Sunday, February 9, 2025
No menu items!
HomeAgricultureTogari MSP-ಕೃಷಿ ಮಾರಾಟ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ!

Togari MSP-ಕೃಷಿ ಮಾರಾಟ ಮಂಡಳಿಯಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ!

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಕದೊಂದಿಗೆ ಕೃಷಿ ಅಭಿವೃದ್ಧಿ ಮತ್ತು ರೈತರ ಆರ್ಥಿಕ ಪರಿಸ್ಥಿತಿಯನ್ನು ಕಡಿಮೆ ಮಾಡಲು ಕನಿಷ್ಠ ಬೆಂಬಲ ಬೆಲೆ(Minimum Support Price) ಯೋಜನೆಯಡಿಯಲ್ಲಿ ತೊಗರಿ ಖರೀದಿ ಮಾಡಲು ಕೃಷಿ ಮಾರಾಟ ಮಂಡಳಿಯಿಂದ(Agricultural Marketing Board) ಪ್ರಕಟಣೆ ಹೊರಡಿಸಲಾಗಿದೆ.

ಈ MSP ಯೋಜನೆಯ ರೈತರಿಗೆ ಮಾರುಕಟ್ಟೆಯಲ್ಲಿನ ಅವಲಂಬನೆ ಕಡಿಮೆ ಮಾಡಿ ಇತರ ಮಾರಾಟ ಮಾರ್ಗಗಳಿಗೆ ಪ್ರೋತ್ಸಾಹ ನೀಡಲು ಮತ್ತು ಬೆಲೆಗಳ ಮಿತಿಯನ್ನು ಕಾಯ್ದುಕೊಳ್ಳಲು ಪಾತ್ರ ವಹಿಸುತ್ತದೆ. ತೊಗರಿ ಬೆಳೆಗಾರರಿಗೆ ಬೆಲೆ ಕಡಿಮೆಯಾದ ಸಂದರ್ಭಗಳಲ್ಲಿ ತೊಂದರೆ ಬರದಂತೆ ಕೇಂದ್ರ ಸರ್ಕಾರವು ನಿಗದಿತ ಬೆಲೆಯಲ್ಲಿ(Agricultural support price, ) ಬೆಳೆ ಖರೀದಿ ಮಾಡಲು ಸರ್ಕಾರ ಘೋಷಣೆ ಮಾಡಿದೆ.

ಇದನ್ನೂ ಓದಿ: Home Loan Subsidy- ಶೇ 4% ರಷ್ಟು ಸಬ್ಸಿಡಿಯಲ್ಲಿ ಗೃಹ ಸಾಲ ಪಡೆಯಲು ಅರ್ಜಿ ಆಹ್ವಾನ!

2024-25 ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ ಖರೀದಿ(Togari Msp Price) ಪ್ರಕ್ರಿಯೆ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ರಾಜ್ಯದ ಪ್ರಮುಖ ಜಿಲ್ಲೆಗಳಾದ ರಾಯಚೂರು,ಕಲಬುರಗಿ, ವಿಜಯನಗರ, ಬಾಗಲಕೋಟೆ, ಬೀದರ್, ಯಾದಗಿರಿ, ವಿಜಯಪುರ, ಬಳ್ಳಾರಿ, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ತೊಗರಿಯನ್ನು ಖರೀದಿ ಮಾಡಲಾಗುವುದು ಎಂದು ಕೃಷಿ ಮಾರಾಟ ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರ ನೊಂದಣಿಗೆ ಅವಕಾಶ ನೀಡುತ್ತದೆ. ಆದ್ದರಿಂದ ತೊಗರಿ ಮಾರಾಟ ಮಾಡಲು ಯಾರು ಅರ್ಜಿ ಸಲ್ಲಿಸಬೇಕು?ಅಗತ್ಯ ದಾಖಲೆಗಳೆನು? ತೊಗರಿ ಮಾರಾಟ ಮಾಡಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು? ಎಂಬುದನ್ನುಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PM Kisan Yojana- ಕಿಸಾನ್ ಸಮ್ಮಾನ್ 19ನೇ ಕಂತಿನ ಅರ್ಥಿಕ ನೆರವು ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

The support price fixed by the selling center for leather is-ತೊಗರಿಗೆ ಮಾರಾಟ ಕೇಂದ್ರದಿಂದ ನಿಗದಿಪಡಿಸಿರುವ ಬೆಂಬಲ ಬೆಲೆ:

ಕೇಂದ್ರ ಸರಕಾರದಿಂದ ರೈತರಿಂದ ನೇರವಾಗಿ ತೊಗರಿಯನ್ನು ಖರೀದಿ ಮಾಡಲು ಪ್ರತಿ ಕ್ವಿಂಟಾಲ್ ಗೆ ರೂ 7,550/- ನಿಗದಿಪಡಿಸಲಾಗಿದ್ದು ಪ್ರತಿ ಎಕರೆಗೆ 4 ಕ್ವಿಂಟಾಲ್ ನಂತೆ ಗರಿಷ್ಥ 40 ಕ್ವಿಂಟಾಲ್ ವರಗೆ ಖರೀದಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Important Actions of Agricultural Marketing Board-ಕೃಷಿ ಮಾರಾಟ ಮಂಡಳಿಯ ಪ್ರಮುಖ ಕ್ರಮಗಳು:

1) ಪ್ರತಿ ಎಕರೆಗೆ 04 ಕ್ವಿಂಟಲ್ ರಂತೆ – ಗರಿಷ್ಠ 40 ಕ್ವಿಂಟಲ್ ವರೆಗೆ ರೈತರಿಂದ ಖರೀದಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Crop Insurance- ಫಸಲ್ ಭೀಮಾ ಯೋಜನೆಯಡಿ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಬಿಡುಗಡೆ!

2) ರೈತ ಬಾಂಧವರು ತಮ್ಮ ಹತ್ತಿರದ PACS/FPO/TAPCMS ಗಳಲ್ಲಿ ತಮ್ಮ FID ಸಂಖ್ಯೆ ನೀಡಿ ನೊಂದಣಿ ಮಾಡಿಕೊಂಡು ತೊಗರಿ ಮಾರಾಟ ಮಾಡಬಹುದಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ತಿಳಿಸಲಾಗಿದೆ.

Where to apply for sale to Togari-ತೊಗರಿಗೆ ಮಾರಾಟ ಮಾಡಲು ಎಲ್ಲಿಅರ್ಜಿಯನ್ನು ಸಲ್ಲಿಸಬೇಕು?

ಅರ್ಹ ರೈತರು ಬೆಂಬಲ ಬೆಲೆಯಲ್ಲಿ ತೊಗರಿಯನ್ನು ಮಾರಾಟ ಮಾಡಲು ತಮ್ಮ ಹತ್ತಿರದ ತೊಗರಿ ಖರೀದಿ ಕೇಂದ್ರವನ್ನು ಅಗತ್ಯ ದಾಖಲಾತಿಗಳೊಂದಿಗೆ ಕಚೇರಿ ಸಮಯದಲ್ಲಿ ಭೇಟಿ ನೀಡಿ ಮುಂಚಿತವಾಗಿ ನೋಂದಣಿಯನ್ನು ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

togari

ಇದನ್ನೂ ಓದಿ: Ration Card Correction: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

Documents required for registration to sell to Togari-ತೊಗರಿಗೆ ಮಾರಾಟ ಮಾಡಲು ನೊಂದಣಿ ಮಾಡಿಕೊಳ್ಳಲು ಬೇಕಾದ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ/Adhar card
2) ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್/Bank Pass book
3) ಅರ್ಜಿದಾರರ ಪ್ರೂಟ್ಸ್ ಐಡಿ/FID Number
4) ಅರ್ಜಿದಾರರ ಮೊಬೈಲ್ ನಂಬರ್/Mobile Number
5) ಅರ್ಜಿದಾರರ ಜಮೀನಿನ ಪಹಣಿ/RTC

ಇದನ್ನೂ ಓದಿ: Power Tiller Subsidy- ಶೇ.90% ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ ಆಹ್ವಾನ!

Registration method-ತೊಗರಿಗೆ ಮಾರಾಟ ಮಾಡಲು ನೋಂದಣಿ ಮಾಡಿಕೊಳ್ಳುವ ವಿಧಾನ:

ರೈತರು ತಮ್ಮ ಹತ್ತಿರದ PACS (Primary Agricultural Credit Societies), FPO (Farmer Producer Organizations), ಅಥವಾ TAPCMS (Tenant Agricultural Produce Co-operative Marketing Societies)ನಲ್ಲಿ ತಮ್ಮ FID ಸಂಖ್ಯೆ ನೀಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ತಾಲ್ಲೂಕಿನ ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕಚೇರಿಯನ್ನು ಭೇಟಿ ಮಾಡಿ.

RELATED ARTICLES
- Advertisment -

Most Popular

Recent Comments