ವಿವಾಹ ಎಂಬುದು ಸಾಮಾಜಿಕ ಮತ್ತು ಕಾನೂನು ಬದ್ಧವಾದ ಸಂಸ್ಥೆಯಾಗಿದ್ದು,(Vivaha Registration) ಇದನ್ನು ಕಾನೂನು ರೀತಿಯಾಗಿ ದಾಖಲಿಸುವುದು ಅತ್ಯಂತ ಮುಖ್ಯವಾಗಿದೆ. ವಿವಾಹ ನೋಂದಣಿಯು ಕಾನೂನು ಪ್ರಕ್ರಿಯೆಯಾಗಿದ್ದು, ಇದರ ಮೂಲಕ ವಧು-ವರರ ಸಂಬಂಧವನ್ನು ಸರ್ಕಾರದ ದಾಖಲೆಗಳಲ್ಲಿ ರಿಜಿಸ್ಟ್ರೇಷನ್ ಮಾಡಿಸಬೇಕಾಗುತ್ತದೆ.
ಮದುವೆ ಎಂಬುದು ಕೇವಲ ನಂಬಿಕೆ ಆಚರಣೆಗೆ ಅಷ್ಟೇ ಅಲ್ಲದೆ, ವಿವಾಹಿತ ಜೀವನದಲ್ಲಿ ಎದುರಾಗಬಹುದಾದ ಕಾನೂನು, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕಾರಿಯಾಗಿದೆ.
ಇದನ್ನೂ ಓದಿ: Free Sewing Machine- ಹೊಲಿಗೆ ಯಂತ್ರಕ್ಕೆ ಸಹಾಯಧನ! ಉಚಿತ ಹೊಲಿಗೆ ತರಬೇತಿಗೆ ಅರ್ಜಿ!
ಪ್ರಸ್ತುತ ಈ ಅಂಕಣದಲ್ಲಿ ವಿವಾಹ ನೋಂದಣಿಯನ್ನು ಮಾಡಿಸಲು ಯಾವೆಲ್ಲಾ ದಾಖಲಾತಿಗಳು ಕಡ್ಡಾಯ, ಮತ್ತು ಅದರ ಪ್ರಯೋಜನಗಳೇನು ಮತ್ತು ಗ್ರಾಮ ಪಂಚಾಯತಿಯಲ್ಲಿ ನೋಂದಣಿಯ ಅವಕಾಶದ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.
ವಿವಾಹ ನೋಂದಣಿಯನ್ನು ಕಡ್ಡಾಯವಾಗಿ ಏಕೆ ಮಾಡಿಸಬೇಕು?
ವಿವಾಹ ನೋಂದಣಿಯು ಕಾನೂನು ದಾಖಲೆಯಾಗಿದ್ದು, ದಂಪತಿಗಳ ಹಕ್ಕುಗಳನ್ನು ರಕ್ಷಿಸುತ್ತದೆ. 2006 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಲ್ಲಾ ವಿವಾಹಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಖಚಿತಪಡಿಸಲಾಗಿದೆ. ಇದರಿಂದ ದಂಪತಿಗಳಿಗೆ ಕಾನೂನು ರಕ್ಷಣೆ, ಸಾಮಾಜಿಕ ಸುರಕ್ಷತೆ ಮತ್ತು ಆರ್ಥಿಕ ಲಾಭಗಳು ದೊರೆಯುತ್ತವೆ.
ವಿವಾಹ ನೋಂದಣಿಯಿಲ್ಲದೆ, ದಂಪತಿಗಳು ಕೆಲವು ಕಾನೂನು ಸೌಲಭ್ಯಗಳಿಂದ ಮೋಸಹೋಗಬಹುದು, ಉದಾಹರಣೆಗೆ:
ಇದನ್ನೂ ಓದಿ: Mobile Repair Training-ಮೊಬೈಲ್ ರಿಪೇರಿ ಶಾಪ್ ತೆರೆಯುವವರಿಗೆ ಇಲ್ಲಿದೆ ಸುವರ್ಣಾವಕಾಶ!
- ಆಸ್ತಿ ವಿವಾದಗಳು
- ಮಕ್ಕಳ ಕಾನೂನು ಹಕ್ಕುಗಳು
- ವಿಚ್ಛೇದನ
- ವಿದೇಶಕ್ಕೆ ವೀಸಾ ಪಡೆಯುವುದು
- ಬ್ಯಾಂಕ್ ಖಾತೆ ತೆರೆಯುವುದು
- ಸರ್ಕಾರಿ ಯೋಜನೆಗಳ ಲಾಭ ಪಡೆಯುವುದು
ಆದ್ದರಿಂದ, ವಿವಾಹ ನೋಂದಣಿಯನ್ನು ಮಾಡಿಸಿಕೊಳ್ಲುವುದು ಕಾನೂನು ಜವಾಬ್ದಾರಿಯಷ್ಟೇ ಅಲ್ಲ, ವಧು ವರರ ಭವಿಷ್ಯದ ಭದ್ರತೆಯ ಆಧಾರವಾಗಿದೆ.
ಇದನ್ನೂ ಓದಿ: Adike Krishi-ಅಡಿಕೆ ಸಸಿಯನ್ನು ಬೆಳೆಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!
ವಿವಾಹ ನೋಂದಣಿಯನ್ನು ಮಾಡಿಸಲು ಈ ದಾಖಲಾತಿಗಳು ಕಡ್ಡಾಯ?
- ಆಧಾರ್ ಕಾರ್ಡ್/Aadhar card
- ಪಾನ್ ಕಾರ್ಡ್/Pan card
- ವೋಟರ್ ಐಡಿ/Voter ID
- ರೇಶನ್ ಕಾರ್ಡ್/Ration card
- ವಧು-ವರರ ಜೋಡಿ ಫೋಟೋ/Photocopy
- SSLC ಮಾರ್ಕ್ಸ್ ಕಾರ್ಡ್/TC
- ಮದುವೆ ಆಹ್ವಾನ ಪತ್ರಿಕೆ/Invitation card
- ಜನನ ಪ್ರಮಾಣ ಪತ್ರ/Birth certificate
- 3 ಜನ ಸಾಕ್ಷಿದಾರರ ಆಧಾರ್ ಕಾರ್ಡ್ ಪ್ರತಿ
- ಮೊಬೈಲ್ ಸಂಖ್ಯೆ/Mobile number

ವಿವಾಹ ನೋಂದಣಿಗೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ವಿವಾಹ ನೋಂದಣಿಗಾಗಿ ವಧು ಮತ್ತು ವರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿ ತಮ್ಮ ಹಳ್ಳಿಯಲ್ಲಿರುವ ಗ್ರಾಮ ಪಂಚಾಯತಿಯ ಕಚೇರಿಯನ್ನು ಭೇಟಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ, ನಿಮ್ಮ ತಾಲೂಕಿನಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ಮಾಡಿಯೂ ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Bangalore Rain Forecast-ರಾಜ್ಯದ ಮಳೆ ಮುನ್ಸೂಚನೆ! 23 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!
ವಿವಾಹ ನೋಂದಣಿಯನ್ನು ಮಾಡಿಸುವುದರಿಂದಾಗುವ ಪ್ರಯೋಜನಗಳು:
ವಿವಾಹ ನೋಂದಣಿಯು ದಂಪತಿಗಳಿಗೆ ಹಲವಾರು ಕಾನೂನು, ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ಒದಗಿಸುತ್ತದೆ:
ಕಾನೂನು ರಕ್ಷಣೆ: ವಿವಾಹ ನೋಂದಣಿಯು ಸಂಬಂಧವನ್ನು ಕಾನೂನು ರೀತಿಯಲ್ಲಿ ಖಚಿತಪಡಿಸುತ್ತದೆ ಇದರಿಂದ ವಿಚ್ಛೇದನ, ಆಸ್ತಿ ವಿವಾದಗಳು ಅಥವಾ ದೌರ್ಜನ್ಯದಂತಹ ಸಂದರ್ಭಗಳಲ್ಲಿ ಕಾನೂನು ಸಹಾಯನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
ಆಸ್ತಿ ಹಕ್ಕು: ನೋಂದಣಿಯನ್ನು ಮಾಡಿಸಿದರೆ ಆಸ್ತಿ ವರ್ಗಾವಣೆ, ಉತ್ತರಾಧಿಕಾರ ಅಥವಾ ಜಂಟಿ ಆಸ್ತಿಯ ಹಕ್ಕುಗಳನ್ನು ಸುಲಭವಾಗಿ ಪಡೆಯಲು ಸಹಾಯವಾಗುತ್ತದೆ.
ವಿದೇಶ ಪ್ರಯಾಣ: ಹೊರ ದೇಶಕ್ಕೆ ಪ್ರಯಾಣವನ್ನು ಮಾಡಲು ವೀಸಾ ವನ್ನು ಪಡೆಯಲು, ವಿಶೇಷವಾಗಿ ದಂಪತಿಗಳು ಒಟ್ಟಿಗೆ ಪ್ರಯಾಣಿಸುವಾಗ, ವಿವಾಹ ನೋಂದಣಿ ಪ್ರಮಾಣ ಪತ್ರವು ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ: Mobile Repair Training- 30 ದಿನದ ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ!
ಸರ್ಕಾರಿ ಯೋಜನೆಗಳ ಲಾಭ: ವಿಮೆ, ಆರೋಗ್ಯ ಯೋಜನೆಗಳು ಅಥವಾ ಆರ್ಥಿಕ ಸಹಾಯದಂತಹ ಸರ್ಕಾರಿ ಯೋಜನೆಗಳಿಗೆ ನೋಂದಣಿಯನ್ನು ಮಾಡಿಸಿರುವ ಪ್ರಮಾಣ ಪತ್ರವು ಅಗತ್ಯವಾಗಿರುತ್ತದೆ.
ಮಕ್ಕಳ ಕಾನೂನು ಹಕ್ಕು: ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಉತ್ತರಾಧಿಕಾರದ ಹಕ್ಕುಗಳಿಗೆ ನೋಂದಣಿ ಸಹಾಯಕವಾಗಿದೆ.
ಬ್ಯಾಂಕ್ ಸೌಲಭ್ಯಗಳು: ಜಂಟಿ ಬ್ಯಾಂಕ್ ಖಾತೆ, ಸಾಲ ಅಥವಾ ಆರ್ಥಿಕ ವಹಿವಾಟುಗಳಿಗೆ ನೋಂದಣಿ ಪ್ರಮಾಣ ಪತ್ರ ಬೇಕಾಗುತ್ತದೆ.
ಗ್ರಾಮ ಪಂಚಾಯತಿಯಲ್ಲಿ ವಿವಾಹ ನೋಂದಣಿ ಮಾಡುವುದರಿಂದಾಗುವ ಪ್ರಯೋಜನಗಳು:
ಗ್ರಾಮೀಣ ಪ್ರದೇಶಗಳಲ್ಲಿ ವಿವಾಹ ನೋಂದಣಿಯನ್ನು ಸುಲಭಗೊಳಿಸಲು ಗ್ರಾಮ ಪಂಚಾಯತಿಗಳಿಗೆ ಈ ಅಧಿಕಾರವನ್ನು ನೀಡಲಾಗಿದೆ. ಇದರಿಂದ ಗ್ರಾಮೀಣ ಜನರು ಸಬ್-ರಿಜಿಸ್ಟ್ರಾರ್ ಕಚೇರಿಗೆ ದೂರ ಪ್ರಯಾಣಿಸುವ ಅಗತ್ಯವಿಲ್ಲ. ಗ್ರಾಮ ಪಂಚಾಯತಿಯಲ್ಲಿ ನೋಂದಣಿಗೆ ಮೇಲೆ ತಿಳಿಸಿದ ದಾಖಲಾತಿಗಳನ್ನು ಸಲ್ಲಿಸಬೇಕು.
ಇದನ್ನೂ ಓದಿ: Farm Pond Subsidy- ಶೇ 90% ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣ!
ಸ್ಥಳೀಯ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸಿ ವಿವಾಹವನ್ನು ದೃಢೀಕರಿಸುತ್ತಾರೆ. ಈ ಪ್ರಕ್ರಿಯೆ ಸರಳವಾಗಿದ್ದು, ಕೆಲವು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಗ್ರಾಮ ಪಂಚಾಯತಿಯಿಂದ ಒದಗಿಸಲಾದ ವಿವಾಹ ನೋಂದಣಿ ಪ್ರಮಾಣ ಪತ್ರವು ಸಬ್-ರಿಜಿಸ್ಟ್ರಾರ್ ಕಚೇರಿಯಿಂದ ನೀಡಲಾದ ಪ್ರಮಾಣ ಪತ್ರದಂತೆ ಕಾನೂನು ಮಾನ್ಯತೆಯನ್ನು ಹೊಂದಿರುತ್ತದೆ.
ವಿವಾಹ ನೋಂದಣಿಯು ದಂಪತಿಗಳ ಭವಿಷ್ಯದ ಭದ್ರತೆಗೆ ಆಧಾರವಾಗಿದ್ದು, ಇದನ್ನು ಕಡ್ಡಾಯವಾಗಿ ಮಾಡಿಸುವುದು ಎಲ್ಲರಿಗೂ ಒಳಿತು.