Monday, June 2, 2025
No menu items!
HomeWeatherKarnataka Weather-ರಾಜ್ಯದ ಮಳೆ ಮುನ್ಸೂಚನೆ ಮತ್ತು ಮುಂಗಾರು ಮಳೆ ಮಾಹಿತಿ!

Karnataka Weather-ರಾಜ್ಯದ ಮಳೆ ಮುನ್ಸೂಚನೆ ಮತ್ತು ಮುಂಗಾರು ಮಳೆ ಮಾಹಿತಿ!

ಕರ್ನಾಟಕ ಮಳೆ ಪ್ರಮಾಣ ನಕ್ಷೆಯ(Karnataka Rain Update) ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ವ್ಯಾಪ್ತಿಯಲ್ಲಿ ಅತ್ಯಧಿಕ 146 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ ಉಳಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ.

ಹವಾಮಾನ ಇಲಾಖೆಯ(IMD) ಮುನ್ಸೂಚನೆಯನ್ವಯ(Rain Forecast) ಇಂದು ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ 2 ಅಥವಾ 3 ದಿನಗಳ ಕಾಲ ರೇಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಹಾಗೂ ರಾಜ್ಯದಾದ್ಯಂತ ಗುಡುಗು ಮಿಂಚು & ಜೋರಾದ ಗಾಳಿಯೊಂದಿಗೆ ಕರಾವಳಿ & ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತೆ,

ಇದನ್ನೂ ಓದಿ: Free Aadhaar Update- ಉಚಿತವಾಗಿ ಆಧಾರ್ ಕಾರ್ಡ ಅಪ್ಡೇಟ್ ಕುರಿತು ಮಹತ್ವದ ಪ್ರಕಟಣೆ!

ಮಲೆನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ(Weather Forecast) ಹಾಗೂ ಅಲ್ಲಲ್ಲಿ ಭಾರಿ ಮತ್ತು ಅತಿ ಭಾರಿ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

Bengalure Weather news

Karnataka Weather-ರಾಜ್ಯದ ಹವಾಮಾನ ಮುನ್ಸೂಚನೆ ವಿವರ ಹೀಗಿದೆ:

ಕರಾವಳಿ ಜಿಲ್ಲೆಗಳಲ್ಲಿ:

ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಮುನ್ಸೂಚೆನೆ ಇದ್ದರೂ ತೀವ್ರತೆ ಸ್ವಲ್ಪ ಕಡಿಮೆಯಾಗಲಿದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚೆನೆ ಇದೆ.
ಈಗಿನಂತೆ ಮೇ 28 ರಿಂದ ಮತ್ತೆ ಮಳೆ ಚುರುಕಾಗುವ ಲಕ್ಷಣಗಳಿದ್ದು, ಜೂನ್ 3ರ ತನಕ ಮುಂದುವರಿಯುವ ಸಾಧ್ಯತೆಗಳಿವೆ.

ಇದನ್ನೂ ಓದಿ: Pension Scheme- ತಿಂಗಳಿಗೆ ರೂ 5,000/- ಪಿಂಚಣಿ ಪಡೆಯಲು ಅವಕಾಶ!

ಮಲೆನಾಡು ಜಿಲ್ಲೆಗಳಲ್ಲಿ:

ಕೊಡಗು ಜಿಲ್ಲೆಯಲ್ಲೂ ಮಳೆಯ ತೀವ್ರತೆ ಕಡಿಮೆಯಾಗುವ ಮುನ್ಸೂಚನೆ ಇದ್ದರೂ ಭಾಗಮಂಡಲ, ತಲಕಾವೇರಿ ಸುತ್ತಮುತ್ತ ಹಾಗೂ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

ಈಗಿನಂತೆ ಮೇ 28ರಿಂದ ಮುಂಗಾರು ಮತ್ತೆ ಚುರುಕಾದರೂ ಜೂನ್ 1ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.

ಇದನ್ನೂ ಓದಿ: Tarpaulin Subsidy- ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

ಒಳನಾಡು ಜಿಲ್ಲೆಗಳಲ್ಲಿ:

ಉತ್ತರ ಒಳನಾಡಿನ ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಹಾವೇರಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಉಳಿದ ಭಾಗಗಳಲ್ಲಿ ಮೋಡ ಮಾತ್ರ ಇರಬಹುದು.

ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮೈಸೂರು ಜಿಲ್ಲೆಯ ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

ಈಗಿನಂತೆ ಮೇ 28ರಿಂದ 2 ದಿವಸಗಳ ಕಾಲ ಉತ್ತರ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ ಇದ್ದು, ನಂತರ ಬಿಸಿಲಿನ ಅವಧಿ ಹೆಚ್ಚಿರಬಹುದು.

ಇದನ್ನೂ ಓದಿ: Marriage Registration-ವಿವಾಹ ನೋಂದಣಿಗೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ!

Karnataka Monsoon News- ಮುಂಗಾರು ಮಳೆ ಮಾಹಿತಿ:

ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ 4 ದಿನಗಳಲ್ಲಿ ಶಿಥಿಲಗೊಳ್ಳುತ್ತಿದ್ದಂತೆಯೇ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ.

Monsoon Entry Map-ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶದ ನಕ್ಷೆ:

ಭಾರತೀಯ ಹವಾಮಾನ ಇಲಾಖೆಯಿಂದ ಮುಂಗಾರು ಮಳೆ ರಾಜ್ಯಕ್ಕೆ ಯಾವ ಸಮಯಕ್ಕೆ ಪ್ರವೇಶ ಮಾಡಲಿದೆ ಎನ್ನವ ದಿನಾಂಕವನ್ನು ಸೂಚಿಸುವ ನಕ್ಷೆ:

Bengalure Weather (2)

RELATED ARTICLES
- Advertisment -

Most Popular

Recent Comments