ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಆಸ್ತಿಗೆ(Free land records online)ಸಂಭದಿಸಿದ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ತಮ್ಮ ಮೊಬೈಲ್ ನಲ್ಲಿಯೇ ಉಚಿತವಾಗಿ ಅತೀ ಸುಲಭವಾಗಿ ಪಡೆದುಕೊಳ್ಳಲು ಇ-ಸ್ವತ್ತು ಎಂಬ ಡಿಜಿಟಲ್ ವೇದಿಕೆಯನ್ನು ರೂಪಿಸಲಾಗಿದ್ದು ಇ-ಸ್ವತ್ತು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆಸ್ತಿ ಸಂಬಂಧಿತ ವಂಚನೆಯನ್ನು ತಡೆಗಟ್ಟುವುದು ಮತ್ತು ಗ್ರಾಮೀಣ ಆಸ್ತಿಗಳ ಮಾಲೀಕತ್ವದ(E-Swattu application)ವಿವರಗಳನ್ನು ಕಾನೂನುಬದ್ಧವಾಗಿ ದೃಢೀಕರಿಸಲಾಗುವುದು. ಈ ಸೇವೆಯನ್ನು ಪಡೆಯಲು ಕೇವಲ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ಮತ್ತು ಆಸ್ತಿಯಂತಹ ಮೂಲಭೂತ ಮಾಹಿತಿಯನ್ನು ತಿಳಿಸಿದಾಗ ಇದರಿಂದ ಆಸ್ತಿ ತೆರಿಗೆ, ಮಾಲೀಕತ್ವ, ಮತ್ತು ಇತರ ವಿವರಗಳನ್ನು ತಕ್ಷಣವೇ ತಿಳಿಯಲು ಸಹಾಯವಾಗುತ್ತದೆ.
ಇದನ್ನೂ ಓದಿ: Free Eye Checkup-ಆಶಾಕಿರಣ ಯೋಜನೆಯಡಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ!
ಪ್ರಸ್ತುತ ಈ ಲೇಖನದ ಮೂಲಕ, ಇ-ಸ್ವತ್ತು ದಾಖಲೆಗಳನ್ನು ನಿಮ್ಮ ಮೊಬೈಲ್‌ನಲ್ಲಿ ಉಚಿತವಾಗಿ ಪಡೆಯುವ ವಿಧಾನ ಹೇಗೆ? ಅದಕ್ಕೆ ಸಂಭಂದಿಸಿದ ದಾಖಲಾತಿಗಳೇನು? ಇ-ಸ್ವತ್ತು ಯಾವುದಕ್ಕೆ ಅಗತ್ಯ? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Information About E swattu-ಇ-ಸ್ವತ್ತು ಎಂದರೇನು?
ಇ-ಸ್ವತ್ತು ಕರ್ನಾಟಕ ಎಂಬುದು ಗ್ರಾಮೀಣ ಪ್ರದೇಶಗಳ ಆಸ್ತಿಗಳ ಮಾಲೀಕತ್ವದ ವಿವರಗಳನ್ನು ಡಿಜಿಟಲ್ ಸ್ವರೂಪದಲ್ಲಿ ನಿರ್ವಹಿಸಲು ರಚಿತವಾದ ಆನ್‌ಲೈನ್ ವೇದಿಕೆಯಾಗಿದೆ. ಇದನ್ನು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಿರ್ವಹಣೆ ಮಾಡುತ್ತದೆ.
ಈ ಪೋರ್ಟಲ್‌ನ ಪ್ರಮುಖ ಗುರಿಯೆಂದರೆ ಆಸ್ತಿಗೆ ಸಂಬಂಧಿಸಿದ ವಂಚನೆ ಮತ್ತು ದಾಖಲೆ ಕೃತಿಗಳನ್ನು ತಡೆಗಟ್ಟುವುದು, ಆಸ್ತಿ ನೋಂದಣಿಯನ್ನು ಸರಳೀಕರಣಗೊಳಿಸುವುದು, ಹಾಗೂ ಗ್ರಾಮೀಣ ಆಸ್ತಿಗಳ ಮಾಹಿತಿಯನ್ನು ಪಾರದರ್ಶಕವಾಗಿ ಒದಗಿಸುವುದು. ಈ ವೇದಿಕೆಯ ಮೂಲಕ ಆಸ್ತಿ ಮಾಲೀಕರು ತಮ್ಮ ಇ-ಖಾತೆ (E-Khata), ಫಾರ್ಮ್ 9, ಫಾರ್ಮ್ 11, ಮತ್ತು ಇತರ ಅಗತ್ಯ ದಾಖಲೆಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Agri Diploma Admission-ಕೃಷಿ ಡಿಪ್ಲೊಮಾ ವಿಶ್ವವಿದ್ಯಾಲಯದಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ!
Feature Of this Scheme-ಇ-ಸ್ವತ್ತಿನ ಪ್ರಮುಖ ಮುಖ್ಯ ಲಕ್ಷಣಗಳು:
ಈ ಯೋಜನೆಯು ಆಸ್ತಿಯ ಕಾನೂನುಬದ್ಧ ಮಾಲೀಕತ್ವವನ್ನು ದೃಢೀಕರಿಸುತ್ತದೆ.
- ಆಸ್ತಿಯ ಒಡೆತನ, ಗಾತ್ರ, ಸ್ಥಳ, ಮತ್ತು ಇತರ ಭೌತಿಕ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಕೊಳ್ಳಲು ಸಹಾಯಕಾರಿಯಾಗಿದೆ.
- ಗ್ರಾಮ ಪಂಚಾಯಿತಿಗಳು, ನ್ಯಾಯಾಲಯಗಳು, ಮತ್ತು ಪಟ್ಟಣ ಯೋಜನಾ ಸಂಸ್ಥೆಗಳೊಂದಿಗೆ ಆಸ್ತಿ ವಿವರಗಳನ್ನು ಸುಲಭವಾಗಿ ಹಂಚಿಕೊಳ್ಳಲು ಅವಕಾಶವಿರುತ್ತದೆ.
- ಇದರ ಅಡಿ ಬರುವ ಎಲ್ಲಾ ದಾಖಲೆಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಡಿಜಿಟಲ್ ಸಹಿಯೊಂದಿಗೆ ಒದಗಿಸಲಾಗುತ್ತದೆ.
Important documents of the e-Asset Portal-ಇ-ಸ್ವತ್ತು ಪೋರ್ಟಲ್‌ನ ಪ್ರಮುಖ ದಾಖಲೆಗಳು?
ಇ-ಸ್ವತ್ತು ಪೋರ್ಟಲ್‌ನಲ್ಲಿನ ಎರಡು ಪ್ರಮುಖ ದಾಖಲೆಗಳಾದ ಫಾರ್ಮ್ 9 ಮತ್ತು ಫಾರ್ಮ್ 11 ಲಭ್ಯವಿವೆ. ಈ ದಾಖಲೆಗಳು ಗ್ರಾಮೀಣ ಆಸ್ತಿಗಳ ನೋಂದಣಿ, ತೆರಿಗೆ ಪಾವತಿ, ಮತ್ತು ಮಾರಾಟ/ಖರೀದಿಗೆ ಮಾಡುವವರಿಗೆ ಅತೀ ಅಗತ್ಯಕರವಾಗಿದೆ.
ಇದನ್ನೂ ಓದಿ: Home Loan Schems-PMAY 2.0 ಯೋಜನೆಯಡಿ ₹ 2.50 ಲಕ್ಷ ಸಹಾಯಧನಕ್ಕೆ ಅರ್ಜಿ!
1) ಫಾರ್ಮ್ 9 (A ಖಾತೆ):
ಇದು ಕೃಷಿಯೇತರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಯಾಗಿದೆ.
ಗ್ರಾಮ ಪಂಚಾಯಿತಿಗಳು ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಬಜೆಟ್ ಮತ್ತು ಲೆಕ್ಕಪತ್ರ) ನಿಯಮಗಳು, 2006 (ರೂಲ್ 28, ತಿದ್ದುಪಡಿ ನಿಯಮಗಳು 2013) ಅಡಿಯಲ್ಲಿ ಫಾರ್ಮ್ 9 ಅನ್ನು ಒದಗಿಸುತ್ತವೆ.
ಆಸ್ತಿಯು ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಪ್ರಕಾರ ಕೃಷಿಯೇತರ ಆಸ್ತಿಯಾಗಿ ಪರಿವರ್ತನೆಗೊಂಡಿರಬೇಕು.
ಗ್ರಾಮಥಾನದ ಒಳಗಿರುವ ಆಸ್ತಿಯ ಸ್ಥಳವನ್ನು ತಹಸೀಲ್ದಾರ್ ಸ್ಕೆಚ್ ಮೂಲಕ ದೃಢೀಕರಿಸಿರಬೇಕು.
2) ಫಾರ್ಮ್ 11:
ಇದು ಕೃಷಿಯೇತರ ಆಸ್ತಿಗಳ ವಿವರಗಳನ್ನು ಒಳಗೊಂಡಿರುವ ದಾಖಲೆ.
ಆಸ್ತಿಯ ಒಡೆತನ, ವರ್ಗಾವಣೆ, ಉಡುಗೊರೆ, ಆನುವಂಶಿಕತೆ, ಮತ್ತು ಇತರ ಕಾನೂನು ವಿವರಗಳನ್ನು ದಾಖಲಿಸಲಾಗುತ್ತದೆ.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಲೆಕ್ಕಾಚಾರಕ್ಕೆ ಫಾರ್ಮ್ 11 ಅಗತ್ಯವಾಗಿದೆ.
ಇದನ್ನೂ ಓದಿ: E Khata-ಸರ್ಕಾರದಿಂದ ಮನೆ ಬಾಗಿಲಿಗೆ ಇ-ಖಾತಾ ವಿತರಿಸುವ ಯೋಜನೆ ಜಾರಿ!

ಇದನ್ನೂ ಓದಿ: Free Fodder cutter-ಪಶುಪಾಲನಾ ಇಲಾಖೆಯಿಂದ ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ!
Required Documents-ಇ-ಸ್ವತ್ತು ಪಡೆದುಕೊಳ್ಳಲು ಸಲ್ಲಿಸಬೇಕಾದ ಅಗತ್ಯ ದಾಖಲೇಗಳೇನು?
- ಅರ್ಜಿದಾರರ ಆಧಾರ್ ಕಾರ್ಡ
- ಅರ್ಜಿದಾರರು ಆಸ್ತಿಯ ಹತ್ತಿರ ಇರುವ ಫೋಟೋ
- ಆಸ್ತಿಯು ಜಂಟಿಯಾಗಿದ್ದರೆ ಅವರ ಆಧಾರ್ ಕಾರ್ಡ
- ಆಸ್ತಿ ತೆರಿಗೆ ಪಾವತಿ ರಶೀದಿ
- ವಿದ್ಯುತ್ ಬಿಲ್ ಪ್ರತಿ
- ಅರ್ಜಿದಾರರ ಫೋಟೋ
How To Apply-ಇ-ಸ್ವತ್ತು ಪಡೆಯುವ ವಿಧಾನ:
ಅರ್ಹ ಅರ್ಜಿದಾರರು ತಮ್ಮ ಮೊಬೈಲ್ ನಲ್ಲಿಯೇ ಇ-ಸ್ವತ್ತು ಪಡೆಯಲು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಇ-ಸ್ವತ್ತನ್ನು ಪಡೆಯಲು ಅವಕಾಶವಿರುತ್ತದೆ.
ಇದನ್ನೂ ಓದಿ: NLM Yojana-ಕೋಳಿ ಕುರಿ ಮೇಕೆ ಸಾಕಾಣಿಕೆಗೆ ಜಾನುವಾರು ಮಿಷನ್ ಯೋಜನೆಯಡಿ ₹25.00 ಲಕ್ಷ ಸಬ್ಸಿಡಿ!
Step-1: ಮೊದಲಿಗೆ ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
Step-2: ವೆಬ್ಸೈಟ್ ಅನ್ನು ಭೇಟಿ ಮಾಡಿದ ನಂತರ ಅದೆ ಪುಟದಲ್ಲಿ ಕಾಣುವ “Search Property/ ಆಸ್ತಿಗಳ ಶೋಧನೆ” ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ತದನಂತರ Form-9(ಮಾಲೀಕತ್ವ ದಾಖಲೆ) , Form-11(ಆಸ್ತಿ ಬಳಕೆಯ ವಿವರ), Surver Number, ಇದರಲ್ಲಿ ನಿಮಗೆ ಬೇಕಾದನ್ನು ಆಯ್ಕೆ ಮಾಡಬೇಕು.
Step-4: ನಂತರ ನಿಮ್ಮ District/ಜಿಲ್ಲೆ, Taluk/ತಾಲ್ಲೂಕು, Gram Panchayath/ಗ್ರಾಮ ಪಂಚಾಯತಿ, Village/ಹಳ್ಳಿ ಯನ್ನು ಆಯ್ಕೆ ಮಾಡಿದ ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಗ್ರಾಮದಲ್ಲಿನ ಆಸ್ತಿಗಳ ವಿವರದ ಪಟ್ಟಿ, ಮಾಲೀಕರ ಹೆಸರುಗಳನ್ನು ತೋರಿಸುತ್ತದೆ.
ಇದನ್ನೂ ಓದಿ: Uchita Holige Yantra-ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಇನ್ನು 2 ದಿನ ಬಾಕಿ!
Step-5: ಬಳಿಕ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿದಾಗ ಇ-ಸ್ವತ್ತನ್ನು ಡೌನ್ಲೊಡ್ ಮಾಡಿಕೊಳ್ಳಬಹುದು.
For More Information-ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ; Click Here