Monday, June 30, 2025
No menu items!
HomeAgricultureBele Vime-ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

Bele Vime-ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

2025-2026 ನೇ ಸಾಲಿನ ಬೆಳೆ ವಿಮೆ ಯೋಜನೆಯ ಅಡಿಯಲ್ಲಿ ತೋಟಗಾರಿಕೆ(Crop Insurance)ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಆಸಕ್ತಿಯಿರುವ ರೈತರು ತೋಟಗಾರಿಕೆ ಇಲಾಖೆ ಮತ್ತು ವಿಮಾ ಕಂಪನಿ ಸಹಯೋಗದಲ್ಲಿ ಅಡಿಕೆ, ಕಾಳುಮೆಣಸು,ದಾಳಿಂಬೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ಅರ್ಹ ರೈತರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹವಾಮಾನ ಪೇರಿಲು, ವಿಪತ್ತುಗಳು ಹಾಗೂ ಕೀಟ-ರೋಗಗಳಿಂದ ತೋಟಗಾರಿಕೆ(Horticulture Crop Insurance)ಬೆಳೆಗಳಿಗೆ ಸಂಭವಿಸಬಹುದಾದ ನಷ್ಟದಿಂದ ರೈತರನ್ನು ರಕ್ಷಿಸುವ ಉದ್ದೇಶದಿಂದ ತೋಟಗಾರಿಕೆ ಬೆಳೆ ವಿಮಾ ಯೋಜನೆಯನ್ನು ಪ್ರಾರಂಭ ಮಾಡಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಆಯ್ದ ಹಣ್ಣು, ತರಕಾರಿಗಳು, ಹೂಬೆಳೆ ಹಾಗೂ ಇತರ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Uchita Holige Yantra-ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಇನ್ನು 2 ದಿನ ಬಾಕಿ!

ಪ್ರಸ್ತುತ ಈ ಲೇಖನದಲ್ಲಿ ಬೆಳೆ ವಿಮೆ ಪ್ರಿಮಿಯಂ ಮೊತ್ತ ಪಾವತಿ ಮಾಡಾಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅದಕ್ಕೆ ಬೇಕಾದ ಅಗತ್ಯ ದಾಖಲೆಗಳಾವುವು? ಇನ್ನೂ ಹೆಚ್ಚಿನ ಸಂಪೂರ್ಣ ವಿವರಿಸಲಾಗಿದೆ. ಈ ಕೆಳಗೆ ತಿಳಿಸಿರುವ ಮಾಹಿತಿಯು ಉಪಯುಕ್ತ ಅನಿಸಿದಲ್ಲಿ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

How To Apply-ವಿಮೆ ಮಾಡಿಸಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ರೈತರು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ನಿಮ್ಮ ಹತ್ತಿರದಲ್ಲಿರುವ ಗ್ರಾಮ ಒನ್/ಕರ್ನಾಟಕ್ ಒನ್, CSC ಕೇಂದ್ರ ಅಥವಾ ನಿಮ್ಮ ಬ್ಯಾಂಕ್ ಖಾರೆಯಿರುವ ಶಾಖೆಗೆ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Karmika Card-ಕಾರ್ಮಿಕ ಮಂಡಳಿಯಿಂದ ಪ್ರತಿ ತಿಂಗಳಿಗೆ ರೂ ₹2000/- ಪಿಂಚಣಿ!

Required Documets-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು:

  • ರೈತರ ಆಧಾರ್ ಕಾರ್ಡ/Aadhar Card
  • ಆಧಾರ್ ಲಿಂಕ್ ಅಗಿರುವ ಬ್ಯಾಂಕ್ ಖಾತೆ ವಿವರ/Bank Information
  • ಜಮೀನಿನ ಪಹಣಿ/RTC
  • ವಿಮೆ ಪ್ರಿಮಿಯಂ ಮೊತ್ತ/Insurance premium amount
  • ಮೊಬೈಲ್ ನಂಬರ್/Mobile number

Adike Bele Vime-ಕೆಲವು ತೋಟಗಾರಿಕೆ ಬೆಳೆಗಳ ವಿಮೆ ಪ್ರಿಮಿಯಂ ಮೊತ್ತ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರ ಈ ಕೆಳಗಿನಂತಿದೆ:

ಬೆಳೆ ವಿಮೆ ಪ್ರಿಮಿಯಂ ಮೊತ್ತ(2.5 ಎಕರೆಗೆ) ಪಾವತಿಸಲು ಕೊನೆಯ ದಿನಾಂಕ
ಅಡಿಕೆ 6,400/- 30-06-2025
ಕಾಳುಮೆಣಸು 2,350/- 30-06-2025
ದಾಳಿಂಬೆ 6,350/- 30-06-2025
ವಿಳ್ಯೆದೆಲೆ 5,850/- 30-06-2025
ಮಾವು 4,000/- 31-07-2025

ಇದನ್ನೂ ಓದಿ: Mysore Dasara-2025: ಸರ್ಕಾರದಿಂದ ಈ ಬಾರಿಯ ಮೈಸೂರು ದಸರಾ ಆಚರಣೆಗೆ ಕುರಿತು ಮಹತ್ವದ ಮಾಹಿತಿ ಪ್ರಕಟ!

FID Number-ಪ್ರೂಟ್ಸ್ ಐಡಿಯನ್ನು(FID) ಹೊಂದಿರುವುದು ಕಡ್ಡಾಯವಾಗಿದೆ: ಯಾವುದೇ ಬೆಳೆಗಾಗಿ ಆನ್‌ಲೈನ್ ಮೂಲಕ ಬೆಳೆ ವಿಮೆ ಮಾಡಿಸಲು ರೈತರು ಪೌಷ್ಟಿಕತ್ವ ಮತ್ತು ಭದ್ರತೆಗಾಗಿ ತಮ್ಮ ಪ್ರೂಟ್ಸ್ (Fruits) ಐಡಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಕೃಷಿ ಇಲಾಖೆಯಿಂದ ನೀಡಲ್ಪಡುವ ಈ ಪ್ರೂಟ್ಸ್ ಐಡಿಯು ಭೂಮಿಯ ವಿವರಗಳ ದೃಢೀಕರಣಕ್ಕಾಗಿ ಸಹಾಯಕಾರಿಯಾಗಿದೆ.

ಪ್ರೂಟ್ಸ್ ಐಡಿಯಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರುಗಳು ಹಾಗೂ ಭೂವಿಸ್ತೀರ್ಣದ ಮಾಹಿತಿಗಳು ಸರಿಯಾಗಿ ನಮೂದಿತವಾಗಿದ್ದರೆ ಅರ್ಜಿಯನ್ನು ಸಲ್ಲಿಸಲು ಸಹಾಯವಾಗುತ್ತದೆ. ಈ ಮಾಹಿತಿಯು ಸರಿಯಾಗಿ ದಾಖಲಾಗಿದ್ದರೆ ಮಾತ್ರ ಆ ಜಮೀನಿನಲ್ಲಿ ಬೆಳೆಯುವ ಬೆಳೆಗೆ ವಿಮೆ ಸೌಲಭ್ಯ ಲಭ್ಯವಾಗುತ್ತದೆ. ಆದ್ದರಿಂದ ವಿಮೆ ಮಾಡುವ ಮೊದಲು ಪ್ರೂಟ್ಸ್ ಐಡಿ ಯನ್ನು ಚೆಕ್ ಮಾಡಿಕೊಳ್ಳುವುದು ರೈತರಿಗೆ ಸಲಹೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Crop Insurance-ವಿವಿಧ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

Horticulture Crop Last Date- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ?

ಅರ್ಹವಿರುವ ರೈತರು ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ ರೈತರು ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎನ್ನುವ ವಿವರವನ್ನು ತಿಳಿದುಕೊಳ್ಳಬಹುದು.

Step-1: ಮೊದಲು ಇಲ್ಲಿ ಕ್ಲಿಕ್ Read Now ಮಾಡಿ ರಾಜ್ಯ ಸರ್ಕಾರದ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ನಂತರ ಇಲ್ಲಿ ಮುಖಪುಟದಲ್ಲಿ “ವರ್ಷ/Year: 2025-26” ಮತ್ತು “ಋತು: Kharif/ಮುಂಗಾರು” ಎಂಬುದನ್ನು Select ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Free Computer Training-ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ!

bele vime

ಇದನ್ನೂ ಓದಿ: BMTC Package Tour-ಬಿಎಂಟಿಸಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಟೂರ್ ಪ್ಯಾಕೇಜ್!

Step-2: ತದನಂತರ ಅದೇ ಪೇಜ್ ನಲ್ಲಿ ಕೆಳಗೆ ಕಾಣುವ “Farmers’ ವಿಭಾಗದಲ್ಲಿ “View Cut Off Dates” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ರೈತರು “District” ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿದಾಗ ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ಬೆಳೆವಿಮೆಯನ್ನು ಮಾಡಿಸಬಹುದು ಮತ್ತು ಬೆಳೆವಾರು ಬೆಳೆ ವಿಮೆ ಪ್ರಿಮಿಯಂ ಪಾವತಿ ಮಾಡಿದಾಗ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎನ್ನುವ ವಿವರವನ್ನು ತೋರಿಸುತ್ತದೆ.

For More Information-ಹೆಚ್ಚಿನ ಉಪಯುಕ್ತ ಸಂಪೂರ್ಣ ಮಾಹಿತಿಯನ್ನು ಪಡೆಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ: Bele Vime Website-ರಾಜ್ಯ ಸರ್ಕಾರದ ಅಧಿಕೃತ ಬೆಳೆ ವಿಮೆ ವೆಬ್ಸೈಟ್- Click Here

RELATED ARTICLES
- Advertisment -

Most Popular

Recent Comments