ಸಮಗ್ರ ತೋಟಗಾರಿಕೆ ಅಧಿವೃದ್ದಿ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಮತ್ತು ತೋಟಗಾರಿಗೆ ಇಲಾಖೆಯ ವತಿಯಿಂದ ರೈತರಿಗೆ ಉಚಿತ ತರಕಾತಿ ಬೀಜದ ಕಿಟ್(Free Vegetable Seed Kit) ಗಳನ್ನು ವಿತರಣೆ ಮಾಡಲು ಅರ್ಜಿಯನ್ನು ಕರೆಯಲಾಗಿದೆ.
ತೋಟಗಾರಿಕೆ ಅಧಿವೃದ್ದಿ(Karnataka Horticulture Department) ಯೋಜನೆಯ ಮೂಲಕ ತರಕಾರಿ ಮಾಡುವ ರೈತರಿಗೆ ಆಹಾರದ ಸ್ವಾವಲಂಬನೆಯನ್ನು ಉತ್ತೇಜಿಸುವ ಉದ್ದೇಶದಿಂದ ಉಚಿತವಾಗಿ ತರಕಾರಿ ಬೀಜದ ಕಿಟ್ ಗಳನ್ನು ವಿತರಣೆ ಮಾಡಲು ಅರ್ಹ ರೈತರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: Nabard Loan-ನಬಾರ್ಡ್ ನಿಂದ ರಾಜ್ಯಕ್ಕೆ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ!
ಕೃಷಿ ಕ್ಷೇತ್ರದಲ್ಲಿ ರೈತರ ಆರ್ಥಿಕ ಸ್ಥಿರತೆಯನ್ನು ಸುಧಾರಿಸಲು ಈ ಯೋಜನೆಯನ್ನು ಪ್ರಾರಂಭ ಮಾಡಿದ್ದು, ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ- 31 March 2025
What is Purpose- ಈ ಯೋಜನೆಯ ಉದ್ದೇಶವೇನು?
- ಕೃಷಿಯಲ್ಲಿ ತರಕಾರಿ ಉತ್ತೇಜನ: ರೈತರಿಗೆ ಉತ್ತಮ ಗುಣಮಟ್ಟದಲ್ಲಿ ತರಕಾರಿ ಬೀಜಗಳನ್ನು ನೀಡಿ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆಯನ್ನು ಮಾಡಲು ಅವಕಾಶವಾದಿಯಾಗಿದೆ.
- ರೈತರಲ್ಲಿ ಆರ್ಥಿಕ ಸುಧಾರಣೆ: ರೈತರಿಗೆ ಉಚಿತವಾಗಿ ತರಕಾರಿ ಬೀಜಗಳನ್ನು ನೀಡುವುದರಿಂದ, ಅವರ ಕೃಷಿಯಲ್ಲಿ ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಲು ಸಹಾಯಕಾರಿಯಾಗಿದೆ.
- ಗ್ರಾಮೀಣ ಪ್ರದೇಶದಲ್ಲಿ ಆಹಾರ ಪೂರೈಕೆ ಹೆಚ್ಚಿಸಲು: ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಿ ಬೆಳೆಯುವ ತರಕಾರಿಗಳಿಂದ ಸೂಕ್ತ ಪೂರೈಕೆ ದೊರಕುವ ಪ್ರಗತಿಯಾಗಿದೆ.
ಇದನ್ನೂ ಓದಿ: Annabhagya Scheme- ಆಹಾರ ಇಲಾಖೆಯಿಂದ ಅಕ್ಕಿ ಹಣ ವಿತರಣೆ ಕುರಿತು ಮಹತ್ವ ಪ್ರಕಟಣೆ!

Who Can Apply the seed kit- ತರಕಾರಿ ಬೀಜದ ಕಿಟ್ ಪಡೆಯಲು ಅರ್ಜಿಯನ್ನು ಯಾರು ಸಲ್ಲಿಸಬೇಕು?
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಅಥವಾ ತೋಟಗಾರಿಕೆಯಲ್ಲಿ ತೊಡಗಿರುವ ರೈತರು ಅರ್ಜಿಯನ್ನು ಸಲ್ಲಿಸಬಹುದು.
- ಮಹಿಳಾ ರೈತರಿಗೂ ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಅರ್ಜಿದಾರರ ರೈತರ ಹೆಸರಿನಲ್ಲಿ ಕೃಷಿ ಜಮೀನು/ಪಹಣಿಯನ್ನು ಹೊಂದಿರಬೇಕು.
- ಅರ್ಜಿದಾರ ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರು ಸಹ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Widow Pension Scheme- ವಿಧವಾ ಪಿಂಚಣಿ 2200/- ರೂ ಏರಿಕೆ ಸಾಧ್ಯತೆ!
What are the Documents- ತರಕಾರಿ ಬೀಜದ ಕಿಟ್ ಪಡೆಯಲು ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು?
ಆಧಾರ್ ಕಾರ್ಡ/Aadhar Card
ಬ್ಯಾಂಕ್ ಪಾಸ್ ಬುಕ್ /Bank Passbook
ಜಮೀನಿನ ಪಹಣಿ/RTC
ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Cast & Income Certificate
ಪೋಟೋ/ Photocopy
ಇದನ್ನೂ ಓದಿ: Sprinkler set subsidy- ಶೇ 90% ಸಬ್ಸಿಡಿಯಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
How To Apply for Seed Kit- ತರಕಾರಿ ಬೀಜದ ಕಿಟ್ ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ರೈತರು ಕೊನೆಯ ದಿನಾಂಕ ಮುಕ್ತಾಯ ಆಗುವುದ ಒಳಗಾಗಿ ನಿಮ್ಮ ತಾಲ್ಲೂಕಿನ ತೋಟಕಾರಿಗೆ ಇಲಾಕೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಛೇರಿಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ತೋಟಗಾರಿಕೆ ಇಲಾಖೆ ವೆಬ್ಸೈಟ್- Click Here