ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ(Self-Employment Training Centre) ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಉಚಿತವಾಗಿ ಬೈಕ್ ರಿಪೇರಿ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಕರೆಯಲಾಗಿದೆ.
ಈ ತರಬೇತಿಯ ಮುಖ್ಯ ಉದ್ದೇಶವೇನೆಂದರೆ ಮೋಟರ್ ಸೈಕಲ್ ದುರಸ್ತಿ ಹಾಗೂ ಪ್ರಾಯೋಗಿಕ ಮತ್ತು ತಾಂತ್ರಿಕ ಕೌಶಲ್ಯಗಳನ್ನು(Practical and technical skills) ತಿಳಿಸಿಕೊಡುವುದು ಮತ್ತುಈ ಅವಕಾಶಗಳೊಂದಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡುತ್ತಾರೆ.
ಈ ತರಬೇತಿಯನ್ನು ಎಲ್ಲಿ ಆಯೋಜಿಸಲಾಗುತ್ತದೆ? ತರಬೇತಿಯ ಪ್ರಾರಂಭ ದಿನಾಂಕ ಯಾವುದು? ಅರ್ಜಿ ಸಲ್ಲಿಸುವ ಹಂತಗಳಾವುವು? ಯಾರು ಅರ್ಜಿ ಸಲ್ಲಿಸಬೇಕು? ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Gold rate-ಕ್ರಿಸ್ ಮಸ್ ಗೂ ಮೊದಲೇ ಇಳಿಕೆಯತ್ತ ಚಿನ್ನದ ದರ! ಇಲ್ಲಿದೆ ಇಂದಿನ ಚಿನ್ನದ ದರ!
Who should apply free 1 month bike repair training-ಉಚಿತ 1 ತಿಂಗಳ ಬೈಕ್ ರಿಪೇರಿ ತರಬೇತಿಯನ್ನು ಪಡೆಯಲು ಯಾರು ಅರ್ಜಿ ಸಲ್ಲಿಸಬೇಕು?
(1) ಉಚಿತ 1 ತಿಂಗಳ ಬೈಕ್ ರಿಪೇರಿ ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷ ಮೀರಿರಬಾರದು.
(2) ಅಭ್ಯರ್ಥಿಗೆ ಕನ್ನಡ ಭಾಷೆಯನ್ನು ಬರೆಯಲು ಮತ್ತು ಓದಲು ಕಡ್ಡಾಯವಾಗಿರಬೇಕು.
(3) ಅರ್ಜಿ ಸಲ್ಲಿಸುವವರು ಗ್ರಾಮೀಣ ಭಾಗದಲ್ಲಿ ವಾಸವಿರುವ BPL ಕಾರ್ಡ ಹೊಂದಿರುವ ಅರ್ಜಿದಾರರು ಈ ತರಬೇತಿಯಲ್ಲಿ ಭಾಗವಹಿಸುವ ಪ್ರಥಮ ಅದ್ಯತೆಯನ್ನು ನೀಡಲಾಗುತ್ತದೆ.
(4) ಅರ್ಜಿದಾರರು ಒಂದು ಭಾರಿ ಸಂಸ್ಥೆಯಿಂದ ತರಬೇತಿ ಪೂರ್ಣಗೊಳಿಸಿದ ನಂತರ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.
ಇದನ್ನೂ ಓದಿ: Pmkisan farmers list- ಕಿಸಾನ್ ಸಮ್ಮಾನ್ ಯೋಜನೆಯಡಿ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ!

Bike repair training is completely free of charge-ಬೈಕ್ ರಿಪೇರಿ ತರಬೇತಿಯು ಸಂಪೂರ್ಣ ಶುಲ್ಕ ರಹಿತವಾಗಿರುತ್ತದೆ:
ಒಂದು ತಿಂಗಳ ಬೈಕ್ ರಿಪೇರಿ ತರಬೇತಿಯು ಉಚಿತವಾಗಿದ್ದು ಯಾವುದೇ ಬಗೆಯ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ತರಬೇತಿ ಸಂಸ್ಥೆಯಲ್ಲೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
Where to apply for bike repair training-ಬೈಕ್ ರಿಪೇರಿ ತರಬೇತಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಆಸಕ್ತ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಎರಡು ಆಯ್ಕೆಗಳನ್ನು ಅನುಸರಿಸಿ ಅರ್ಜಿಯನ್ನು ಹಾಕಬವುದು ಒಂದು ಆನ್ಲೈನ್ ಮೂಲಕ ಈ ಲೇಖನದ ಕೊನೆಯಲ್ಲಿ ಹಾಕಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು ಇನ್ನೊಂದು ವಿಧಾನ ಎಂದರೆ ಅಭ್ಯರ್ಥಿಗಳು ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ತರಬೇತಿ ಪ್ರಾರಂಭವಾಗುವ ದಿನ ಹಾಜರಾಗಬಹುದು ಅಥವಾ ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಈ ಮೊಬೈಲ್ 9449860007, 9538281989, 9916783825, 888044612 ಸಂಖ್ಯೆಗಳಿಗೆ ಸಂಪರ್ಕಿಸಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.
ಇದನ್ನೂ ಓದಿ: Parihara farmer list-ರೈತರ ಖಾತೆಗೆ ₹297 ಕೋಟಿ ಪರಿಹಾರ! ಹಳ್ಳಿವಾರು ಪಟ್ಟಿ ಬಿಡುಗಡೆ!
What are documents required to apply for bike repair training-ಬೈಕ್ ರಿಪೇರಿ ತರಬೇತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳಾವುವು?
(1) ಅಭ್ಯರ್ಥಿಯ ಅಧಾರ್ ಕಾರ್ಡ/Candidate’s Aadhar Card
(2) ಅಭ್ಯರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ/Bank pass book copy of the candidate
(3) ಅಭ್ಯರ್ಥಿಯ ರೇಶನ್ ಕಾರ್ಡ ಪ್ರತಿ/Ration card copy of the candidate
(4) ಅಭ್ಯರ್ಥಿಯ ಮೊಬೈಲ್ ಸಂಖ್ಯೆ/Mobile number of the candidate
Duration of Bike Repair Training-ಬೈಕ್ ರಿಪೇರಿ ತರಬೇತಿ ನಡೆಯುವ ಅವಧಿ:
ಈ ತರಬೇತಿಯು ದಿನಾಂಕ: 08-01-2025 ರಿಂದ 06-01-2025 ರಂದು ಮುಕ್ತಾಯಗೊಳ್ಳಲಿದೆ.
Location of Bike Repair Training-ಬೈಕ್ ರಿಪೇರಿ ತರಬೇತಿ ನಡೆಯುವ ಸ್ಥಳ:
ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343
ಇನ್ನು ಹೆಚ್ಚಿನ ಮಾಹಿತಿಗಾಗಿ: 9449860007, 9538281989, 9916783825, 888044612
How to Apply Online-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಪ್ರಥಮದಲ್ಲಿ ಈ Apply Now ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇದರಲ್ಲಿ ನಿಮ್ಮ ಹೆಸರು, ಇಮೇಲ್, ತಂದೆಯ ಹೆಸರು, ಮೊಬೈಲ್ ಸಂಖ್ಯೆ, ಇತರೆ ವಿವರವನ್ನು ಭರ್ತಿ ಮಾಡಿ ಕೊನೆಯ ಕಾಲಂ ನಲ್ಲಿ ತರಬೇತಿಯನ್ನು ಆಯ್ಕೆ ಮಾಡಿಕೊಂಡು ಕೊನೆಯಲ್ಲಿ ಕೆಳಗೆ ಕಾಣುವ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.