Sunday, June 22, 2025
No menu items!
HomeAgricultureTarpaulin Subsidy- ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

Tarpaulin Subsidy- ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಬ್ಸಿಡಿಯಲ್ಲಿ ಟರ್ಪಾಲಿನ್ ವಿತರಣೆಗಾಗಿ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳು ಮತ್ತು ಇತರ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ರೈತರಿಗೆ ಟರ್ಪಾಲಿನ್‌ನ ಪ್ರಾಮುಖ್ಯತೆ ಏನು?

ಟರ್ಪಾಲಿನ್ ರೈತರಿಗೆ ಅತ್ಯಗತ್ಯವಾದ ಪರಿಕರವಾಗಿದ್ದು, ಇದು ಕೃಷಿ, ಕೃಷಿ ಉತ್ಪನ್ನಗಳ ಸಾಗಾಣಿಕೆ, ಮತ್ತು ದೈನಂದಿನ ಜೀವನದ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತದೆ. ಇದು ಜಲನಿರೋಧಕ, ಬಾಳಿಕೆ ಬರುವ ಮತ್ತು ವಿಭಿನ್ನ ಹವಮಾನ ಪರಿಣಾಮಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ.

ಇದನ್ನೂ ಓದಿ: Pension Scheme- ತಿಂಗಳಿಗೆ ರೂ 5,000/- ಪಿಂಚಣಿ ಪಡೆಯಲು ಅವಕಾಶ!

ಸಬ್ಸಿಡಿಯಲ್ಲಿ ಸಿಗುವ ಟರ್ಪಾಲಿನ್‌ನ ಅಳತೆ:

ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ವಿತರಿಸಲಾಗುವ ಟರ್ಪಾಲಿನ್‌ನ ಗಾತ್ರವು 8 ಮೀಟರ್ ಉದ್ದ ಮತ್ತು 6 ಮೀಟರ್ ಅಗಲವನ್ನು ಹೊಂದಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

ಅಭ್ಯರ್ಥಿಯ ಆಧಾರ್ ಕಾರ್ಡ್/Aadhar card

ಬ್ಯಾಂಕ್ ಪಾಸ್‌ಬುಕ್/Bank passbook

ಜಮೀನಿನ ಪಹಣಿ/RTC

ರೈತರ ಭಾವಚಿತ್ರ/Photocopy

ಮೊಬೈಲ್ ಸಂಖ್ಯೆ/Mobile number

ಇದನ್ನೂ ಓದಿ: Marriage Registration-ವಿವಾಹ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ!

ಕೃಷಿ ಇಲಾಖೆಯಲ್ಲಿ ನೀಡುವ ಸಬ್ಸಿಡಿ ಮೊತ್ತ ಎಷ್ಟು?

ಕೃಷಿ ಸಂಸ್ಕರಣೆ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ. 50% ಸಬ್ಸಿಡಿ ಮತ್ತು SC/ST ವರ್ಗದ ರೈತರಿಗೆ ಶೇ. 90% ಸಬ್ಸಿಡಿಯನ್ನು ನೀಡಲಾಗುತ್ತದೆ.

ಟಾರ್ಪಲಿನ್ ಪಡೆಯಲು ಎಲ್ಲಿಅರ್ಜಿಯನ್ನು ಸಲ್ಲಿಸಬೇಕು?

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹಳ್ಳಿಯ ವ್ಯಾಪ್ತಿಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

tarpalin

ಪ್ರಸ್ತುತ ಅರ್ಜಿ ಆಹ್ವಾನಿತ ಜಿಲ್ಲೆಗಳಾವುವು?

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇತರ ಜಿಲ್ಲೆಗಳಲ್ಲಿ ಅನುದಾನದ ಲಭ್ಯತೆಯ ಆಧಾರದ ಮೇಲೆ ಅರ್ಜಿಗಳನ್ನು ಕರೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Free Sewing Machine- ಹೊಲಿಗೆ ಯಂತ್ರಕ್ಕೆ ಸಹಾಯಧನ! ಉಚಿತ ಹೊಲಿಗೆ ತರಬೇತಿಗೆ ಅರ್ಜಿ!

ಟರ್ಪಾಲಿನ್ ಬಳಕೆ ವಿವರ:

ಕೃಷಿ ಉತ್ಪನ್ನಗಳ ರಕ್ಷಣೆ: ಧಾನ್ಯಗಳು, ಬೆಳೆಗಳು, ಗೊಬ್ಬರ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಮಳೆ, ಬಿಸಿಲು ಮತ್ತು ಧೂಳಿನಿಂದ ರಕ್ಷಿಸಲು ಟರ್ಪಾಲಿನ್ ಅನ್ನು ಬಳಸಲಾಗುತ್ತದೆ.

ಕೊಯ್ಲಿನ ನಂತರ ಬೆಳೆಗಳನ್ನು ತಾತ್ಕಾಲಿಕವಾಗಿ ಶೇಖರಿಸಲು ಇದು ಸಹಾಯಕವಾಗಿದೆ.

ಸಾಗಾಣಿಕೆ: ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ ಟರ್ಪಾಲಿನ್‌ನಿಂದ ಮುಚ್ಚಿ, ಉತ್ಪನ್ನಗಳನ್ನು ಹವಾಮಾನದಿಂದ ರಕ್ಷಿಸಲಾಗುತ್ತದೆ.

ನೀರಿನ ಶೇಖರಣೆ: ಕೆಲವು ಸಂದರ್ಭಗಳಲ್ಲಿ, ಟರ್ಪಾಲಿನ್‌ನಿಂದ ಕೊಳವೆಗಳನ್ನು ರಚಿಸಿ ಮಳೆನೀರನ್ನು ಶೇಖರಿಸಲು ಬಳಸಲಾಗುತ್ತದೆ, ಇದು ನೀರಾವರಿಗೆ ಸಹಾಯಕವಾಗಿದೆ.

ಇದನ್ನೂ ಓದಿ: Mobile Repair Training-ಮೊಬೈಲ್ ರಿಪೇರಿ ಶಾಪ್ ತೆರೆಯುವವರಿಗೆ ಇಲ್ಲಿದೆ ಸುವರ್ಣಾವಕಾಶ!

ತಾತ್ಕಾಲಿಕ ಆಶ್ರಯ: ಕೃಷಿಕರು ಕೃಷಿ ಕೆಲಸದ ವೇಳೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲು ಟರ್ಪಾಲಿನ್ ಬಳಸುತ್ತಾರೆ, ಇದು ಮಳೆ ಅಥವಾ ಬಿಸಿಲಿನಿಂದ ರಕ್ಷಣೆ ನೀಡುತ್ತದೆ.

ಪಶುಸಂಗೋಪನೆ: ಜಾನುವಾರುಗಳಿಗೆ ತಾತ್ಕಾಲಿಕ ಆಶ್ರಯವನ್ನು ಒದಗಿಸಲು ಅಥವಾ ಒಣಹುಲ್ಲು, ಮೇವು ಮುಂತಾದವುಗಳನ್ನು ರಕ್ಷಿಸಲು ಟರ್ಪಾಲಿನ್ ಬಳಕೆಯಾಗುತ್ತದೆ.

ಕೃಷಿ ಉಪಕರಣಗಳ ರಕ್ಷಣೆ: ಟ್ರಾಕ್ಟರ್, ಕೃಷಿ ಯಂತ್ರಗಳು ಮತ್ತು ಇತರ ಉಪಕರಣಗಳನ್ನು ಹವಾಮಾನದಿಂದ ರಕ್ಷಿಸಲು ಟರ್ಪಾಲಿನ್‌ನಿಂದ ಮುಚ್ಚಲಾಗುತ್ತದೆ.

ಇದನ್ನೂ ಓದಿ: Adike Krishi-ಅಡಿಕೆ ಸಸಿಯನ್ನು ಬೆಳೆಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

ವಿಶೇಷ ಸೂಚನೆ:

ರಾಜ್ಯದಾದ್ಯಂತ ಟರ್ಪಾಲಿನ್‌ಗೆ ರೈತರಿಂದ ಹೆಚ್ಚಿನ ಬೇಡಿಕೆಯಿದೆ. ಆಯಾ ಜಿಲ್ಲೆಯಲ್ಲಿ ಲಭ್ಯವಿರುವ ಅನುದಾನದ ಆಧಾರದ ಮೇಲೆ ಟರ್ಪಾಲಿನ್‌ಗಳನ್ನು ವಿತರಿಸಲಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುತ್ತದೆ, ಆದರೆ ಕೆಲವೆಡೆ ಲಾಟರಿ ವಿಧಾನದ ಮೂಲಕ ವಿತರಣೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಕೃಷಿ ಇಲಾಖೆ ವೆಬ್‌ಸೈಟ್

RELATED ARTICLES
- Advertisment -

Most Popular

Recent Comments