Wednesday, March 12, 2025
No menu items!
HomeSchemesAnnabhagya Scheme- ಆಹಾರ ಇಲಾಖೆಯಿಂದ ಅಕ್ಕಿ ಹಣ ವಿತರಣೆ ಕುರಿತು ಮಹತ್ವ ಪ್ರಕಟಣೆ!

Annabhagya Scheme- ಆಹಾರ ಇಲಾಖೆಯಿಂದ ಅಕ್ಕಿ ಹಣ ವಿತರಣೆ ಕುರಿತು ಮಹತ್ವ ಪ್ರಕಟಣೆ!

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಅನ್ನಭಾಗ್ಯ ಯೋಜನೆಯು(Annabhagya Scheme) ಒಂದಾಗಿದ್ದು, ಇದರ ಅಡಿಯಲ್ಲಿ ಪ್ರತಿ ಫಲಾನುಭವಿಗೆ 5 ಕೆ.ಜಿ ಅಕ್ಕಿಯ ಜೊತೆಗೆ ಉಳಿದ 5 ಕೆ.ಜಿ ಅಕ್ಕಿಗೆ ರೂ. 170 ನಂತೆ ನೇರ ಹಣವನ್ನು ವರ್ಗಾವಣೆ ಮಾಡುತ್ತಿದ್ದು, ಇನ್ನು ಮುಂದೆ ಒಟ್ಟು 10 ಕೆಜಿ ಅಕ್ಕಿಯನ್ನು ಕೊಡಲು ಮಹತ್ವದ ನೂತನ ಪ್ರಕಟಣೆಯನ್ನು ಹೊರಡಿಸಿದೆ.

ಈ ಯೋಜನೆಯಡಿ, ಪ್ರತಿ ತಿಂಗಳು 170 ರೂ. ಹಣವನ್ನು(Annabhagya Amount) ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ ಅಕ್ಟೋಬರ್ ತಿಂಗಳಿನಿಂದ ಈ ಹಣವನ್ನು ಅಭ್ಯರ್ಥಿಯ ಖಾತೆಗೆ ಜಮಾ ಮಾಡಲಾಗುತ್ತಿಲ್ಲ, ಇದರಿಂದ ರಾಜ್ಯ ಸರಕಾರವು ಅಕ್ಕಿ ಬದಲು ಹಣ ನೀಡುವುದರ ಕುರಿತು ಮಹತ್ವದ ಪ್ರಕಟಣೆಯನ್ನು ಹೊರಡಿಸಿದ್ದು, ಈ ಕ್ರಮದಿಂದ ಫಲಾನುಭವಿಗಳು ನಗದು ಪಾವತಿಗೆ ಬದಲಾಗಿ ನೇರವಾಗಿ ಅಕ್ಕಿಯನ್ನು ಪಡೆಯುವ ಮೂಲಕ ತಮ್ಮ ಆಹಾರ ಅಗತ್ಯಗಳನ್ನು ಪೂರೈಸಬಹುದು.

ಇದನ್ನೂ ಓದಿ: Widow Pension Scheme- ವಿಧವಾ ಪಿಂಚಣಿ 2200/- ರೂ ಏರಿಕೆ ಸಾಧ್ಯತೆ!

ಈ ಮಾಹಿತಿಯ ಜೊತೆಗೆ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಏನೆಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ? ಅನ್ನಭಾಗ್ಯ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ? ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ಹಣ ಬದಲು ಅಕ್ಕಿ ನೀಡಲು ಹೊಸ ಆದೇಶ:

2025ರ ಆರಂಭದಲ್ಲಿ, ಕರ್ನಾಟಕ ಸರ್ಕಾರ “ಅನ್ನಭಾಗ್ಯ ಯೋಜನೆ” ಅನುಸಾರ, ಬಡ ಕುಟುಂಬಗಳಿಗೆ ನೀಡಲಾಗುತ್ತಿರುವ 5 ಕೆ.ಜಿ ಅಕ್ಕಿಗೆ ಬದಲಾಗಿ, ₹170 ನಗದು ಪಾವತಿ ಮಾಡಲು ಆದೇಶ ಹೊರಡಿಸಿತ್ತು. ಆದರೆ ಅಕ್ಕಿಯ ಕೊರತೆ ಮತ್ತು ಸರಬರಾಜು ಸಮಸ್ಯೆಗಳ ಕಾರಣದಿಂದ, ಮುಂದಿನ ದಿನಗಳಲ್ಲಿ ಹಣದ ಬದಲಿಗೆ ನೇರವಾಗಿ ಅಕ್ಕಿ ವಿತರಿಸುವ ತೀರ್ಮಾನವನ್ನು ಸರ್ಕಾರ ಪ್ರಕಟಿಸಿದೆ.

ಹಣದ ಬದಲು ಅಕ್ಕಿ ನೀಡುವ ಮೂಲಕ, ಸರ್ಕಾರ ಪ್ರತಿ ತಿಂಗಳು ಸುಮಾರು ₹190 ಕೋಟಿ ಉಳಿತಾಯ ಮಾಡಲಿದೆ. ಇದು ಅಕ್ಕಿಯನ್ನು ನೇರವಾಗಿ ಜನರಿಗೆ ಹಂಚಲು ಸಹಾಯ ಮಾಡುವುದರ ಮೂಲಕ ಅವರ ಆಹಾರದ ಭದ್ರತೆ ಮತ್ತು ಅವಶ್ಯಕತೆಗಳನ್ನು ಉತ್ತಮಗೊಳಿಸಲು ಸಹಾಯಮಾಡುತ್ತದೆ.

ಇದನ್ನೂ ಓದಿ: Sprinkler set subsidy- ಶೇ 90% ಸಬ್ಸಿಡಿಯಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

What is the purpose- ಈ ಆದೇಶ ಹೊರಡಿಸಲು ಉದ್ದೇಶವೇನು?

ಆಹಾರ ಭದ್ರತೆ: ಅಕ್ಕಿಯ ಕೊರತೆ ಮತ್ತು ಸರಬರಾಜು ಸಮಸ್ಯೆಗಳು ಸಾಮಾನ್ಯವಾಗಿರುವುದರಿಂದ, ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದು ಸರ್ಕಾರವು ಬಡ ಕುಟುಂಬಗಳಿಗೆ ಸದಾ ಲಭ್ಯವಿರುವ ಆಹಾರವನ್ನು ಒದಗಿಸಬಹುದು. ಹಣದ ಬದಲಿಗೆ ನೇರವಾಗಿ ಅಕ್ಕಿ ನೀಡುವುದರಿಂದ, ಫಲಾನುಭವಿಗಳಿಗೆ ಆಹಾರ ಸಿಗುವಲ್ಲಿ ಯಾವುದೇ ಸಮಸ್ಯೆಯು ಉಂಟಾಗುವುದಿಲ್ಲ.

ಆರ್ಥಿಕ ಉಳಿತಾಯ: ಈ ಕಾರ್ಯಕ್ರಮದಿಂದ ಸರ್ಕಾರದ ಖಜಾನೆ ಮೇಲೆ ಇರುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಬಹುದು. ನಗದು ಪಾವತಿಗೆ ನೀಡಲು ನೀಡಬೇಕಾದ ₹170 ಪ್ರತಿ ತಿಂಗಳು, ಅಕ್ಕಿಯ ವಿತರಣೆಗೂ ಒಂದೇ ದರದಲ್ಲಿ ಬದಲಿಸಲಾಗುವುದು. ಇದೇ ಸಮಯದಲ್ಲಿ, ಅಕ್ಕಿ ಸರಬರಾಜು ಮಾಡುವ ಮೂಲಕ ರಾಜ್ಯ ಸರ್ಕಾರ ಪ್ರತಿ ತಿಂಗಳು ₹190 ಕೋಟಿ ಉಳಿತಾಯ ಮಾಡಬಹುದು.

ಇದನ್ನೂ ಓದಿ: B-Khata- ಏನಿದು ಬಿ-ಖಾತಾ! ಬಿ-ಖಾತಾ ಪಡೆಯಲು ಯಾವೆಲ್ಲ ದಾಖಲೆಗಳು ಕಡ್ಡಾಯ!

annabhagya yojana

Annabhagya DBT Amount- ಅನ್ನಭಾಗ್ಯ ಯೋಜನೆಯ ಹಣ ಎಷ್ಟು ಜಮಾ ಆಗಿದೆ? ಎಂದು ನಿಮ್ಮ ಮೊಬೈಲ್ ನಲ್ಲೆ ತಿಳಿಯುವ ವಿಧಾನ:

ಬಿಪಿಲ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲೇ ಅನ್ನಭಾಗ್ಯ ಯೋಜನೆಯ ಹಣ ಜಮಾ ವಿವರವನ್ನು ಪಡೆಯಬಹುದು.

Step-1: ಮೊದಲು ಈ ಲಿಂಕ್ ಮೇಲೆ Apply Now ಕ್ಲಿಕ್ ಮಾಡಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Postal Recruitment 2025- ಅಂಚೆ ಇಲಾಖೆಯಿಂದ 21,413 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Step-2: ನಂತರ ಈ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಅಗಿ ನಿಮ್ಮ ಆಧಾರ್ ಕಾರ್ಡ ಅನ್ನು ನಂಬರ್ ಅನ್ನು ನಮೂದಿಸಿ ನಿಮ್ಮ ಮೊಬೈಲ್ ನಂಬರ್ ಗೆ ಬರುವ ಒಟಿಪಿಯನ್ನು ಭರ್ತಿ ಮಾಡಬೇಕು. ಈ ಅಪ್ಲಿಕೇಶನ್ ಅನ್ನು Log in ಅಗಲು Password ಅನ್ನು ರಚನೆ ಮಾಡಿಕೊಂಡು “Log In” ಬಟನ್ ಮೇಲೆ ಕ್ಲಿಕ್ ಮಾಡಿ Password ಹಾಕಿ ಲಾಗಿನ್ ಅಗಬೇಕು.

Step-3: ನಂತರ ಇಲ್ಲಿ ನಾಲ್ಕು ಆಯ್ಕೆಗಳು ತೋರಿಸುತ್ತವೆ ಇಲ್ಲಿ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ಅನ್ನಭಾಗ್ಯ ಯೋಜನೆ” ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ತಿಂಗಳುವಾರು ಈ ಯೋಜನೆಯಡಿ ಜಮಾ ಅಗಿರುವ ಒಟ್ಟು ಹಣದ ವಿವರವನ್ನು ತೊರಿಸುತ್ತದೆ. ಇಲ್ಲಿ ಜಮಾ ಅದ ದಿನಾಂಕ, ಬ್ಯಾಂಕ್ ಹೆಸರು, UTR ಸಂಖ್ಯೆ ಇನ್ನಿತರ ವಿವರ ತೋರಿಸುತ್ತದೆ.

ಇದನ್ನೂ ಓದಿ: Krushi Honda – ಶೇ 80% ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ!

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ- Click Here

RELATED ARTICLES
- Advertisment -

Most Popular

Recent Comments