IBPS ಬ್ಯಾಂಕ್ ನೇಮಕಾತಿ 2025 ರ ಅಡಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್(Govt Bank Jobs India) ಪರ್ಸನಲ್ ಸೆಲೆಕ್ಷನ್ (IBPS) 2025ರ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು,11 ಪ್ರಮುಖ ಸರ್ಕಾರಿ ಬ್ಯಾಂಕ್ ಗಳಲ್ಲಿ 6215 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ವತಿಯಿಂದ ದೇಶದ(IBPS Application Online)ವಿವಿಧ ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಟ್ಟು 6,215 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದ್ದು, ಈ ಹುದ್ದೆಗಳು ಮುಖ್ಯವಾಗಿ ಪ್ರೊಬೇಶನರಿ ಅಧಿಕಾರಿ (PO) ಮತ್ತು ಸ್ಪೆಷಲಿಸ್ಟ್ ಅಧಿಕಾರಿ (SO) ಹುದ್ದೆಗಳಾಗಿವೆ. ಈ ನೇಮಕಾತಿ ಪ್ರಕ್ರಿಯೆಯು IBPS Clerk (CWE CLERKS-XIV) ಪರೀಕ್ಷೆಯ ಮೂಲಕ ನಡೆಯಲಿದೆ.
ಇದನ್ನೂ ಓದಿ: Horticulture Department-MIDH ಯೋಜನೆಯಡಿ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!
ಪ್ರಸ್ತುತ ಈ ಲೇಖನದಲ್ಲಿ ಯಾವೆಲ್ಲ ಹುದ್ದೆಗಳಿಗೆ ಎಷ್ಟು ಹುದ್ದೆಗಳಿಗೆ ನೇಮಕಾತಿಗೆ ಅವಕಾಶವಿರುತ್ತದೆ? ಯಾವ ಯಾವ ಬ್ಯಾಂಕ್ ಗಳಲ್ಲಿ ಈ ನೇಮಕಾತಿಯು ಲಭ್ಯವಿದೆ? ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವೆಷ್ಟು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸಲು ಪ್ರಮುಖ ದಿನಾಂಕಗಳು? ಇತರೆ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
Who Can Apply-ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು?
ಅರ್ಜಿದಾರ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.
ಅರ್ಜಿದಾರರ ವಯೋಮಿತಿಯು 20 ರಿಂದ 30 ವರ್ಷಗಳ ವಯೋಮಿತಿಯವರಾಗಿರಬೇಕು.
ಅರ್ಜಿಯನ್ನು ಸಲ್ಲಿಸಲು ಸಂಬಂಧಿತ ಕ್ಷೇತ್ರದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಅರ್ಜಿದಾರ ಅಭ್ಯರ್ಥಿಗೆ ಕಂಪ್ಯೂಟರ್‌ದ ಮೂಲ ಜ್ಞಾನವನ್ನು ಹೊಂದಿರಬೇಕು.
ಇದನ್ನೂ ಓದಿ: Scholorship Application-NEET ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!
ಒಟ್ಟು ಎಷ್ಟು ಹುದ್ದೆಗಳಿಗೆ ಅವಕಾಶವಿದೆ, ಹುದ್ದೆಗಳ ಪ್ರಮುಖ ವಿವರಗಳು?
ಪ್ರೊಬೇಶನರಿ ಅಧಿಕಾರಿ (PO) / ಮ್ಯಾನೇಜ್ಮೆಂಟ್ ಟ್ರೇನಿ (MT) – 5,208 ಹುದ್ದೆಗಳು
ಸ್ಪೆಷಲಿಸ್ಟ್ ಅಧಿಕಾರಿ (SO) – 1,007 ಹುದ್ದೆಗಳು
ಹುದ್ದೆಯ ಹೆಸರು: ಬ್ಯಾಂಕ್ ಕ್ಲರ್ಕ್ (Clerk)
ಯಾವೆಲ್ಲ ಬ್ಯಾಂಕ್ ಗಳಲ್ಲಿ ಅವಕಾಶವಿದೆ?
ಬ್ಯಾಂಕ್‌ಗಳು: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (BOB), ಬ್ಯಾಂಕ್ ಆಫ್ ಇಂಡಿಯಾ (BOI), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಇತ್ಯಾದಿ 11ಕ್ಕೂ ಹೆಚ್ಚು ರಾಷ್ಟ್ರೀಯ ಬ್ಯಾಂಕ್‌ಗಳು.
Important Dates-ಅರ್ಜಿಯನ್ನು ಸಲ್ಲಿಸಲು ಪ್ರಮುಖ ದಿನಾಂಕಗಳು:
ಅರ್ಜಿಗಳ ಸ್ವೀಕಾರ ಆರಂಭ: 01 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಜುಲೈ 2025
ಪ್ರಿಲಿಮಿನರಿ ಪರೀಕ್ಷೆ: 17, 23, 24 ಆಗಸ್ಟ್ 2025
ಮೇನ್ ಪರೀಕ್ಷೆ: 12 ಅಕ್ಟೋಬರ್ 2025
ಇದನ್ನೂ ಓದಿ: Ration Card-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!
Application Fee-ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್: ₹850
ಎಸ್.ಸಿ/ಎಸ್.ಟಿ/ಪಿಡಬ್ಲ್ಯೂಡಿ: ₹175
Selection Method- ಆಯ್ಕೆ ಪ್ರಕ್ರಿಯೆ:
IBPS Clerk ನೇಮಕಾತಿಯು ಮೂರು ಹಂತಗಳಲ್ಲಿ ನಡೆಯುತ್ತದೆ:
1) ಪ್ರಾಥಮಿಕ ಪರೀಕ್ಷೆ (Preliminary Examination):
ಈ ಪರೀಕ್ಷೆಯು ಆನ್‌ಲೈನ್‌ನಲ್ಲಿ ನಡೆಯುತ್ತದೆ
ಈ ಹಂತವು ಪತ್ರಿಕಾ ಪ್ರಕಾರ ಅರ್ಹತೆ ಪರೀಕ್ಷೆ ಆಗಿದ್ದು, ಮುಖ್ಯ ಪರೀಕ್ಷೆಗೆ ಅರ್ಹರಾಗಲು ಇದನ್ನು ಪಾಸಾಗಬೇಕು.
ಒಟ್ಟು: 100 ಅಂಕಗಳು, 1 ಗಂಟೆ ಅವಧಿ
ವಿಷಯಗಳು:
English Language – 30 ಪ್ರಶ್ನೆ – 30 ಅಂಕ
Numerical Ability – 35 ಪ್ರಶ್ನೆ – 35 ಅಂಕ
Reasoning Ability – 35 ಪ್ರಶ್ನೆ – 35 ಅಂಕ
ಪ್ರತಿಯೊಂದು ವಿಭಾಗಕ್ಕೂ ವಿಭಿನ್ನ ಸಮಯದ ಮಿತಿಯಿರುತ್ತದೆ.
ತಪ್ಪು ಉತ್ತರಕ್ಕೆ ಷರತ್ತುಬದ್ಧ ಮೈನಸ್ ಮಾರ್ಕ್ ಇರಲಿದೆ (0.25)
ಇದನ್ನೂ ಓದಿ: Muskaan Scholarship-ಪ್ರೌಢ ಶಾಲಾ & ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!
2) ಮುಖ್ಯ ಪರೀಕ್ಷೆ (Main Examination):
ಪ್ರಮುಖ ಆಯ್ಕೆಯ ಹಂತ
ಒಟ್ಟು: 200 ಅಂಕಗಳು, 160 ನಿಮಿಷಗಳ ಅವಧಿ
ವಿಷಯಗಳು:
General/ Financial Awareness – 50 ಪ್ರಶ್ನೆ – 50 ಅಂಕ
General English – 40 ಪ್ರಶ್ನೆ – 40 ಅಂಕ
Reasoning Ability & Computer Aptitude – 50 ಪ್ರಶ್ನೆ – 60 ಅಂಕ
Quantitative Aptitude – 50 ಪ್ರಶ್ನೆ – 50 ಅಂಕ
ಈ ಹಂತದ ಅಂಕಗಳನ್ನು ಆಧಾರವಿಟ್ಟುಕೊಂಡೇ ಅಂತಿಮ ಆಯ್ಕೆ ನಿರ್ಧರಿಸಲಾಗುತ್ತದೆ
3) ದಾಖಲೆ ಪರಿಶೀಲನೆ (Document Verification):
ಮುಖ್ಯ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗಾಗಿ ಆಹ್ವಾನಿಸಲಾಗುತ್ತದೆ.
ದಾಖಲೆಗಳ ಪರಿಶೀಲನೆಯ ನಂತರ, ಅಂತಿಮ ನೇಮಕಾತಿಗೆ ಆಯ್ಕೆಯಾಗುತ್ತಾರೆ.
ಇದನ್ನೂ ಓದಿ: Kuri Sakanike-ಉಚಿತ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

ಇದನ್ನೂ ಓದಿ: Mohan T Advani Scholorship-ಬ್ಲೂ ಸ್ಟಾರ್ ಫೌಂಡೇಶನ್‌ನ ವತಿಯಿಂದ 1ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!
Documents- ಅರ್ಜಿಯನ್ನು ಸಲ್ಲಿಸಲು ಪ್ರಮುಖ ದಾಖಲಾತಿಗಳು:
- ಅಭ್ಯರ್ಥಿಯ ಆಧಾರ್ ಕಾರ್ಡ/Aadhar card
- ಪಾನ್ ಕಾರ್ಡ/Pan card
- ಪೋಟೋ/Photo
- ಅಂಕಪಟ್ಟಿ/Marks Card
- ಶಾಲಾ ವ್ಯಾಸಂಗ ಪ್ರಮಾಣ ಪತ್ರ/Study Certificate
- ನಿವಾಸ ದೃಡೀಕರಣ
- ಮೊಬೈಲ್ ನಂಬರ್/Mobile Number
ಇದನ್ನೂ ಓದಿ: Infosys Foundation Scholarship-ಇನ್ಫೋಸಿಸ್ ಫೌಂಡೇಶನ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!
How To Apply-ಅರ್ಜಿಯನ್ನು ಸಲ್ಲಿಸುವ ವಿಧಾನ:
Step-1: ಮೊದಲಿಗೆ ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ IBPS ವೆಬ್ಸೈಟ್ ಗೆ ಭೇಟಿ ಮಾಡಬೇಕು.
Step-2: ನಂತರ ಅಭ್ಯರ್ಥಿಯು ಅದೇ ಪೇಜ್ ನಲ್ಲಿ “CRP Specialist Officers” ನ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
Step-3: ತದನಂತರ ಅಲ್ಲಿ ಕೇಳಿರುವ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅರ್ಜಿಗೆ ಸಂಬದಿಸಿದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
Step-4: ನಂತರ ಪರೀಕ್ಷೆಗೆ ಸಂಬಂದಿಸಿದ ಅರ್ಜಿ ಶುಲ್ಕ ವನ್ನು ಪಾವತಿಸಿದಾಗ ಅರ್ಜಿ ಸಲ್ಲಿಕೆಯು ಮುಕ್ತಾಯಗೊಳ್ಳುತ್ತದೆ.
ಇದನ್ನೂ ಓದಿ: PMMVY Yojana-ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ₹11,000 ರೂ ಸಹಾಯಧನ!
For More Information:ಹೆಚ್ಚಿನ ಮಾಹಿತಿಗಾಗಿ IBPS ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: Click Here