಿಗೆ ಆಯ್ಕೆಯು ಮೂರು ಹಂತಗಳಲ್ಲಿ ನಡೆಯಲಿದೆ:

ಪ್ರಾಥಮಿಕ ಪರೀಕ್ಷೆ (ಪ್ರಿಲಿಮ್ಸ್), ಮುಖ್ಯ ಪರೀಕ್ಷೆ (ಮೇನ್ಸ್) ಮತ್ತು ಸಂದರ್ಶನ, ಜೊತೆಗೆ ವೈದ್ಯಕೀಯ ಪರೀಕ್ಷೆ. ಪ್ರಿಲಿಮ್ಸ್‌ನಲ್ಲಿ ಪಡೆದ ಅಂಕಗಳು ಅಂತಿಮ ಆಯ್ಕೆಯ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ; ಮೇನ್ಸ್ ಮತ್ತು ಸಂದರ್ಶನದ ಅಂಕಗಳು ಅಂತಿಮ ಆಯ್ಕೆಗೆ ಆಧಾರವಾಗಿರುತ್ತವೆ.

Application Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಪ್ರಾರಂಭದ ದಿನಾಂಕ: 16 ಆಗಸ್ಟ್ 2025

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 8 ಸೆಪ್ಟೆಂಬರ್ 2025

ಪ್ರಿಲಿಮ್ಸ್ ಪರೀಕ್ಷೆ: ಅಕ್ಟೋಬರ್ 3, 2025 (ತಾತ್ಕಾಲಿಕ)

ಮೇನ್ಸ್ ಪರೀಕ್ಷೆ: ನವೆಂಬರ್ 8, 2025 (ತಾತ್ಕಾಲಿಕ)

ಕಾಲ್ ಲೆಟರ್ ಡೌನ್‌ಲೋಡ್: ಪರೀಕ್ಷೆಗೆ 7 ದಿನಗಳ ಮೊದಲು

ಇದನ್ನೂ ಓದಿ: Free Health Checkup-ಬಿಪಿಎಲ್ ಕಾರ್ಡದಾರರಿಗೆ ಗುಡ್ ನ್ಯೂಸ್!ರಾಜ್ಯ ಸರ್ಕಾರದಿಂದ ಉಚಿತ ಯೋಜನೆ ಪ್ರಕಟ!

Who Can Apply-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ‍ ಅಭ್ಯರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ಅಸಿಸ್ಟೆಂಟ್ ಆಡ್ಮಿನಿಸ್ಟ್ರೇಟಿವ್ ಆಫೀಸರ್ (AAO)-ಜನರಲಿಸ್ಟ್: ಅಭ್ಯರ್ಥಿಯು 21 ರಿಂದ 30 ವರ್ಷದ ಮಿತಿಯಲ್ಲಿರಬೇಕು. ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕ ಪದವಿಯನ್ನು ಹೊಂದಿರಬೇಕು.

ಅಸಿಸ್ಟೆಂಟ್ ಆಡ್ಮಿನಿಸ್ಟ್ರೇಟಿವ್ ಆಫೀಸರ್ (AAO)-ಸ್ಪೆಷಲಿಸ್ಟ್: ಈ ವಿಭಾಗದಲ್ಲಿ ಅಭ್ಯರ್ಥಿಗೆ 21 ರಿಂದ 32 ವಯಸ್ಸನ್ನು ಮೀರಿರಬಾರದು. ಸ್ನಾತಕ ಪದವಿ ಅಥವಾ CA ಫೈನಲ್ ಪರೀಕ್ಷೆ ಉತ್ತೀರ್ಣ ಆಗಿರಬೇಕು.

ಅಸಿಸ್ಟೆಂಟ್ ಇಂಜಿನಿಯರ್ (AE): ಈ ಹುದ್ದೆಗಳಿಗೆ ಕನಿಷ್ಟ 21 ವರ್ಷ ಹಾಗೂ 30 ವರ್ಷದ ಒಳಗಿರಬೇಕು. B.Tech/B.E. ಜೊತೆಗೆ ಕೆಲಸದ ಅನುಭವವನ್ನು ಹೊಂದಿರಬೇಕು.

ಇದನ್ನೂ ಓದಿ: Ambedkar Nigam subsidy-ಅಂಬೇಡ್ಕರ್ ನಿಗಮದಿಂದ ತರಕಾರಿ ಮಾರಾಟ ಮಳಿಗೆ ತೆರೆಯಲು ₹50,000 ಸಬ್ಸಿಡಿ!

What Are The Documnets Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕಡ್ಡಾಯವಾಗಿ ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಹೊಂದಿರಬೇಕು.

  • ಅಭ್ಯರ್ಥಿಯ ಆಧಾರ್ ಕಾರ್ಡ
  • ಅಭ್ಯರ್ಥಿಯ ಫೋಟೋ
  • ಅಭ್ಯರ್ಥಿಯ ಸಹಿ
  • ಅಭ್ಯರ್ಥಿಯ ಎಡಗೈ ಹೆಬ್ಬೆರಳ ಗುರುತು
  • ಕೈಬರಹದ ಘೋಷಣೆ
  • ಶೈಕ್ಷಣಿಕ ಪ್ರಮಾಣಪತ್ರಗಳು
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)

How To Apply Online Process-ಅರ್ಜಿಯನ್ನು ಸಲ್ಲಿಸುವ ವಿಧಾನ?

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಆನ್ಲೈನ್ ಮೂಲಕ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Sheep farming Subsidy-ಕುರಿ ಸಾಕಾಣಿಕೆಗೆ ಶೇ 50% ಸಬ್ಸಿಡಿ ಪಡೆಯಲು ಅವಕಾಶ!

Step-1: ಮೊದಲಿಗೆ ಈ ಲಿಂಕ್ ಮೆಲೆ Apply Now ಕ್ಲಿಕ್ ಮಾಡಿ ಅಧಿಕೃತ www.licindia.in ವೆಬ್ಸೈಟ್ ಗೆ ಭೇಟಿ ಮಾಡಬೇಕು.

Step-2: ವೆಬ್ಸೈಟ್ ಗೆ ಭೇಟಿ ಮಾಡಿದ ನಂತರ “Careers” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ತದನಂತರ “Click here for New Registration” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿದಾಗ ನೋಂದಣಿ ಸಂಖ್ಯೆ ಹಾಗೂ ಪಾಸ್‌ವರ್ಡ್ ಸಿದ್ದವಾಗುತ್ತದೆ.

Step-3: ಬಳಿಕ ಅಲ್ಲಿ ಕೇಳುವ ಎಲ್ಲಾ ವಿವರಗಳು ಹಾಗೂ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ನಂತರ ಅಲ್ಲಿ ಕೇಳಿರುವ ಶುಲ್ಕವನ್ನು ಪಾವತಿ ಮಾಡಿ ಅರ್ಜಿ ಫಾರ್ಮ್ ಮತ್ತು ಪಾವತಿ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Corteva Agriscience Scholarship-ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್ ನಡಿ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಭೇಟಿ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : Click Here

 

RELATED ARTICLES
- Advertisment -

Most Popular

Recent Comments