Tuesday, June 17, 2025
No menu items!
HomeNewsE-Khata-ಆಸ್ತಿ ಮಾಲಿಕರಿಗೆ ಮಹತ್ವದ ಮಾಹಿತಿ! ಜುಲೈ 1 ರಿಂದ ಇ-ಖಾತಾ ಕಡ್ಡಾಯ!

E-Khata-ಆಸ್ತಿ ಮಾಲಿಕರಿಗೆ ಮಹತ್ವದ ಮಾಹಿತಿ! ಜುಲೈ 1 ರಿಂದ ಇ-ಖಾತಾ ಕಡ್ಡಾಯ!

ಕರ್ನಾಟಕ ಸರ್ಕಾರವು ಆಸ್ತಿ(Karnataka e-Khata)ವ್ಯವಹಾರಗಳಲ್ಲಿನ ತಿಳುವಳಿಕೆಗಾಗಿ ಆಸ್ತಿ ಮಾಲಿಕರಿಗೆ ಮಹತ್ವದ ನಿರ್ಧಾರವನ್ನು ಘೋಷಣೆ ಮಾಡಿದ್ದು, ಜುಲೈ 1 2025 ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಕಟ್ಟಡದ ನಕ್ಷೆಯನ್ನು ಮಂಜೂರು ಮಾಡಲು ಇ-ಖಾತಾ ವನ್ನು ಕಡ್ಡಾಯ ಮಾಡಲಾಗಿದೆ.

ಈ ನಿಯಮವು ಆಸ್ತಿ ಮಾಲೀಕರು, ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವವರು ಮತ್ತು ಆಸ್ತಿ ವರ್ಗಾವಣೆ ವಿಚಾರದಲ್ಲಿ(Property Document Rule)ತೊಡಗಿರುವವರಿಗೆ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದ್ದು, ಆಸ್ತಿ ವ್ಯವಹಾರಗಳನ್ನು ಸರಳಗೊಳಿಸುವ ಜೊತೆಗೆ ಸರ್ಕಾರದ ಡಿಜಿಟಲ್ ಆಡಳಿತದ ಉದ್ದೇಶಕ್ಕೆ ಹಾಗೂ ವಂಚನೆ ಮತ್ತು ದಾಖಲೆಗಳಲ್ಲಿ ತಪ್ಪುಗಳನ್ನು ಕಡಿಮೆ ಮಾಡುವ ಉದ್ದೇಶವಾಗಿದೆ.

ಇದನ್ನೂ ಓದಿ: Study Loan-ಉನ್ನತ ವಿದ್ಯಾಭ್ಯಾಸಕ್ಕೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ ಆಹ್ವಾನ!

ಪ್ರಸ್ತುತ ಈ ಡಿಜಿಟಲ್ ವ್ಯವಸ್ಥೆಯು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿದ್ದು, ಆನ್ಲೈನ್ ಮೂಲಕ ಪಡೆದುಕೊಳ್ಳುವುದು ಹೇಗೆ? ಇ-ಖಾತಾ ಎಂದರೇನು? ಜುಲೈ 1 ರಿಂದ ಏಕೆ ಕಡ್ಡಾಯ ಮಾಡಲಾಗಿದೆ? ಇ-ಖಾತಾ ಪಡೆಯಲು ಬೇಕಾದ ದಾಖಲೆಗಳಾವುವು? ಇ-ಖಾತಾ ಪಡೆಯುವ ವಿಧಾನ? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

E-Khata-ಇ-ಖಾತಾ ಎಂದರೇನು?

ಇ-ಖಾತಾ ಎಂದರೆ ಆಸ್ತಿಯ ದಾಖಲೆಗಳ ಡಿಜಿಟಲ್ ರೂಪ. ಇದು ಆಸ್ತಿಯ ಮಾಲೀಕತ್ವ, ಸ್ಥಳ, ತೆರಿಗೆ ವಿವರಗಳು ಮತ್ತು ಇತರ ಸಂಬಂಧಿತ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವ ಮೂಲಕ ಆಸ್ತಿ ವ್ಯವಹಾರಗಳನ್ನು ಸರಳಗೊಳಿಸಲು ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸಲು ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಬಿಬಿಎಂಪಿಯ ಇ-ಆಸ್ತಿ ತಂತ್ರಾಂಶದ ಮೂಲಕ ಈ ಖಾತಾವನ್ನು ರಚಿಸಲಾಗುತ್ತದೆ, ಇದು ಆಸ್ತಿ ನೋಂದಣಿ ಮತ್ತು ಕಟ್ಟಡ ನಕ್ಷೆ ಮಂಜೂರಾತಿಗೆ ಕಡ್ಡಾಯ ದಾಖಲೆಯಾಗಿದೆ.

ಇದನ್ನೂ ಓದಿ: Student Scholorship-NMMSS ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Why is e-Khata mandatory from July 1-ಇ ಖಾತಾ ಜುಲೈ 1 ರಿಂದ ಏಕೆ ಕಡ್ಡಾಯ?

ಕರ್ನಾಟಕ ಸರ್ಕಾರದ ಆದೇಶದಂತೆ, ಜುಲೈ 1, 2025 ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಇ-ಖಾತಾ ಸಲ್ಲಿಸುವುದು ಕಡ್ಡಾಯವಾಗಿದೆ. ಈ ನಿಯಮವು ಆಸ್ತಿ ವ್ಯವಹಾರಗಳಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು, ದಾಖಲೆಗಳ ಡಿಜಿಟಲೀಕರಣವನ್ನು ಉತ್ತೇಜಿಸಲು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಆನ್‌ಲೈನ್ ವ್ಯವಸ್ಥೆಯ ಮೂಲಕ ಇ-ಖಾತಾವನ್ನು ಕೇವಲ ಎರಡು ದಿನಗಳಲ್ಲಿ ಪಡೆಯಬಹುದು ಎಂದು ತಿಳಿಸಿದ್ದಾರೆ.

What are the benefits of e-account-ಇ-ಖಾತಾದ ಪ್ರಯೋಜನಗಳೇನು?

ಆಸ್ತಿ ವ್ಯವಹಾರಗಳಲ್ಲಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಲಭ್ಯವಲ್ಲಿಸಲು ಹೆಚ್ಚು ಪಾರದರ್ಶಕತೆ ಸಾಧ್ಯವಾಗುತ್ತದೆ.

ಇ-ಖಾತಾವನ್ನು ಆನ್‌ಲೈನ್ ವ್ಯವಸ್ಥೆಯ ಮೂಲಕ ದಾಖಲೆ ಸಲ್ಲಿಸುವುದು ಮತ್ತು ಪಡೆದುಕೊಳ್ಳಲು ಸುಲಭವಾಗಿದೆ.

ದಾಖಲೆಗಳು ಡಿಜಿಟಲ್ ಆಗಿರುವುದರಿಂದ ಕೈಗಾರಿಕೆಗಳು ಹಾಗೂ ಜನರಿಗೆ ಸಂಗ್ರಹಣೆಯ ಸಮಸ್ಯೆ ಕಡಿಮೆಯಾಗಿದ್ದು, ಮಧ್ಯವರ್ತಿಗಳ ಅವಲಂಬನೆ ಇಲ್ಲದೆ ಭ್ರಷ್ಟಾಚಾರವನ್ನು ತಡೆಯಲು ಸಹಾಯವಾಗಿದೆ.

ತುರ್ತು ಸಂದರ್ಭಗಳಲ್ಲಿ ಒಂದು ದಿನದಲ್ಲೇ ಇ-ಖಾತಾವನ್ನು ಪಡೆಯುವ ಸೌಲಭ್ಯ ಲಭ್ಯವಾಗಿದೆ.

ಇದನ್ನೂ ಓದಿ: Borewell Subsidy-₹4.25 ಲಕ್ಷ ಸಬ್ಸಿಡಿಯಲ್ಲಿ ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ಅರ್ಜಿ!

E-Khata is mandatory-ಎ-ಖಾತಾ ಮತ್ತು ಬಿ-ಖಾತಾ ಈ ಎಲ್ಲಾ ಆಸ್ತಿಗಳಿಗೂ ಇ ಖಾತಾ ಕಡ್ಡಾಯ:

ಕರ್ನಾಟಕ ಸರ್ಕಾರವು ಈಗಾಗಲೇ ಎ-ಖಾತಾ ಅಥವಾ ಬಿ-ಖಾತಾ ಹೊಂದಿರುವ ಎಲ್ಲಾ ಆಸ್ತಿಗಳಿಗೆ ಇ-ಖಾತಾ ಹೊಂದಿರುವುದು ಕಡ್ಡಾಯವೆಂದು ಘೋಷಿಸಿದೆ. ಈ ನಿಯಮವು ಮಹಾನಗರ ಪಾಲಿಕೆಗಳು, ನಗರಸಭೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಆಸ್ತಿಗಳಿಗೆ ಅನ್ವಯಿಸುತ್ತದೆ.

ಇ-ಖಾತಾ ಇಲ್ಲದ ಆಸ್ತಿಗಳ ಮೇಲೆ ಯಾವುದೇ ಖರೀದಿ, ಮಾರಾಟ ಅಥವಾ ಹಸ್ತಾಂತರ ವ್ಯವಹಾರಗಳನ್ನು ನಡೆಸಲು ಅವಕಾಶವಿಲ್ಲ. ಇದರಿಂದ ಆಸ್ತಿ ದಾಖಲೆಗಳ ಪಾರದರ್ಶಕತೆ, ನಿಖರತೆ ಮತ್ತು ಭದ್ರತೆ ಹೆಚ್ಚುತ್ತಿದೆ.

ಇದನ್ನೂ ಓದಿ: Gruhalakshmi Yojana-ಗೃಹಲಕ್ಷ್ಮಿ 20ನೇ ಕಂತಿನ ಹಣ ಬಿಡುಗಡೆ!ಮೊಬೈಲ್ ನಲ್ಲೇ ಜಮಾ ವಿವರ ತಿಳಿಯಿರಿ!

ekhata documents

ಇದನ್ನೂ ಓದಿ: Car Subsidy- ಕಾರು ಖರೀದಿ ಮಾಡಲು ಶೇ.50% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

Final e-khata Online Application-ಇ-ಖಾತಾ ಪಡೆಯುವ ಅರ್ಜಿ ಸಲ್ಲಿಸುವ ವಿಧಾನ:

ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಪಟ್ಟಂತೆ ಆಸ್ತಿಯ ಮಾಲೀಕರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಇ-ಖಾತಾ ಪಡೆಯಲು ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: Final e-khata Online Application ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು ಬಳಿಕ login ವಿಭಾಗದಲ್ಲಿ ತಮ್ಮ ಮೊಬೈಲ್ ನಂಬರ್ ಮತ್ತು OTP ಅನ್ನು ಹಾಕಿ ಲಾಗಿನ್ ಅಗಬೇಕು.

Step-2: ಬಳಿಕ ಈ ಪೇಜ್ ನಲ್ಲಿ ಎಡಬದಿಯಲ್ಲಿ ಕಾಣುವ “e-khata” ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿ ಎಲ್ಲಾ ವಾರ್ಡ್ ಹೆಸರು ಗೋಚರಿಸುತ್ತದೆ ಇಲ್ಲಿ ನಿಮ್ಮ ವಾರ್ಡ ಅನ್ನು ಹುಡುಕಿ ಬಳಿಕ ನಂತರದ ಪೇಜ್ ನಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಬೇಕು.

Step-3: ಇಲ್ಲಿ “Submit Information For ekhata” ಆಯ್ಕೆಯಲ್ಲಿ ಕೆಳಗೆ ಕಾಣುವ Click Here ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸ್ವೀಕೃತಿಯಾಗಿ ಕೊನೆಯಲ್ಲಿ ಸ್ವೀಕೃತಿ ರಶೀದಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದರ ಕುರಿತು ಮಾಹಿತಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ- Watch Now

Documents required-ಇ-ಖಾತಾ ಪಡೆಯಲು ಬೇಕಾದ ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ/Aadhar Card

ಆಸ್ತಿಯ ಜಿಪಿಎಸ್ ಸ್ಥಳ/GPS location of the property

ಮಾಲೀಕರು ನಿಂತಿರುವ ಛಾಯಾಚಿತ್ರ/Standing photograph of the owner

ಕ್ರಯಪತ್ರ/Purchase Deed

ವಿಭಾಗ ಪತ್ರ/Partition Deed

10 ಅಂಕಿಗಳ ಖಾತಾ ಐಡಿ ಸಂಖ್ಯೆ/ID Number

ಇದನ್ನೂ ಓದಿ: MSP Price list-2025: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೇಂದ್ರದಿಂದ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!

ಆಸ್ತಿ ಮಾಲೀಕರಿಗೆ ಸಲಹೆ:

ತ್ವರಿತ ಕ್ರಮ: ಜುಲೈ 1 ರ ಮೊದಲು ಇ-ಖಾತಾವನ್ನು ಪಡೆದುಕೊಳ್ಳಿ, ಇದರಿಂದ ಕಟ್ಟಡ ನಕ್ಷೆ ಮಂಜೂರಾತಿ ಅಥವಾ ಆಸ್ತಿ ವರ್ಗಾವಣೆಯಲ್ಲಿ ತೊಂದರೆಯಾಗದು.

ದಾಖಲೆಗಳ ಸಿದ್ಧತೆ: ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಡಿ.

ಆನ್‌ಲೈನ್ ಸೌಲಭ್ಯ: ಬಿಬಿಎಂಪಿಯ ವೆಬ್‌ಸೈಟ್‌ನ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಇದರಿಂದ ಸಮಯ ಉಳಿತಾಯವಾಗುತ್ತದೆ.

ಸಹಾಯಕ ಕಚೇರಿಗಳ ಭೇಟಿ: ಯಾವುದೇ ಗೊಂದಲವಿದ್ದರೆ, ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಸಲಹೆ ಪಡೆಯಿರಿ.

ಇದನ್ನೂ ಓದಿ: Rain Forecast-ರಾಜ್ಯದಲ್ಲಿ ಈ ದಿನದಿಂದ ಮತ್ತೆ ಮುಂಗಾರು ಚುರುಕು ಸಾಧ್ಯತೆ!

For More Information-ಮಾಹಿತಿಗಾಗಿ ಸಂಪರ್ಕಿಸಿ:

ವೆಬ್‌ಸೈಟ್: Click Here

ಇ-ಮೇಲ್: pd.webportal@karnataka.gov.in

ಸಹಾಯವಾಣಿ: 080-22230060

RELATED ARTICLES
- Advertisment -

Most Popular

Recent Comments