Sunday, December 22, 2024
No menu items!
HomeAgricultureSnake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!

Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!

ಹಾವು ಕಡಿತ ಇದು ಪ್ರತಿ ವರ್ಷವೂ ಸಹ ವಿಶ್ವದಾದ್ಯಂತ ಲಕ್ಷಾಂತರ ಜನರ ಸಾವಿಗೆ ಮತ್ತು ಅಂಗಾಂಗ ವೈಪಲ್ಯಕ್ಕೆ ಕಾರಣವಾಗುತ್ತಿದೆ. ಇದರಲ್ಲಿ ಕೆಲವು ವಿಷಕಾರಿ ಹಾವುಗಳ(poisonous snakes) ಕಡಿತವು ತುಂಬಾ ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಹಾವು ಕಡಿತವು(Snake bite)ತಕ್ಷಣದಲ್ಲಿ ಚಿಕಿತ್ಸೆಯನ್ನು ತೆಗೆದುಕೊಳ್ಳುವ ತುರ್ತು ಪರಿಸ್ಥಿತಿಯಾಗಿದೆ.

ಭಾರತದಲ್ಲಿ ಪ್ರತಿವರ್ಷ ಸುಮಾರು 60 ಸಾವಿರಕ್ಕೂ ಹೆಚ್ಚು ಜನರು ವಿಷಪೂರಿತ ಹಾವಿನ ಕಡಿತದಿಂದಾಗಿ ಸಾಯುತ್ತಿದ್ದಾರೆ. ಆದ್ದರಿಂದ ಸರಿಯಾದ ಸಮಯಕ್ಕೆ ಪ್ರಥಮ ಚಿಕಿತ್ಸೆ(First Aid) ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ.

ಬಹಳಷ್ಟು ಜನರಿಗೆ ಹಾವು ಕಡಿತದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂದು ಸರಿಯಾದ ಮಾಹಿತಿ ಇರುವುದೇ ಇಲ್ಲ ಇಂತಹ ಜನರಿಗೆ ಇಂದು ಈ ಕೆಳಗಿನ ಅಂಕಣದಲ್ಲಿ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: Digital Ration Card-ಅಧಿಕೃತ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಅಪ್ಲಿಕೇಶನ್ ಬಿಡುಗಡೆ!

ಹಾವುಗಳು ರೆಪ್ಪೆಯಲ್ಲಿಯ(Reptilia) ವರ್ಗಕ್ಕೆ ಸೇರಿದ ಪ್ರಾಣಿಗಳಾಗಿದ್ದು, ಈ ವಿಶ್ವದಾದ್ಯಂತ ವಿವಿಧ ವಾತಾವರಣಗಳಲ್ಲಿ ಜೀವಿಸುತ್ತಿರುತ್ತವೆ. ಹಾವುಗಳ ಚರ್ಮವು ಹಗುರವಾಗಿ ಉಸಿರಾಡಲು ಮತ್ತು ಚಲಿಸಲು ಸಹಾಯ ಮಾಡುತ್ತದೆ. ಇದೇ ರೀತಿ ಹಾವುಗಳು ತನ್ನ ಸಮಯಕ್ಕೆ ಅನುಗುಣವಾಗಿ ತಮ್ಮ ಹಳೆಯ ಚರ್ಮವನ್ನು ಬಿಚ್ಚಿಕೊಳ್ಳುತ್ತದೆ.

Types of snakes-ಹಾವುಗಳ ಪ್ರಕಾರಗಳು ಯಾವುವು?

ಹಾವುಗಳನ್ನು 2 ಪ್ರಮುಖ ವರ್ಗಗಳಾಗಿ ವಿಂಗಡಿಸಬಹುದು.

1)ವಿಷಕಾರಿ ಹಾವುಗಳು (poisonous snakes)
2)ವಿಷರಹಿತ ಹಾವುಗಳು(Non toxic snakes)

ಇದನ್ನೂ ಓದಿ: New Recharge plan-2024: ನೀವು Airtel ಮತ್ತು Jio ಸಿಮ್ ಬಳಸುತ್ತಿದ್ದೀರಾ ಹಾಗಾದ್ರೆ ತಪ್ಪದೇ ಈ ಮಾಹಿತಿ ಓದಿ! ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

What is a poisonous snake bite-ವಿಷಕಾರಿ ಹಾವು ಕಡಿತ ಎಂದರೇನು?

ವಿಷಪೂರಿತ ಹಾವು ಕಚ್ಚಿದಾಗ ಅದರ ವಿಷವು ಮನುಷ್ಯನ ದೇಹದ ಒಳಗೆ ಪ್ರವೇಶಿಸುವುದರಿಂದ ಆ ವಿಷವು ಹಾವಿನ ವಿಷಗ್ರಂಥಿ (Venom gland) ಇಂದ ಉತ್ಪತ್ತಿಯಾಗಿ ಹಲ್ಲಿನ ಮೂಲಕ ಲೋಳೆಯ ಪೊರೆಗಳು ವಿಷವನ್ನು ಹೀರಿಕೊಂಡು ದೇಹದ ಒಳಗೆ ಹಾಯುತ್ತದೆ. ಹಾಗೆಯೇ ವಿಷಕಾರಿ ಹಾವುಗಳಲ್ಲಿರುವ ವಿಷವು ಮನುಷ್ಯರ ಶರೀರದ ನರಮಂಡಲ ಹೃದಯ ರಕ್ತ ಪ್ರಸರಣ ಅಥವಾ ಮಾಂಸ ಖಂಡಗಳ ಮೇಲೆ ಹಾನಿ ಉಂಟು ಮಾಡುತ್ತದೆ.

ಉದಾಹರಣೆ: ಕಾಳಿಂಗ(Black Cobra), ಕತ್ತಲೆ ಹಾವು(Common krait), ತಂಬಳಗ(Russell’s Viper)

Snake bite

What is a non-venomous snake bite-ವಿಷ ರಹಿತ ಹಾವು ಕಡಿತ ಎಂದರೇನು?

ವಿಷ ರಹಿತ ಹಾವಿನ ಕಡಿತ ಎಂದರೆ ವಿಷಯುಕ್ತಪೂರಿತ ಹಾವು ಆಗಿಲ್ಲದೆ ಇದ್ದಾಗ ಹಾವು ಕಚ್ಚಿದರೂ ಸಹ ಯಾವುದೇ ರೀತಿಯ ವಿಷಕಾರಿ ಅಂಶಗಳು ಮನುಷ್ಯನ ದೇಹದ ಒಳಗೆ ಪ್ರವೇಶಿಸುವುದಿಲ್ಲ ಇದರಿಂದ ಮನುಷ್ಯನಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಇದನ್ನು ವಿಷರಹಿತ ಹಾವು ಕಡಿತ ಎನ್ನುತ್ತಾರೆ.

ಉದಾಹರಣೆ: ನೀರು ಹಾವು(Checkered keelback), ರತ್ನ ಹಾವು(rat snake)

ಇದನ್ನೂ ಓದಿ: Gold rate-ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಮತ್ತು ವಿದೇಶದಲ್ಲಿ ಇಂದಿನ ಚಿನ್ನದ ದರ ಹೀಗಿದೆ!

Symptoms of poisonous snakes-ವಿಷಪೂರಿತ ಹಾವುಗಳ ಲಕ್ಷಣಗಳು?

ಹಾವು ಕಚ್ಚಿದ ನಂತರ ಅದರಲ್ಲಿರುವ ವಿಷವು ದೇಹದ ಒಳಗೆ ಪ್ರವೇಶಿಸಿದಾಗ ದೇಹದಲ್ಲಿರುವ ಅಂಗಾಂಗಗಳ ಮೇಲೆ ಹಾನಿ ಉಂಟುಮಾಡುತ್ತದೆ. ಇದಲ್ಲದೆ ಇನ್ನೂ ಕಂಡುಬರುವಂತಹ ಲಕ್ಷಣಗಳನ್ನು ಈ ಕೆಳಗೆ ತಿಳಿಸಲಾಗಿದೆ.

1) ಹಾವು ಕಚ್ಚಿದ ಜಾಗದಲ್ಲಿ ಊತ ಹೆಚ್ಚಾಗುತ್ತದೆ ಮತ್ತು ಕೆಂಪಾಗುತ್ತದೆ.

2) ಹಾವು ಕಚ್ಚಿದ ಸ್ಥಳದಲ್ಲಿ ತೀವ್ರ ನೋವು ಉಂಟಾಗುತ್ತದೆ.

3) ಚರ್ಮದ ಬಣ್ಣವೂ ನೀಲಿ ಬಣ್ಣಕ್ಕೆ ತಿರುಗುತ್ತದೆ ಅಥವಾ ರಕ್ತಸ್ರಾವವಾಗುತ್ತದೆ.

4) ಹಾವು ಕಚ್ಚಿದಾಗ ಅತಿಯಾದ ಬೆವರು ಉಂಟಾಗುತ್ತಿರುತ್ತದೆ.

5) ಹಾವು ಕಚ್ಚಿದಾಗ ವಾಂತಿ ಅಥವಾ ತಲೆ ತಿರುಗುವ ಮುನ್ಸೂಚನೆ ಕಾಣಿಸುತ್ತದೆ.

6) ಹಾವು ಕಚ್ಚಿದಾಗ ನಡುಕ ಚಳಿ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ.

ಇದನ್ನೂ ಓದಿ: Yashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!

Side effects of snake bite-ಹಾವು ಕಚ್ಚಿದಾಗ ಉಂಟಾಗುವ ಅಡ್ಡ ಪರಿಣಾಮಗಳು?

ನ್ಯೂರೋಟಾಕ್ಸಿನ್(Neurotoxin): ನರಮಂಡಲದ ಮೇಲೆ ಹಾನಿ ಉಂಟುಮಾಡುತ್ತದೆ.

ಹಾವು ಕಚ್ಚಿದಾಗ ದೇಹದಲ್ಲಿರುವ ನಾಡಿ ಮಿಡಿತಗಳು ನಿಧಾನಗತಿಯಲ್ಲಿ ಬಡಿಯುತ್ತಿರುತ್ತವೆ.

ಹಾವು ಕಚ್ಚಿದಾಗ ಉಸಿರಾಟದ ತೊಂದರೆ ಯಾಗುತ್ತಿರುತ್ತದೆ ಹಾಗೆ ಮಾತಿನಲ್ಲಿ ಅಸ್ಪಷ್ಟತೆ ಕಾಣುತ್ತಿರುತ್ತದೆ ಮತ್ತು ಕುರುಡರು ಸಹ ಆಗಬಹುದು.

ಉದಾಹರಣೆ: ಕಾಳಿಂಗ((Black Cobra), ಕತ್ತಳೆ ಹಾವು(Common krait)

ಹಿಮೋಟಾಕ್ಸಿನ್(Hemotoxic): ರಕ್ತ ಹಾಗೂ ರಕ್ತನಾಳಗಳ ಮೇಲೆ ಹಾನಿ ಉಂಟು ಮಾಡುತ್ತವೆ.

ಹಾವು ಕಚ್ಚಿದ ಜಾಗದಲ್ಲಿ ತೀವ್ರ ಊತ ಉಂಟಾಗುತ್ತದೆ ಮತ್ತು ಚರ್ಮವು ಕೆಂಪಾದ ಬಣ್ಣಕ್ಕೆ ತಿರುಗಿರುತ್ತದೆ.

ಹಾವು ಕಚ್ಚಿದಾಗ ಮೂಗು, ಹಲ್ಲು ಅಥವಾ ಗಾಯಗಳಾಗಿರುವ ಜಾಗದಲ್ಲಿ ರಕ್ತಸ್ರಾವ ಉಂಟಾಗುತ್ತದೆ.

ಹಾವು ಕಚ್ಚಿದಾಗ ಮನುಷ್ಯ ಹೊರ ಹಾಕುವ ಮೂತ್ರವು ಕಪ್ಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿರುತ್ತದೆ.

ಇದನ್ನೂ ಓದಿ: Karnataka Government Jobs- ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಭರ್ಜರಿ ನೇಮಕಾರಿ! 975 ಹುದ್ದೆಗಳಿಗೆ ಅಧಿಸೂಚನೆ!

ದೇಹದಲ್ಲಿ ರಕ್ತದ ಒತ್ತಡವು ಕಡಿಮೆಯಾಗಿರುತ್ತದೆ.

ಉದಾಹರಣೆ: ತಂಬಳಗ(Russell’s Viper), ಹುಳಿಯ ಹಾವು(Saw-scaled viper)

ಮೈಟೋಟಾಕ್ಸಿನ್(Cytotoxic): ಜೀವಕೋಶಗಳ ಮೇಲೆ ಹಾನಿ ಉಂಟು ಮಾಡುತ್ತದೆ.

ಹಾವು ಕಚ್ಚಿದ ಜಾಗದಲ್ಲಿ ಗಾಯವಾಗುತ್ತದೆ ಮತ್ತು ಹಾವು ಕಚ್ಚಿದ ಜಾಗವು ಗಟ್ಟಿಯಾಗಿರುತ್ತದೆ.

ಹಾವು ಕಚ್ಚಿದಾಗ ಚರ್ಮ ಮತ್ತು ಮಾಂಸ ಖಂಡಗಳಲ್ಲಿ ಜೀವಕೋಶಗಳು ಮರಣ ಹೊಂದಿರುತ್ತದೆ.

ಹಾವು ಕಚ್ಚಿದ ಸ್ಥಳದಲ್ಲಿ ಹುಣ್ಣಾಗುತ್ತದೆ.

ಉದಾಹರಣೆ: ಹುಳಿಯ ಹಾವು(Saw-scaled viper)

First Aid for Venomous Snake Bites-ವಿಷಪೂರಿತ ಹಾವು ಕಚ್ಚಿದಾಗ ಮಾಡುವಂತಹ ಪ್ರಥಮ ಚಿಕಿತ್ಸೆಗಳು:

ವಿಷಪೂರಿತ ಹಾವು ಕಚ್ಚಿದಾಗ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತಿ ಮುಖ್ಯವಾಗಿದೆ.

ಹಾವು ಕಚ್ಚಿದ ನಂತರ ಆತಂಕ ಪಡಬೇಡಿ, ಶಾಂತವಾಗಿರಿ, ಚಲನೆ ಮಾಡಬೇಡಿ ಚಲನೆಯಿಂದ ವಿಷವು ಶರೀರದಲ್ಲಿ ಬೇಗನೆ ಹರಡುತ್ತದೆ.

ಹಾವು ಕಡಿದ ಜಾಗವನ್ನು ಹೃದಯದ ಮಟ್ಟಕ್ಕಿಂತ ಕೆಳಗೆ ಇಟ್ಟುಕೊಳ್ಳಬೇಕು ಇದರಿಂದ ವಿಷ ಹರಡುವುದು ನಿಧಾನವಾಗುತ್ತದೆ.

ಹಾವು ಕಡಿದ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಥವಾ ಗಾಯಕ್ಕೆ ಬಟ್ಟೆಯನ್ನು ಬಳಸಬೇಕು.

ಹಾವು ಕಚ್ಚಿದಾಗ ನೋವನ್ನು ನಿಯಂತ್ರಣ ಮಾಡಲು ಪ್ಯಾರಾಸಿಟಮಲ್ ಅಥವಾ ಪೇನ್ ಕಿಲ್ಲರನ್ನು ನೀಡಬಹುದು.

Don’t make these mistakes when bitten by a snake-ಹಾವು ಕಚ್ಚಿದಾಗ ಈ ತಪ್ಪು ಮಾಡದಿರಿ:

ಹಾವು ಕಚ್ಚಿದ ಜಾಗವನ್ನು ದಾರದಿಂದ ಕಟ್ಟಬಾರದು.

ಹಾವು ಕಚ್ಚಿದ ಜಾಗದಲ್ಲಿ ಹರಿತ ವಸ್ತುಗಳಿಂದ ಚುಚ್ಚಬಾರದು ಅಥವಾ ಕೊಯ್ಯುವುದು ಮಾಡಬಾರದು.

ಹಾವು ಕಡಿದ ಸಮಯದಲ್ಲಿ ಆತಂಕಕ್ಕೆ ಒಳಗಾಗಿ ಪ್ರಥಮದಲ್ಲೇ ನಾಟಿ ವೈದ್ಯರನ್ನು ಭೇಟಿ ಮಾಡದಿರಿ.

ಹಾವು ಕಡಿದಾಗ ಸಮಯ ವ್ಯರ್ಥ ಮಾಡದೆ ನೇರವಾಗಿ ನಿಮ್ಮ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.

RELATED ARTICLES
- Advertisment -

Most Popular

Recent Comments