Wednesday, March 12, 2025
No menu items!
HomeNewsPostal Recruitment 2025- ಅಂಚೆ ಇಲಾಖೆಯಿಂದ 21,413 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Postal Recruitment 2025- ಅಂಚೆ ಇಲಾಖೆಯಿಂದ 21,413 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

2025 ನೇ ಸಾಲಿನಲ್ಲಿ ಭಾರತೀಯ ಅಂಚೆ ಇಲಾಖೆ(Postal Recruitment 2025) ವತಿಯಿಂದ ಎಸ್‌ಎಸ್ಎಲ್‌ಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ 21,413 ಗ್ರಾಮೀಣ ಡಾಕ್ ಸೇವಕ (GDS) ಹುದ್ದೆಗಳ ನೇಮಕಾತಿಯನ್ನು ಪ್ರಕಟಣೆ ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಆಹ್ವಾನಿಸಲಾಗಿದೆ.

ಅಂಚೆ ಇಲಾಖೆ ಇದು ಭಾರತ ಸರ್ಕಾರದ(Post office)ಮಹತ್ವಪೂರ್ಣ ಸಂಸ್ಥೆಗಳಲ್ಲಿ ಒಂದಾಗಿದ್ದು, 1854ರಲ್ಲಿ ಭಾರತೀಯ ಅಂಚೆ ಇಲಾಖೆಯು ಸ್ಥಾಪನೆಯಾಯಿತು. ಇಂದು ದೇಶದಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಅಂಚೆ ಶಾಖೆಗಳ ಮೂಲಕ ಕಾರ್ಯ ಸಲ್ಲಿಸುತ್ತಿದೆ.

ಇದನ್ನೂ ಓದಿ: Krushi Honda – ಶೇ 80% ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ!

ಗ್ರಾಮೀಣ ಡಾಕ್ ಸೇವಕ(Gramin Dak Sevak) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದುನೇಮಕಾತಿಗೆ ಯಾರು ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಲು ಪ್ರಮುಖ ದಿನಾಂಕಗಳಾವುವು? ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು? ಅಗತ್ಯ ದಾಖಲೆಗಳೇನು? ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Post office recruitment Details- ಯಾವ ಯಾವ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ:

ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್(Branch Postmaster), ಸಹಾಯಕ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್(Assistant Branch Postmaster) ಹಾಗೂ ಡಾಕ್‌ ಸೇವಕ್‌ ಮತ್ತು ಡಾಕ್ ಸೇವಕ(Dak Sevaks) ಈ ಮೂರು ಹುದ್ದೆಗಳನ್ನು ಸೇರಿ ಒಟ್ಟು 21,413 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.

Postal Department Jobs Salary-ಅಂಚೆ ಇಲಾಖೆ ಹುದ್ದೆಗಳ ವೇತನ?

ಬ್ರಾಂಚ್ ಪೋಸ್ಟ್ ಮಾಸ್ಟರ್ (BPM): ₹12,000 ರೂ – ₹29,380 ರೂ
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) : ₹10,000 ರೂ – ₹24,470 ರೂ

ಇದನ್ನೂ ಓದಿ: Life Insurance Plan – ₹20 ರೂ ಪಾವತಿ ಮಾಡಿ 2 ಲಕ್ಷ ವಿಮೆ ಪಡೆಯಿರಿ!

Important Application Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 10-02-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 03-03-2025
ತಿದ್ದುಪಡಿ ಅವಧಿ : ಮಾರ್ಚ್ 6 ರಿಂದ 8 2025

postmaster

Application Fee-ಅರ್ಜಿಯನ್ನು ಸಲ್ಲಿಸಲು ಶುಲ್ಕದ ವಿವರ:

ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ವರ್ಗದವರಿಗೆ : ₹100 ರೂಪಾಯಿ
ಎಸ್‌ಸಿ, ಎಸ್‌ಟಿ, ಮಹಿಳಾ, ವಿಶೇಷ ಚೇತನ, ತೃತೀಯ ಲಿಂಗ: ಯಾವುದೇ ರೀತಿಯ ಶುಲ್ಕ ಇರುವುದಿಲ್ಲ

ಇದನ್ನೂ ಓದಿ: Property Devision- ಪಿತ್ರಾರ್ಜಿತ ಆಸ್ತಿಯ ಮಾರಾಟ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು!

Who can apply- GDS ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು?

A) ಅಭ್ಯರ್ಥಿಯು ಖಾಯಂ ಭಾರತೀಯ ನಿವಾಸಿಯಾಗಿರಬೇಕು.
B) ಅಭ್ಯರ್ಥಿಯು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
C) ಅಭ್ಯರ್ಥಿಯ ವಯಸ್ಸು 18 ರಿಂದ 40 ವರ್ಷದ ವಯೋಮಿತಿಯನ್ನು ಹೊಂದಿರಬೇಕು.
D) ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನದ ಬಗ್ಗೆ ತಿಳಿದಿರಬೇಕು.
E) ಅಭ್ಯರ್ಥಿಯು ಆಯಾ ರಾಜ್ಯದ ಸ್ಥಳೀಯ ಅನುವಾದಿತ ಭಾಷೆಯನ್ನು ಕಲಿತಿರಬೇಕು.
F) ಅಭ್ಯರ್ಥಿಗೆ ಸೈಕಲ್ ಅಥವಾ ದ್ವಿಚಕ್ರ ವಾಹನ ಚಾಲನೆ ಬಗ್ಗೆ ತಿಳಿದಿರಬೇಕು.

What are the Documents- ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳೇನು?

೧) ಅಭ್ಯರ್ಥಿಯ ಆಧಾರ್ ಕಾರ್ಡ/Aadhar Card
೨) ಅಭ್ಯರ್ಥಿಯ SSLC ಅಂಕಪಟ್ಟಿ/SSLC Marks card
೩) ಅಭ್ಯರ್ಥಿಯ ಪೋಟೋ/Photocopy
೪) ಮೊಬೈಲ್ ನಂಬರ್/Mobile number

ಇದನ್ನೂ ಓದಿ: Annabhagya Scheme- ಜನವರಿ ತಿಂಗಳ ಅನ್ನಭಾಗ್ಯ ಹಣ ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡುವುದು ಹೇಗೆ!

Post Office Recruitment Online Application Link- GDS ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗೆ ತಿಳಿಸಿರುವ ಹಂತಗಳನ್ನುಪಾಲನೆಮಾಡಿ ಅಧಿಕೃತ ಅಂಚೆ ಇಲಾಖೆಯ ವೆಬ್ಸೈಟ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-೧: ಮೊದಲು ಇಲ್ಲಿ Apply Now ಕ್ಲಿಕ್ ಮಾಡಿ ಅಧಿಕೃತ ಪೋಸ್ಟ್ ಅಪೀಸ್ ಜಾಲತಾಣವನ್ನು ಭೇಟಿ ಮಾಡಬೇಕು.

Step-2: ನಂತರ ಈ ಪುಟದ ಮೇಲೆ ಇರುವ “Stage 1.Registration” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ Mobile number ಅನ್ನು ಹಾಕಿ ಅಲ್ಲಿ ಕೇಳಿರುವ ಇತರೆ ಎಲ್ಲಾ ವಿವರವನ್ನು ಭರ್ತಿ ಮಾಡಿ ಅರ್ಜಿಯನ್ನು ಹಾಕಲು ರಿಜಿಸ್ಟರ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Ayushman Bharat- ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಆಹ್ವಾನ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು!

Step-3: ತದನಂತರ “Stage 2.Apply Online” ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Apply” ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ Registration Number ಮತ್ತು Circle Applying for ಈ 2 ಆಯ್ಕೆಯನ್ನು Select ಮಾಡಿಕೊಂಡು “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ Open ಆಗುತ್ತದೆ. ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ- Download Now

RELATED ARTICLES
- Advertisment -

Most Popular

Recent Comments