Sunday, February 9, 2025
No menu items!
HomeNewsVeterinary Officer Job-ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

Veterinary Officer Job-ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

ಪಶು ಪಾಲನಾ & ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಖಾಲಿ ಉಳಿದಿರುವ 120 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಗುತ್ತಿಗೆ ಆದಾರದ ಮೇಲೆ ನೇಮಕಾತಿ(Veterinary Officer Job Notification) ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಹುದ್ದೆ ಅರ್ಜಿ ಸಲ್ಲಿಸಲು ಅರ್ಹರು ಯಾರು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಮಾಸಿಕ ವೇತನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Gold rate-ಕ್ರ‍ಿಸ್ ಮಸ್ ಗೂ ಮೊದಲೇ ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ಇಂದಿನ ಚಿನ್ನದ ದರ!

Veterinary Officer Job -2024: ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು:

ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪಶು ವೈದ್ಯಕೀಯ ವಿಜ್ಞಾನ ವಿಶ್ವ ವಿದ್ಯಾಲಯದಿಂದ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಪಡೆದ B.V.Sc. / B.V.Sc. & AH ಪದವಿ ಪೂರ್ಣಗೊಳಿಸಿರಬೇಕು ಹಾಗೂ ವಯೋಮಿತಿಯು ಕನಿಷ್ಠ 18 ರಿಂದ ಗರಿಷ್ಟ 35 ವರ್ಷದ ಒಳಗಿರಬೇಕು.

Age limit-ಗರಿಷ್ಟ ವಯೋಮಿತಿ:

OBC – 38 ವರ್ಷ
SC/ST/Cat-1 – 40 ವರ್ಷ

ಇದನ್ನೂ ಓದಿ: Pmkisan farmers list- ಕಿಸಾನ್ ಸಮ್ಮಾನ್ ಯೋಜನೆಯಡಿ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ!

Veterinary Officer Job

Monthly Salary-ಮಾಸಿಕ ವೇತನ ವಿವರ:

ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ₹52,650 ರೂ ವೇತನವನ್ನು ಇಲಾಖೆಯಿಂದ ನಿಗದಿಪಡಿಸಲಾಗಿದ್ದು ಇದನ್ನು ಹೊರತುಪಡಿಸಿ ಯಾವುದೇ ಬಗ್ಗೆಯ ಪ್ರಯಾಣ ಭತ್ಯೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

Veterinary Officer Selection Method-ಆಯ್ಕೆ ವಿಧಾನ:

ಪಶುಸಂಗೋಪನೆ ವಿಭಾಗದಲ್ಲಿ ಪದವಿಯಲ್ಲಿ(B.V.Sc. / B.V.Sc. & AH ) ಪಡೆದಿರುವ ಒಟ್ಟು ಅಂಕದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದ್ದು ಈ ಹುದ್ದೆಗೆ ಯಾವುದೇ ಬಗ್ಗೆಯ ಲಿಖಿತ ಪರೀಕ್ಷೆ ಇರುವುದಿಲ್ಲ.

ಇದನ್ನೂ ಓದಿ: Parihara farmer list-ರೈತರ ಖಾತೆಗೆ ₹297 ಕೋಟಿ ಪರಿಹಾರ! ಹಳ್ಳಿವಾರು ಪಟ್ಟಿ ಬಿಡುಗಡೆ!

Online Application for Veterinary doctor Job-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಕೆಳಗಿನ ವಿಧಾನವನ್ನು ಅನುಸರಿಸಿ ಅರ್ಹ ಅಭ್ಯರ್ಥಿಗಳು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು.

Documents-ದಾಖಲೆಗಳು:

(a) ಅರ್ಜಿದಾರರ ಅಧಾರ್ ಕಾರ್ಡ
(b) ಅಂಕಪಟ್ಟಿ
(c) ಪೋಟೊ
(d) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
(e) ಮೀಸಲಾತಿಗೆ ಸಂಬಂಧಿಸಿದ ದಾಖಲೆಗೆಳು

ಇದನ್ನೂ ಓದಿ: Gruhalakshmi Status- ನಿಮ್ಮ ಆಧಾರ್ ನಂಬರ್ ಹಾಕಿ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Step-1: ಪ್ರಥಮದಲ್ಲಿ Apply Now ಇಲ್ಲಿ ಕ್ಲಿಕ್ ಮಾಡಿ ಪಶುಸಂಗೋಪನೆ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ “Submit Application For The Post Of Veterinary Officer/ ಪಶುವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿರುವ Privew ಬಟನ್ ಮೇಲೆ ಕ್ಲಿಕ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಹಾಕಬೇಕು.

Veterinary Officer Job application

Step-3: ಬಳಿಕ ಇಲ್ಲಿ ಕ್ಲಿಕ್ ಮಾಡಿ “Upload Your Photo,Signature/ನಿಮ್ಮ ಭಾವ ಚಿತ್ರ, ಸಹಿ ಅಪ್ಲೋಡ್ ಮಾಡಲು” ಬಟನ್ ಮೇಲೆ ಒತ್ತಿ ಅಭ್ಯರ್ಥಿಯ ಪೋಟೋ, ಸಹಿಯನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಅರ್ಜಿಯನ್ನು ಮುದ್ರಿಸಿ ಆಯ್ಕೆಯ ಮೇಲೆ ಒತ್ತಿ ಅಂತಿಮ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Veterinary Officer Job Notification ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: Download Now

RELATED ARTICLES
- Advertisment -

Most Popular

Recent Comments