ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆ (APY)ಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ 60 ವರ್ಷದ ನಂತರ ತಿಂಗಳಿಗೆ ₹1,000 ರಿಂದ ₹5,000 ವರೆಗಿನ ಖಾತರಿಯಾದ ಪಿಂಚಣಿಯನ್ನು ಪಡೆಯಬಹುದಾಗಿದೆ.
ಪ್ರಸ್ತುತ ಈ ಅಂಕಣದಲ್ಲಿ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು ಹಾಗೂ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
ಇದನ್ನೂ ಓದಿ: Marriage Registration-ವಿವಾಹ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ!
ಅಟಲ್ ಪಿಂಚಣಿ ಯೋಜನೆ (APY) ಎಂದರೇನು?
2015-16ರ ಕೇಂದ್ರ ಬಜೆಟ್ನಲ್ಲಿ ಘೋಷಿತವಾದ ಅಟಲ್ ಪಿಂಚಣಿ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಾದ ಗೃಹ ಕೆಲಸಗಾರರು, ತೋಟಗಾರರು, ವಿತರಣಾ ಕಾರ್ಮಿಕರು ಮತ್ತು ಇತರರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮೂಲಕ ನಿರ್ವಹಿಸುತ್ತದೆ.
ಈ ಯೋಜನೆಯು ಹಿಂದಿನ ಸ್ವಾವಲಂಬನ ಯೋಜನೆಯನ್ನು ಬದಲಾಯಿಸಿದ್ದು, 18 ರಿಂದ 40 ವರ್ಷದೊಳಗಿನ ಭಾರತೀಯ ನಾಗರಿಕರಿಗೆ ಲಭ್ಯವಿದೆ. ಗ್ರಾಹಕರು ತಮ್ಮ ಆದಾಯಕ್ಕೆ ತಕ್ಕಂತೆ ₹1,000, ₹2,000, ₹3,000, ₹4,000 ಅಥವಾ ₹5,000 ಮಾಸಿಕ ಪಿಂಚಣಿಯನ್ನು ಆಯ್ಕೆ ಮಾಡಬಹುದು. ಇದಕ್ಕೆ ತಕ್ಕಂತೆ ತಿಂಗಳಿಗೆ ಕಟ್ಟಬೇಕಾದ ಕೊಡುಗೆಯ ಮೊತ್ತವು ಬದಲಾಗುತ್ತದೆ.
ಇದನ್ನೂ ಓದಿ: Free Sewing Machine- ಹೊಲಿಗೆ ಯಂತ್ರಕ್ಕೆ ಸಹಾಯಧನ! ಉಚಿತ ಹೊಲಿಗೆ ತರಬೇತಿಗೆ ಅರ್ಜಿ!
ಈ ಯೋಜನೆಯ ವೈಶಿಷ್ಟ್ಯತೆಗಳು:
ಗುರಿಯ ಗುಂಪು: ಅಸಂಘಟಿತ ವಲಯದ ಕಾರ್ಮಿಕರಿಗೆ ವಿಶೇಷವಾಗಿ ರೂಪಿಸಲಾದ ಯೋಜನೆಯು ಇದಾಗಿದೆ.
ಪಿಂಚಣಿ ಮೊತ್ತ: 60 ವರ್ಷದ ನಂತರ ₹1,000 ರಿಂದ ₹5,000 ವರೆಗಿನ ಮಾಸಿಕ ಪಿಂಚಣಿಯನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು: 18 ರಿಂದ 40 ವರ್ಷದೊಳಗಿನ ಭಾರತೀಯ ನಾಗರಿಕರು, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿರುವವರು.
ಅರ್ಜಿಯನ್ನು ಸಲ್ಲಿಸುವ ವಿಧಾನ:
ಆಸಕ್ತರು ತಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೆ, ಆನ್ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದು. ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ನೋಂದಣಿಯನ್ನು ಮಾಡಿಕೊಳ್ಳಬಹುದು.
ಇದನ್ನೂ ಓದಿ: Mobile Repair Training-ಮೊಬೈಲ್ ರಿಪೇರಿ ಶಾಪ್ ತೆರೆಯುವವರಿಗೆ ಇಲ್ಲಿದೆ ಸುವರ್ಣಾವಕಾಶ!
ಆನ್ಲೈನ್ ನ ಮೂಲಕ ನೋಂದಣಿಯನ್ನು ಹೇಗೆ ಮಾಡಬೇಕು?
ಹಂತ-1: ಮೊದಲು ಈ ಲಿಂಕ್ Apply now ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
ಹಂತ-2: ನಂತರ ಈ ಪೇಜ್ ನಲ್ಲಿ ಕಾಣುವ “Atal Pension Yojana” ಬಟನ್ ಮೇಲೆ ಕ್ಲಿಕ್ ಮಾಡಿ “APY Registration” ಮೇಲೆ ಒತ್ತಿದಾಗ ಅಧಿಕೃತ ಅರ್ಜಿ ನಮೂನೆಯು open ಆಗುತ್ತದೆ.
ಹಂತ-3: ಅಪ್ಲಿಕೇಶನ್ ಅಲ್ಲಿ ಅರ್ಜಿದಾರರು ಅಲ್ಲಿ ಕೇಳುವ ಎಲ್ಲಾ ವಿವರಗಳನ್ನು Fill ಮಾಡಿ ಕೆಳಗೆ Captcha ಕೋಡ್ ಅನ್ನು ನಮೂದಿಸಿ “Continue” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ-4: ನಂತರ ಅರ್ಹ ಅರ್ಜಿದಾರರು ಅಲ್ಲಿ ಕೇಳಿರುವ ಅಗತ್ಯ ದಾಖಲಾತಿಳೊಂದಿಗೆ ಹಾಗೂ ಅಪ್ಲಿಕೇಶನ್ ಅಲ್ಲಿ ನಿಗದಿಪಡಿಸಿದ ಮೊತ್ತವನ್ನು ಪಾವತಿ ಮಾಡಿ “Submit” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಗೆ ನಿಮ್ಮ ನೋಂದಣಿಯು ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ: Adike Krishi-ಅಡಿಕೆ ಸಸಿಯನ್ನು ಬೆಳೆಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್/Aadhar card
ವೋಟರ್ ಐಡಿ ಕಾರ್ಡ್/Voter ID
ಬ್ಯಾಂಕ್ ಪಾಸ್ಬುಕ್/Bank passbook
ಪಾಸ್ಪೋರ್ಟ್ ಸೈಜ್ ಪೋಟೊ/Photocopy
ಮೊಬೈಲ್ ಸಂಖ್ಯೆ/Mobile number
Pension Monthy Amount-ಪ್ರತಿ ತಿಂಗಳು ಎಷ್ಟು ಮೊತ್ತವನ್ನು ಪಾವತಿ ಮಾಡಬೇಕು?
1) 18 ವರ್ಷ ಪೂರ್ಣಗೊಂಡಿರುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಪ್ರತಿ ತಿಂಗಳು ಈ ಕೆಳಗೆ ತಿಳಿಸಿರುವ ಪಿಂಚಣಿ ಮೊತ್ತಕ್ಕೆ ಸರಿಯಾಗಿ ಮೊತ್ತವನ್ನು ಪಾವತಿ ಮಾಡಬೇಕು.
₹1,000 ಪಿಂಚಣಿಗೆ: ₹42/ತಿಂಗಳು
₹2,000 ಪಿಂಚಣಿಗೆ: ₹84/ತಿಂಗಳು
₹3,000 ಪಿಂಚಣಿಗೆ: ₹125/ತಿಂಗಳು
₹4,000 ಪಿಂಚಣಿಗೆ: ₹168/ತಿಂಗಳು
₹5,000 ಪಿಂಚಣಿಗೆ: ₹210/ತಿಂಗಳು
ಇದನ್ನೂ ಓದಿ: Bangalore Rain Forecast-ರಾಜ್ಯದ ಮಳೆ ಮುನ್ಸೂಚನೆ! 23 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!
2) 40 ವರ್ಷ ಪೂರ್ಣಗೊಂಡಿರುವವರು:
₹1,000 ಪಿಂಚಣಿಗೆ: ₹291/ತಿಂಗಳು
₹2,000 ಪಿಂಚಣಿಗೆ: ₹582/ತಿಂಗಳು
₹3,000 ಪಿಂಚಣಿಗೆ: ₹873/ತಿಂಗಳು
₹4,000 ಪಿಂಚಣಿಗೆ: ₹1,164/ತಿಂಗಳು
₹5,000 ಪಿಂಚಣಿಗೆ: ₹1,454/ತಿಂಗಳು
ಪಿಂಚಣಿಯನ್ನು ವಿತರಣೆ ವಿಧಾನ:
ಅರ್ಜಿದಾರರು 60 ವರ್ಷ ಪೂರ್ಣಗೊಳಿಸಿದ ನಂತರ, ಆಯ್ಕೆ ಮಾಡಿದ ಪಿಂಚಣಿ ಮೊತ್ತವನ್ನು ತಿಂಗಳಿಗೊಮ್ಮೆ ಪಡೆಯುತ್ತಾರೆ.
ಅರ್ಜಿದಾರರ ಮರಣದ ನಂತರ, ಪಿಂಚಣಿಯ ಮೊತ್ತವು ಅವರ ನಾಮಿನಿಗೆ ಅಂದರೆ ಹೆಂಡತಿ, ತಂದೆ, ತಾಯಿ, ಮಕ್ಕಳು ಅಥವಾ ಪೋಷಕರಿಗೆ ಹಣವು ವರ್ಗಾವಣೆಯಾಗುತ್ತದೆ.
ಇದನ್ನೂ ಓದಿ: Mobile Repair Training- 30 ದಿನದ ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ!
ಇತರ ಪ್ರಮುಖ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಇಲ್ಲಿ ಕ್ಲಿಕ್ ಮಾಡಿ