Sunday, June 22, 2025
No menu items!
HomeNewsMobile Repair Training-ಮೊಬೈಲ್ ರಿಪೇರಿ ಶಾಪ್ ತೆರೆಯುವವರಿಗೆ ಇಲ್ಲಿದೆ ಸುವರ್ಣಾವಕಾಶ!

Mobile Repair Training-ಮೊಬೈಲ್ ರಿಪೇರಿ ಶಾಪ್ ತೆರೆಯುವವರಿಗೆ ಇಲ್ಲಿದೆ ಸುವರ್ಣಾವಕಾಶ!

ಮೊಬೈಲ್ ರಿಪೇರಿ ಮಾಡುವ ಅಂಗಡಿಯನ್ನು ತೆರೆಯಲು ಆಸಕ್ತಿಯನ್ನು ಹೊಂದಿರುವ ನಿರುದ್ಯೋಗಿ ಯುವಕರಿಗೆ ಒಂದು ಉತ್ತಮ ಅವಕಾಶವಿದ್ದು ಉಚಿತವಾಗಿ ಮೊಬೈಲ್ ರಿಪೇರಿ ತರಬೇತಿ(Free Mobile Repair Training) ಮತ್ತು ಸ್ವ-ಉದ್ಯೋಗವನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಮಾರ್ಗದರ್ಶನ ಪಡೆಯಲು ಅರ್ಹ ಅಭ್ಯರ್ಥಿಗಳು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಮೊಬೈಲ್ ಫೋನ್(Mobile Repair Training) ಬಳಕೆಯು ಅವಿಭಾಜ್ಯ ಅಂಗವಾಗಿದೆ. ತಾಂತ್ರಿಕ ಸಾಧನಗಳ ಬಳಕೆಯು ದಿನೇ ದಿನೇ ಹೆಚ್ಚುತ್ತಿದ್ದು, ಆ ವಸ್ತುಗಳನ್ನು ಸರಿಪಡಿಸುವವರ ಅವಶ್ಯಕತೆಯೂ ಹೆಚ್ಚಾಗಿದ್ದು, ಅರ್ಹ ಯುವಕರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಜಿಯನ್ನು ಅಹ್ವಾನಿಸಲಾಗಿದೆ.

ಇದನ್ನೂ ಓದಿ: Adike Krishi-ಅಡಿಕೆ ಸಸಿಯನ್ನು ಬೆಳೆಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

ಪ್ರಸ್ತುತ ಈ ಲೇಖನದಲ್ಲಿ ಮೊಬೈಲ್ ರಿಪೇರಿ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಯಾರು ಸಲ್ಲಿಸಬೇಕು?ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Mobile Shop-ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ವಸತಿ ಮತ್ತು ಊಟ ಸಂಪೂರ್ಣ ಉಚಿತ:

ಮೊಬೈಲ್ ರಿಪೇರಿ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಅರ್ಜಿದಾರ ಅಭ್ಯರ್ಥಿಯು ಯಾವುದೇ ಬಗ್ಗೆಯ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಇದಲ್ಲದೇ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗೆ ವಸತಿ ಮತ್ತು ಊಟ ವ್ಯವಸ್ಥೆಯು ಸಂಪೂರ್ಣ ಉಚಿತವಾಗಿರುತ್ತದೆ.

Duration-ತರಬೇತಿಯ ಒಟ್ಟು ಅವಧಿ:

ಉಚಿತ ಮೊಬೈಲ್ ರಿಪೇರಿ ತರಬೇತಿಯು ದಿನಾಂಕ: 02 ಜೂನ್ 2025 ರಿಂದ 01 ಜುಲೈ 2025 ಅಂದರೆ ಒಟ್ಟು 30 ದಿನ ನಡೆಯಲಿದ್ದು ಈ ತರಬೇತಿಯಲ್ಲಿ ಮೊಬೈಲ್ ರಿಪೇರಿ ಕುರಿತು ಸಂಪೂರ್ಣ ಮಾಹಿತಿಯ ಜೊತೆಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವುದರ ಕುರಿತು ಮಾರ್ಗದರ್ಶನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Bangalore Rain Forecast-ರಾಜ್ಯದ ಮಳೆ ಮುನ್ಸೂಚನೆ! 23 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!

Mobile Repair Training

Who Can Apply – ಮೊಬೈಲ್ ರಿಪೇರಿ ತರಬೇತಿಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬೇಕು?

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.

ಅಭ್ಯರ್ಥಿಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಕಡ್ದಾಯವಾಗಿ ಬರಬೇಕು.

ಅಭ್ಯರ್ಥಿಯು 18 ರಿಂದ 45 ವರ್ಷದೊಳಗಿನ ಯುವಕರು ಅರ್ಜಿಯನ್ನು ಸಲ್ಲಿಸಬಹುದು.

BPL ಕಾರ್ಡ್ ಹೊಂದಿರುವ ಅಭ್ಯರ್ಥಿಗೆ ತರಬೇತಿಯಲ್ಲಿ ಪಾಲ್ಗೊಳಲು ಪ್ರಥಮ ಅದ್ಯತೆ ಇರುತ್ತದೆ.

How to apply- ಮೊಬೈಲ್ ರಿಪೇರಿ ತರಬೇತಿಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು?

ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮೊದಲೆ ಈ ಕೆಳಗೆ ನೀಡುವ ಮೊಬೈಲ್ ನಂಬರ್ ಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ರಿಜಿಸ್ಟರ್ ಮಾಡಿ ತರಬೇತಿಯಲ್ಲಿ ಭಾಗವಹಿಸುವಾಗ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ: Mobile Repair Training- 30 ದಿನದ ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ!

Documents-ತರಬೇತಿಯಲ್ಲಿ ಒದಗಿಸಬೇಕಾದ ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ/Aadhar card

2) ರೇಶನ್ ಕಾರ್ಡ/Ration Card

3) ಬ್ಯಾಂಕ್ ಪಾಸ್ ಬುಕ್/Bank Passbook

4) ಮೊಬೈಲ್ ನಂಬರ್/Mobile number

5) 4 ಪಾಸ್ ಪೊರ್ಟ್ ಸೈಜ್ ಫೋಟೊ/Photocopy

6) ಮತದಾರರ ಗುರುತು/Voter ID

ಇದನ್ನೂ ಓದಿ: Farm Pond Subsidy- ಶೇ 90% ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣ!

Training Center Address-ತರಬೇತಿ ನೀಡುವ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಉತ್ತರ ಕನ್ನಡ ಜಿಲ್ಲೆ

ಹೆಚ್ಚಿನ ವಿವರ ಪಡೆಯಲು ಸಹಾಯವಾಣಿ: 9449860007/9538281989

RELATED ARTICLES
- Advertisment -

Most Popular

Recent Comments