Saturday, July 19, 2025
No menu items!
HomeAgriculturePM Dhan Dhanya Yojana-ಕೇಂದ್ರದಿಂದ ಪಿಎಂ ಧನ್ ಧಾನ್ಯ ಕೃಷಿ ನೂತನ ಯೋಜನೆ ಜಾರಿ!

PM Dhan Dhanya Yojana-ಕೇಂದ್ರದಿಂದ ಪಿಎಂ ಧನ್ ಧಾನ್ಯ ಕೃಷಿ ನೂತನ ಯೋಜನೆ ಜಾರಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2025-2026 ನೇ ಸಾಲಿನಿಂದ 100 ಜಿಲ್ಲೆಗಳಲ್ಲಿ(PM Dhan Dhanya Yojana) “ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ”ಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯು ಕೃಷಿ ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಯಾಗಿದೆ. ಇದರ ಅಡಿಯಲ್ಲಿ ಒಟ್ಟು 1.7 ಕೋಟಿ ರೈತರಿಗೆ ಪ್ರಯೋಜನವನ್ನು ನೀಡಲಾಗಿದೆ.

ಈ ಯೋಜನೆಯು ಪ್ರಮುಖವಾಗಿ ಭಾರತೀಯ ಕೃಷಿ ಕ್ಷೇತ್ರವನ್ನು ಆಧುನಿಕಗೊಳಿಸಿ,(Improved Irrigation Facilities)ರೈತರ ಆದಾಯವನ್ನು ಹೆಚ್ಚಿಸಿ ಹಾಗೂ ಆಹಾರ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಮಹತ್ವಾಕಾಂಕ್ಷಿ ಯೋಜನೆ ಎಂದರೆ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ.

ಇದನ್ನೂ ಓದಿ: Banking Job-ಸರ್ಕಾರಿ ಬ್ಯಾಂಕ್‌ಗಳಲ್ಲಿ 6,215 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

“ಧನ್” ಅಂದರೆ ಹಣ, “ಧಾನ್ಯ” ಅಂದರೆ ಧಾನ್ಯ/ಅನ್ನ – ಈ ಯೋಜನೆಯ ಹೆಸರಿನಲ್ಲಿಯೇ ಕೃಷಿಕರಿಗೆ ಆರ್ಥಿಕ(Farmers Benefited)ಸಮೃದ್ಧಿ ಮತ್ತು ಧಾನ್ಯ ಉತ್ಪಾದನೆ ಹೆಚ್ಚಿಸುವ ಉದ್ದೇಶವನ್ನು ಈ ಯೋಜನೆಯು ವ್ಯಕ್ತಪಡಿಸುತ್ತದೆ.

ಈ ಯೋಜನೆಯು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಯನ್ನು ಹೆಚ್ಚಿಸುವುದಲ್ಲದೆ, ಈ ಯೋಜನೆಯಡಿ ಭಾರತದೆಲ್ಲೆಡೆ ಸಾವಿರಾರು ರೈತರು ಸಹಾಯ ಪಡೆಯುತ್ತಿದ್ದು, 1.7 ಕೋಟಿ ರೈತರು ಈಗಾಗಲೇ ಲಾಭ ಪಡೆದಿದ್ದಾರೆ ಎಂಬುದು ಈ ಯೋಜನೆಯ ಯಶಸ್ಸಿನ ಪ್ರಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ರೈತರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಂಕಲ್ಪಿತವಾಗಿದೆ.

ಇದನ್ನೂ ಓದಿ: Horticulture Department-MIDH ಯೋಜನೆಯಡಿ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!

Pradhan Mantri Dhan Dhanya yojana-ಏನಿದು ಧನ-ಧಾನ್ಯ ಕೃಷಿ ಯೋಜನೆ?

“ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ” ಅಡಿಯಲ್ಲಿ, 2025-26ರ ಬಜೆಟ್ ಘೋಷಣೆಯಂತೆ 100 ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಯೋಜನೆಯು ರೂಪುಗೊಳ್ಳಲಾಗಿದೆ. ಇದರ ಮುಖ್ಯ ಗುರಿಗಳಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಬೆಳೆ ವೈವಿಧ್ಯತೆ ಬೆಳೆಸುವುದು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸುವುದು ಸೇರಿವೆ. ಜೊತೆಗೆ, ಪಂಚಾಯತ್ ಹಾಗೂ ಹೋಬಳಿ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣಾ ಸೌಲಭ್ಯಗಳನ್ನು ವಿಸ್ತರಿಸುವುದು, ನೀರಾವರಿ ವ್ಯವಸ್ಥೆಯನ್ನು ಸುಧಾರಿಸುವುದು ಹಾಗೂ ರೈತರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಸಾಲ ಲಭ್ಯತೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕ್ರಮಗಳು ಕೈಗೊಳ್ಳಲಾಗುತ್ತಿವೆ.

Purpose Of This Scheme-ಯೋಜನೆಯ ಉದ್ದೇಶಗಳೇನು?

ರೈತರ ಆದಾಯ ಹೆಚ್ಚಿಸುವುದು:

ಕೃಷಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕೃಷಿ ಮೂಲಸೌಕರ್ಯ ಅಭಿವೃದ್ಧಿ:

ಶೇಖರಣೆ, ಸಂಸ್ಕರಣೆ, ಸಾರಿಗೆ, ಮಾರುಕಟ್ಟೆ ವ್ಯವಸ್ಥೆ ಮತ್ತು ಇತರ ಮೂಲಸೌಕರ್ಯಗಳನ್ನು ಗ್ರಾಮೀಣ ಮಟ್ಟದಲ್ಲಿ ಸುಧಾರಿಸುವುದು.

ಇದನ್ನೂ ಓದಿ: Scholorship Application-NEET ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಆಹಾರ ಭದ್ರತೆ ಮತ್ತು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು:

ದೇಶದ ಆಹಾರ ಭದ್ರತೆಯನ್ನು ಬಲಪಡಿಸುವಂತೆ ಧಾನ್ಯ ಸಂಗ್ರಹ ಸಾಮರ್ಥ್ಯವನ್ನು ಈ ಯೋಜನೆಯು ಹೆಚ್ಚಿಸುವುದು.

ರೈತರಿಗೆ ತಂತ್ರಜ್ಞಾನ ಮತ್ತು ತರಬೇತಿ:

ನವೀನ ತಂತ್ರಜ್ಞಾನ, ಜೈವಿಕ ಕೃಷಿ, ಸಮರ್ಥ ನೀರಾವರಿ ಮತ್ತು ಇತರೆ ಉತ್ತಮ ಕೃಷಿ ವಿಧಾನಗಳ ಬಗ್ಗೆ ತರಬೇತಿ ನೀಡುವುದು.

ಬೇಸಿಗೆ ಕಾಲದಲ್ಲಿ ಆಹಾರ ಧಾನ್ಯ ಲಭ್ಯತೆ:

ಪ್ರತಿ ಋತುವಿನಲ್ಲಿ ಆಹಾರ ಧಾನ್ಯಗಳ ಲಭ್ಯತೆಯನ್ನು ಖಚಿತಪಡಿಸಿ ಬೆಲೆ ಸ್ಥಿರತೆ ಕಾಯ್ದುಕೊಳ್ಳುವುದು.

ಗ್ರಾಮೀಣ ಉದ್ಯೋಗ ಸೃಷ್ಟಿ:

ಕೃಷಿ ಸಂಬಂಧಿತ ಚಟುವಟಿಕೆಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.

ಇದನ್ನೂ ಓದಿ: Ration Card-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

pm yojane

ಇದನ್ನೂ ಓದಿ: Muskaan Scholarship-ಪ್ರೌಢ ಶಾಲಾ & ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!

ಮೌಲ್ಯವರ್ಧಿತ ಉತ್ಪಾದನೆ:

ಧಾನ್ಯಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ, ರೈತರಿಗೆ ಹೆಚ್ಚಿನ ಮಾರುಕಟ್ಟೆ ಬೆಲೆ ದೊರೆಯುವಂತೆ ಮಾಡುವುದು.

Where To Apply-ಈ ಯೋಜನೆಯಡಿ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಅರ್ಜಿಗೆ ಸಂಬಂದಿಸಿದ ಅಗತ್ಯ ದಾಖಲೆಗಳ ಸಮೇತ ನೆರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Kuri Sakanike-ಉಚಿತ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

Documents Required-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳು?

ಅರ್ಜಿದಾರ ಅಭ್ಯರ್ಥಿಯ ಆಧಾರ್ ಕಾರ್ಡ/Aadhar Card

ಭೂಮಿಯ ದಾಖಲೆಗಳು ಪಹಣಿ/RTC

ಬ್ಯಾಂಕ್ ಖಾತೆ ಪುಸ್ತಕ/Bank Passbook

ನಿವಾಸ ದೃಢೀಕರಣ ಪತ್ರ/Residental Adreess

ಫೋಟೋ/Photocopy

ಮೊಬೈಲ್ ಸಂಖ್ಯೆ/Mobile number

ಇದನ್ನೂ ಓದಿ: Mohan T Advani Scholorship-ಬ್ಲೂ ಸ್ಟಾರ್ ಫೌಂಡೇಶನ್‌ನ ವತಿಯಿಂದ 1ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

RELATED ARTICLES
- Advertisment -

Most Popular

Recent Comments