Saturday, July 19, 2025
No menu items!
HomeNewsAadhar Update-7 ವರ್ಷ ಮೀರಿದ ಮಕ್ಕಳಿಗೆ ಆಧಾರ್ ಕಾರ್ಡ ಬಯೋಮೆಟ್ರಿಕ್ ಕಡ್ಡಾಯ!

Aadhar Update-7 ವರ್ಷ ಮೀರಿದ ಮಕ್ಕಳಿಗೆ ಆಧಾರ್ ಕಾರ್ಡ ಬಯೋಮೆಟ್ರಿಕ್ ಕಡ್ಡಾಯ!

ಪ್ರಸ್ತುತ ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ ಎಂಬದು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಅತ್ಯಂತ ಅವಶ್ಯಕವಾದ ಗುರುತಿನ ಚೀಟಿಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India) 7 ವರ್ಷ ಮೀರಿದ ಮಕ್ಕಳಿಗೆ ಆಧಾರ್ ಕಾರ್ಡ ಬಯೋಮೆಟ್ರಿಕ್ ಅನ್ನು ಕಡ್ಡಾಯವಾಗಿ ಮಾಡಲು ಆದೇಶವನ್ನು ಹೊರಡಿಸಿದೆ.

ಈ ಆಧಾರ್ ಕಾರ್ಡ ಪ್ರಕ್ರಿಯೆಯು 5 ವರ್ಷದ ಒಳಗಿನ ಮಕ್ಕಳಿಗೆ ಡೆಮೊಗ್ರಾಫಿಕ್ ಮಾಹಿತಿಗೆ(Mandatory biometric update UIDAI) ಆಧಾರಿತವಾಗಿದ್ದರೂ, ಮಕ್ಕಳ ವಯಸ್ಸು 7 ವರ್ಷ ಮುಗಿದಾಗ ಬಯೋಮೆಟ್ರಿಕ್ ಮಾಹಿತಿಯನ್ನು ಹೊಸದಾಗಿ ಅಪ್ದೇಟ್ ಮಾಡುವುದು ಇದೀಗ ಕಡ್ಡಾಯವಾಗಿದ್ದು, ಈ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ಆಧಾರ್ ಕಾರ್ಡ ಅನ್ನು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Free Hostel Application-ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ!

ಈ ಲೇಖನದಲ್ಲಿ ಆಧಾರ್ ಬಯೋಮೆಟ್ರಿಕ್ ಏಕೆ ಕಡ್ಡಾಯ? ಅಪ್ದೇಟ್ ಮಾಡಲು ಶುಲ್ಕದ ವಿವರಗಳು? ಆಧಾರ್ ಅಪ್‌ಡೇಟ್ ಮಾಡದಿದ್ದರೆ ಏನಾಗುತ್ತದೆ? ಅಪ್‌ಡೇಟ್ ಮಾಡುವುದು ಹೇಗೆ?ಆಧಾರ್ ಕಾರ್ಡ ಅನ್ನು ಎಲ್ಲಿ ಅಪ್‌ಡೇಟ್ ಮಾಡಬಹುದು? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ನಮ್ಮ ನ್ಯೂಸ್ ಬಾಟ್ ಮಿತ್ರರೊಂದಿಗೆ ಹಂಚಿಕೊಳ್ಳಲಾಗಿದೆ.

Why is it mandatory to update biometrics-ಕಡ್ಡಾಯವಾಗಿ ಬಯೋಮೆಟ್ರಿಕ್ ಏಕೆ ಅಪ್‌ಡೇಟ್ ಮಾಡಬೇಕು?

ಆಧಾರ್ ಕಾಯ್ದೆ 2016 ರ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆಧಾರ್ ದಾಖಲಾತಿಯ ಸಮಯದಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ಅಂದರೆ ಬೆರಳಚ್ಚು, ಕಣ್ಣು ಸ್ಕ್ಯಾನ್ ಫೋಟೋ ಗಳಿಗೆ ಮಕ್ಕಳು ಸಹಕರಿಸುವುದಿಲ್ಲ,ಆದರೆ ಮಗು 5 ವರ್ಷವನ್ನು ತಲುಪಿದ ನಂತರ, ಈ ಬಯೋಮೆಟ್ರಿಕ್ ಮಾಹಿತಿಯನ್ನು ಕಡ್ಡಾಯವಾಗಿ ನವೀಕರಿಸಬೇಕು.

ಈ ಪ್ರಕ್ರಿಯೆಗೆ “ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್” (Mandatory Biometric Update – MBU) ಎಂದು ಕರೆಯಲಾಗುತ್ತದೆ. ಹಾಗೆಯೇ ಮಗು 7 ವರ್ಷ ಮೀರಿದ ನಂತರವೂ ಈ ಬಯೋಮೆಟ್ರಿಕ್ ಅಪ್‌ಡೇಟ್ ಮಾಡದೇ ಇದ್ದರೆ, ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ ಎಂದು UIDAI ಘೋಷಿಸಿದೆ.

ಇದನ್ನೂ ಓದಿ: PM Dhan Dhanya Yojana-ಕೇಂದ್ರದಿಂದ ಪಿಎಂ ಧನ್ ಧಾನ್ಯ ಕೃಷಿ ನೂತನ ಯೋಜನೆ ಜಾರಿ!

Fee Details for Aadhaar Update-ಆಧಾರ್ ಅಪ್ದೇಟ್ ಮಾಡಲು ಶುಲ್ಕದ ವಿವರ:

ಆಧಾರ್ ಬಯೋಮೆಟ್ರಿಕ್ ಅಪ್ದೇಟ್ ಮಾಡಲು 5 ರಿಂದ 7 ವರ್ಷದ ಒಳಗಿನ ಮಕ್ಕಳಿಗೆ ಉಚಿತವಾದ ಸೌಲಭ್ಯವಿರುತ್ತದೆ.

7 ವರ್ಷ ಮೀರಿದ ಮಕ್ಕಳಿಗೆ ಬಯೋಮೆಟ್ರಿಕ್ ಅಪ್‌ಡೇಟ್‌ ಮಾಡಲು 100 ರೂ. ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

What happens if Aadhaar is not updated-ಆಧಾರ್ ಅಪ್‌ಡೇಟ್ ಮಾಡದಿದ್ದರೆ ಏನಾಗುತ್ತದೆ?

ನಿಮ್ಮ ಮಕ್ಕಳು 7 ವರ್ಷವನ್ನು ಮೀರಿದ ನಂತರ ಆಧಾರ್ ಬಯೋಮೆಟ್ರಿಕ್ ಡೇಟಾವನ್ನು ಅಪ್ದೇಟ್ ಮಾಡದೆ ಇದ್ದರೆ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ. ಈ ಆಧಾರ್ ಕಾರ್ಡ ರದ್ದಾದರೆ ಶಾಲಾ ಪ್ರವೇಶ, ವಿದ್ಯಾರ್ಥಿವೇತನ, ಪರೀಕ್ಷೆಗಳಲ್ಲಿ ನೋಂದಣಿ ಹಾಗೂ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಯೋಜನೆಗಳಂತಹ ಆಧಾರ್ ಸಂಬಂಧಿತ ಸೇವೆಗಳಲ್ಲಿ ಸೌಲಭ್ಯವನ್ನು ಪಡೆದುಕೊಳ್ಳೌ ಸಾಧ್ಯವಾಗುವುದಿಲ್ಲ. ಆದ್ದರಿಂದ ಪೋಷಕರು ಸಮಯಕ್ಕೆ ಸರಿಯಾಗಿ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವುದು ಅಗತ್ಯವಾಗಿದೆ.

ಇದನ್ನೂ ಓದಿ: Banking Job-ಸರ್ಕಾರಿ ಬ್ಯಾಂಕ್‌ಗಳಲ್ಲಿ 6,215 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

aadharupdate

ಇದನ್ನೂ ಓದಿ: Horticulture Department-MIDH ಯೋಜನೆಯಡಿ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!

What data needs to be updated-ಯಾವ ಡೇಟಾವನ್ನು ಅಪ್‌ಡೇಟ್ ಮಾಡಬೇಕು?

ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್(MBU)ಪ್ರಕ್ರಿಯೆಯಲ್ಲಿ ಈ ಕೆಳಗಿನ ಬಯೋಮೆಟ್ರಿಕ್ ಡೇಟಾವನ್ನು ಅಪ್‌ಡೇಟ್ ಮಾಡಬೇಕು

ಬೆರಳಚ್ಚು (10 ಬೆರಳುಗಳು)
ಕಣ್ಣಿನ ಸ್ಕ್ಯಾನ್ (ಎರಡೂ ಕಣ್ಣುಗಳ ಐರಿಸ್ ಸ್ಕ್ಯಾನ್)
ಫೋಟೋ (ಮಗುವಿನ ಇತ್ತೀಚಿನ ಫೋಟೋ)

How to update Aadhaar-ಆಧಾರ್ ಅಪ್‌ಡೇಟ್ ಮಾಡುವುದು ಹೇಗೆ?

ನಿಮ್ಮ ಮಕ್ಕಳ ಆಧಾರ್ ಅಪ್ಡೇಟ್ ಅನ್ನು ಮಾಡಲು ಈ ಕೆಳಗೆ ತಿಳಿಸಿರುವ 2 ವಿಧಾನಗಳಿಂದ ನವೀಕರಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Scholorship Application-NEET ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಪೋಷಕರು ನಿಮ್ಮ ಮಕ್ಕಳೊಂದಿಗೆ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಆಧಾರ್ ಕಾರ್ಡ ನೊಂದಿಗೆ ನೇರವಾಗಿ ಭೇಟಿ ಮಾಡಿ ಆಧಾರ್ ಬಯೋಮೆಟ್ರಿಕ್ ಅನ್ನು ಅಪ್‌ಡೇಟ್ ಮಾಡಬಹುದು. ಅಥವಾ ಪ್ರಸ್ತುತ ಅಧಿಕೃತ https://uidai.gov.in ವೆಬ್ಸೈಟ್ ಗೆ ಭೇಟಿ ಮಾಡಿ ಆನ್ಲೈನ್ ಮೂಲಕ ಆಧಾರ್ ಬಯೋಮೆಟ್ರಿಕ್ ಮಾಡಲು ಅವಕಾಶವಿರುತ್ತದೆ.

For More Information-ಇತರೆ ಮಾಹಿತಿಗಾಗಿ:

ಉಚಿತ ಅಪ್‌ಡೇಟ್ ಸೌಲಭ್ಯ: UIDAI ಜೂನ್ 14, 2026 ರವರೆಗೆ ಆಧಾರ್ ವಿವರಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಅವಕಾಶ ನೀಡಿದೆ. ಇದಕ್ಕಾಗಿ myaadhaar.uidai.gov.in ಪೋರ್ಟಲ್‌ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Ration Card-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

RELATED ARTICLES
- Advertisment -

Most Popular

Recent Comments