Sunday, December 22, 2024
No menu items!
HomeWeatherKarnataka weather- ರಾಜ್ಯದ ಹವಾಮಾನ ಮುನ್ಸೂಚನೆ ಮಾಹಿತಿ! ಇಲ್ಲಿದೆ ವಾಯುಭಾರ ಕುಸಿತದ ಮುನ್ಸೂಚನೆ!

Karnataka weather- ರಾಜ್ಯದ ಹವಾಮಾನ ಮುನ್ಸೂಚನೆ ಮಾಹಿತಿ! ಇಲ್ಲಿದೆ ವಾಯುಭಾರ ಕುಸಿತದ ಮುನ್ಸೂಚನೆ!

ಹವಾಮಾನ ಇಲಾಖೆಯ(Karnataka weather news) ಮುನ್ಸೂಚನೆಯ ಪ್ರಕಾರ ರಾಜ್ಯದಾದ್ಯಂತ ಒಣ ಹವೆಯಿರುವ ಸಾಧ್ಯತೆಯಿದೆ. ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಹಾಗೂ ಕೆಲವೆಡೆ ದಟ್ಟ ಮಂಜು ಮುಸುಕಿನ ವಾತಾವರಣ ಕಂಡುಬರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಮುಂದಿನ 5 ದಿನಗಳ ರಾಜ್ಯದಾದ್ಯಂತ(Karnataka rain forecast) ಒಣ ಹವೆಯಿರುವ ಸಾಧ್ಯತೆಯಿದ್ದು, ಡಿಸೆಂಬರ್ 17 ರಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮತ್ತು ಡಿಸೆಂಬರ್ 19 ರಿಂದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯು ಪುನಶ್ಚೇತನಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Yashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!

Karnataka weather-ನಾಳೆ(15.12.2024) ಬೆಳಿಗ್ಗೆ 8-00 ಗಂಟೆವರೆಗಿನ ಕರ್ನಾಟಕ ರಾಜ್ಯದ ಮಳೆ ಮುನ್ಸೂಚನೆ:

ಕರಾವಳಿ ಜಿಲ್ಲೆಗಳ ಮಳೆ ಮುನ್ಸೂಚನೆ:

ಕಾಸರಗೋಡು ಜಿಲ್ಲೆ ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದ್ದು, ಸಂಜೆ, ರಾತ್ರಿ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡ ಕವಿದ ವಾತಾವರಣದ ಸಾಧ್ಯತೆ ಇರುತ್ತದೆ. ಸುಳ್ಯ ತಾಲೂಕಿನ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದ್ದು. ಪ್ರಸ್ತುತ ಹವಾಮಾನ ಮುನ್ಸೂಚನೆಯ ಮಾಹಿತಿಯ ಪ್ರಕಾರ ಡಿಸೆಂಬರ್ 17ರ ತನಕ ಕರಾವಳಿ ಜಿಲ್ಲೆಗಳಲ್ಲಿ ಒಣ ಹವೆ ಆವರಿಸುವ ಲಕ್ಷಣಗಳಿವೆ.

ಇದನ್ನೂ ಓದಿ: Weather Forecast-2024: ಕರ್ನಾಟಕ ಮಳೆ ಮುನ್ಸೂಚನೆ! ದಿನಾಂಕ: 13-12-2024

ಮಲೆನಾಡು ಭಾಗ ಮುನ್ಸೂಚನೆ ಹೀಗಿದೆ:

ಕೊಡಗು ಜಿಲ್ಲೆಯಲ್ಲಿ ಮೋಡದ ವಾತಾವರಣದ ಜೋತೆಗೆ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇರುತ್ತದೆ. ಶಿವಮೊಗ್ಗ್, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಒಣ ಹವೆ ಆವರಿಸುವ ಮುನ್ಸೂಚನೆ ಇದ್ದು ಈಗಿನಂತೆ ಡಿಸೆಂಬರ್ 17ರ ತನಕ ಮಲೆನಾಡಿನಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆ ಹೆಚ್ಚು ಇದೆ.

male munsuchane

ಒಳನಾಡು ವ್ಯಾಪ್ತಿಯ ಮುನ್ಸೂಚನೆ :

ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಡಿಸೆಂಬರ್ 16ರ ತನಕ ಒಣ ಹವೆ ಮುಂದುವರಿಯಲಿದೆ. ಈಗಿನಂತೆ ಡಿಸೆಂಬರ್ 17ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ವಾಯುಭಾರ ಕುಸಿತದ ಮಳೆಯ ಮುನ್ಸೂಚೆನೆ ಇದೆ.

ಇದನ್ನೂ ಓದಿ: Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ!

Male mahiti- ವಾಯುಭಾರ ಕುಸಿತದ ಮುನ್ಸೂಚನೆ ಮಾಹಿತಿ ಹೀಗಿದೆ:

ಬಂಗಾಳಕೊಲ್ಲಿಯ ಅಂಡಮಾನ್ ನಿಕೋಬಾರ್ ಪಶ್ಚಿಮ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯು ವಾಯುಭಾರ (1002hPa) ಕುಸಿತವಾಗಿ ಡಿಸೆಂಬರ್ 18ರಂದು ತಮಿಳುನಾಡು ಕರಾವಳಿಗೆ ತಲಪುವ ನಿರೀಕ್ಷೆಯಿದೆ. ಚಂಡಮಾರುತವಾಗುವ ಸಾಧ್ಯತೆಗಳು ಕಡಿಮೆ ಇರಬಹುದು.

ತಮಿಳುನಾಡು ಕರಾವಳಿ ದಾಟಿ ಮುಂದೆ ಅರಬ್ಬಿ ಸಮುದ್ರ ಸೇರುವ ಸಾಧ್ಯತೆಗಳಿವೆ. ಹಾಗಾದರೆ ಮಾತ್ರ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿಯಬಹುದು. ಸಾಗುವ ಹಾದಿ ಕಾದು ನೋಡಬೇಕಾಗಿದೆ.

ಮಾಹಿತಿ ಕೃಷಿ: ಸಾಯಿ ಶೇಖರ್ ಬಿ ಮತ್ತು KSNDC, bengalure

ಇದನ್ನೂ ಓದಿ: Student Scholarship- ಈ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ರೂ 25,000 ಸಾವಿರ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ!

RELATED ARTICLES
- Advertisment -

Most Popular

Recent Comments