Wednesday, March 12, 2025
No menu items!
HomeAgricultureSprinkler set subsidy- ಶೇ 90% ಸಬ್ಸಿಡಿಯಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ...

Sprinkler set subsidy- ಶೇ 90% ಸಬ್ಸಿಡಿಯಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

2024-2025 ನೇ ಸಾಲಿನ ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ(PMKSY) ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್(Sprinkler Set) ಪೈಪ್ ಗಳನ್ನು ಪಡೆಯಲು ಅರ್ಜಿಯನ್ನು ಕರೆಯಲಾಗಿದೆ.

ಕೃಷಿ ಇಲಾಖೆಯಡಿ ಕೃಷಿಕರಿಗೆ ನೀರಾವರಿ (irrigation) ವ್ಯವಸ್ಥೆಯನ್ನು ಸುಧಾರಿಸಲು ಸ್ಪಿಂಕ್ಲರ್ ಸೆಟ್‌ಗಳನ್ನು(Sprinkler pipe subsidy) ನೀಡುವ ಯೋಜನೆ ಆಯೋಜಿಸಿದ್ದು, ಇದರಿಂದ ರೈತರಿಗೆ ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ. ಹಾಗೂ ನೀರಾವರಿ ವ್ಯವಸ್ಥೆಗಳನ್ನು ಸುಧಾರಿಸಲು ಇದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.

ಇದನ್ನೂ ಓದಿ: B-Khata- ಏನಿದು ಬಿ-ಖಾತಾ! ಬಿ-ಖಾತಾ ಪಡೆಯಲು ಯಾವೆಲ್ಲ ದಾಖಲೆಗಳು ಕಡ್ಡಾಯ!

ಅರ್ಹ ರೈತರು ಈ ಯೋಜನೆಯ ಅಡಿಯಲ್ಲಿ ಸ್ಪಿಂಕ್ಲರ್ ಸೆಟ್ ಅನ್ನು ಪಡೆಯಲು ಅರ್ಜಿ ಕರೆಯಲಾಗಿದ್ದು, ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅಗತ್ಯದಾಖಲೆಗಳೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಹೇಗೆ ಸಲ್ಲಿಸಬೇಕು? ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

Who Can Apply -ಯಾರೆಲ್ಲ ಅರ್ಜಿ ಸಲ್ಲಿಸಿ ಸ್ಪಿಂಕ್ಲರ್ ಸೆಟ್ ಪಡೆಯಬಹುದು?

  • ಎಲ್ಲಾ ವರ್ಗದ ರೈತರಿಗೂ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
  • ಕೃಷಿ ಸಹಕಾರಿ ಸಂಘಗಳಲ್ಲಿ ಇರುವವರಿಗೆ ಸ್ಪಿಂಕ್ಲರ್ ಸೆಟ್‌ಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
  • ಅರ್ಜಿದಾರರು ತಮ್ಮ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕು.
  • ಕೃಷಿ ಇಲಾಖೆಯಿಂದ ಕಳೆದ 7 ವರ್ಷಗಳಲ್ಲಿ ಸ್ಪಿಂಕ್ಲರ್ ಸೆಟ್ ಅನ್ನು ಪಡೆದಿರಬಾರದು
  • ಅತೀ ಸಣ್ಣ ರೈತರು ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
  • ಪ.ಜಾ/ಪ.ಪ ಹಾಗೂ ಇತರೆ ಎಲ್ಲಾ ವರ್ಗದ ರೈತರಿಗೂ ಸಹ ಸರಿ ಸಮಾನವಾಗಿ ಶೇ 90% ಸಬ್ಸಿಡಿಯಲ್ಲಿ ನೀಡಲಾಗುತ್ತದೆ.

sprinkler pipe

ಇದನ್ನೂ ಓದಿ: Postal Recruitment 2025- ಅಂಚೆ ಇಲಾಖೆಯಿಂದ 21,413 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

What are the Documents- ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

A) ಅರ್ಜಿದಾರರ ಜಮೀನಿನ ಪಹಣಿ
B) ಬ್ಯಾಂಕ್ ಪಾಸ್ ಬುಕ್
C) ಆಧಾರ್ ಕಾರ್ಡ
D) ಕೊಳವೆ ಭಾವಿ ಧೃಡೀಕರಣ ಪತ್ರ
E) ಬೆಳೆ ಧೃಡೀಕರಣ ಪ್ರಮಾಣ ಪತ್ರ
F) ಅರ್ಜಿದಾರರ ಪೋಟೋ
G) ₹100 ರೂ ಛಾಪಾ ಕಾಗದ

Sprinkler Set Subsidy Amount-ರೈತರಿಗೆ ಈ ಯೋಜನೆಯ ಅಡಿಯಲ್ಲಿ ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ಶೇ 90% ಸಬ್ಸಿಡಿಯನ್ನು ನೀಡಲಾಗುತ್ತದೆ. ಹಾಗೂ ರೈತರು ಪೈಪ್ ಸರಬರಾಜು ಕಂಪನಿಗೆ ₹4,667/- ರೂ ರೈತರ ಹಣವನ್ನು ಪಾವತಿ ಮಾಡಿ ಸ್ಪಿಂಕ್ಲರ್ ಸೆಟ್ ಅನ್ನು ಪಡೆಯಬಹುದು.

ಇದನ್ನೂ ಓದಿ: Krushi Honda – ಶೇ 80% ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ!

How To Apply – ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರ ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು(RSK) ಕಚೇರಿಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಅಥವಾ

ಇದನ್ನೂ ಓದಿ: Life Insurance Plan – ₹20 ರೂ ಪಾವತಿ ಮಾಡಿ 2 ಲಕ್ಷ ವಿಮೆ ಪಡೆಯಿರಿ!

ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ ಕೆ-ಕಿಸಾನ್ ವೆಬ್ಸೈಟ್ ನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಬಹುದು- Click Here

ಇದನ್ನೂ ಓದಿ: Property Devision- ಪಿತ್ರಾರ್ಜಿತ ಆಸ್ತಿಯ ಮಾರಾಟ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು!

 

RELATED ARTICLES
- Advertisment -

Most Popular

Recent Comments