ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯು 2025-26ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಟೆಕ್ಸ್‌ಟೈಲ್ ಟೆಕ್ನಾಲಜಿ ಕೋರ್ಸ್‌ನ ಪ್ರಥಮ ಸೆಮಿಸ್ಟರ್‌ಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಈ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಡಿಪ್ಲೋಮಾ ಕೋರ್ಸ್ 3 ವರ್ಷಗಳ ಅವಧಿಯನ್ನು ಹೊಂದಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: GKVK Bengaluru-ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ 59 ನೇ ಘಟಿಕೋತ್ಸವ!13 ಚಿನ್ನದ ಪದಕ ಪಡೆದ ದೀಪ್ತಿ!
ಈ ಲೇಖನದಲ್ಲಿ ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆ, ಬೆಂಗಳೂರು ವಿವರ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿ ಇನ್ನಿತರೆ ಸಂಪೂರ್ಣ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆ, ಬೆಂಗಳೂರು ವಿವರ ಹೀಗಿದೆ:
ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆ, (GITT), ಬೆಂಗಳೂರು 1976 ರಲ್ಲಿ ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲಾಯಿತು. ಸಂಸ್ಥೆಯು ನಗರದ ಹೃದಯಭಾಗದಲ್ಲಿದೆ. ಇದು ಮೆಜೆಸ್ಟಿಕ್‌ನಿಂದ ಎರಡು ಕಿಮೀ ಮತ್ತು ವಿದಾನ ಸೌಧದಿಂದ 500 ಮೀ. ಇದು ಪ್ರತಿಷ್ಠಿತ ಸರ್ಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ, ಇದು ಜವಳಿ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ನೀಡುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆ, ಬೆಂಗಳೂರು ಕೇಂದ್ರವನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಪ್ರವೇಶಕ್ಕೆ ಆಸಕ್ತರಾದ ಅಭ್ಯರ್ಥಿಗಳು ಈ ಕೆಳಗಿನ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು:
- ಶಾಲೆಯ ಮುಖ್ಯಸ್ಥರಿಂದ ದೃಡೀಕರಿಸಲ್ಪಟ್ಟ ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯ ಅಂಕಪಟ್ಟಿ
- ಮೂಲ ವರ್ಗಾವಣೆ ಪ್ರಮಾಣ ಪತ್ರ
- 5 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರ (ಬಿ.ಇ.ಓ ದೃಡೀಕರಣದೊಂದಿಗೆ)
- ಇತ್ತೀಚಿನ 06 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಕನ್ನಡ/ಗ್ರಾಮೀಣ/ಹೈದ್ರಾಬಾದ್-ಕರ್ನಾಟಕ ಪ್ರಮಾಣ ಪತ್ರ
- ವೈದ್ಯಕೀಯ ಪ್ರಮಾಣ ಪತ್ರ
ಇದನ್ನೂ ಓದಿ: Birth Certificate-ಇನ್ನೂ ಮುಂದೆ ಜನನ ಪ್ರಮಾಣ ಪತ್ರ ಪಡೆಯುವುದು ಭಾರಿ ಸುಲಭ!
ಡಿಪ್ಲೋಮಾ ಟೆಕ್ಸ್‌ಟೈಲ್ ಎಷ್ಟು ವರ್ಷ?
ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯು ನೀಡುವ ಡಿಪ್ಲೋಮಾ ಟೆಕ್ಸ್‌ಟೈಲ್ ಕೋರ್ಸ್ ಒಟ್ಟು 3 ವರ್ಷ ಅಗಿದ್ದು ಒಟ್ಟು 6 ಸೆಮಿಸ್ಟರ್ ಅನ್ನು ಹೊಂದಿರುತ್ತದೆ.
ಡಿಪ್ಲೋಮಾ ಟೆಕ್ಸ್‌ಟೈಲ್ ಟೆಕ್ನಾಲಜಿ ಕೋರ್ಸ್‌ನಿಂದ ವೃತ್ತಿಜೀವನದ ಹಲವು ಅವಕಾಶಗಳು ಲಭ್ಯವಿವೆ. ಈ ಕೋರ್ಸ್ ಜವಳಿ ಉದ್ಯಮದಲ್ಲಿ ತಾಂತ್ರಿಕ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ, ಈ ಕೋರ್ಸ್‌ನಿಂದ ಲಭ್ಯವಿರುವ ಕೆಲವು ಪ್ರಮುಖ ವೃತ್ತಿ ಅವಕಾಶಗಳು ಈ ಕೆಳಗಿನಂತಿವೆ:

ಜವಳಿ ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣ:
ಜವಳಿ ಕಾರ್ಖಾನೆಗಳಲ್ಲಿ ಉತ್ಪಾದನಾ ಮೇಲ್ವಿಚಾರಕ, ಗುಣಮಟ್ಟ ನಿಯಂತ್ರಣ ತಂತ್ರಜ್ಞ ಅಥವಾ ತಪಾಸಣೆದಾರರಾಗಿ ಕೆಲಸ ಮಾಡಬಹುದು.
ಫ್ಯಾಬ್ರಿಕ್ ಉತ್ಪಾದನೆ, ಡೈಯಿಂಗ್, ಮುದ್ರಣ ಮತ್ತು ಫಿನಿಶಿಂಗ್ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳಬಹುದು.
ಜವಳಿ ವಿನ್ಯಾಸ ಮತ್ತು ಫ್ಯಾಷನ್ ಉದ್ಯಮ:
ಫ್ಯಾಷನ್ ಡಿಸೈನ್, ಟೆಕ್ಸ್‌ಟೈಲ್ ಡಿಸೈನ್ ಅಥವಾ ಪ್ಯಾಟರ್ನ್ ತಯಾರಿಕೆಯಲ್ಲಿ ಸಹಾಯಕರಾಗಿ ಕೆಲಸ ಮಾಡಬಹುದು.
ಗಾರ್ಮೆಂಟ್ ತಯಾರಿಕೆ ಘಟಕಗಳಲ್ಲಿ ತಾಂತ್ರಿಕ ಸಲಹೆಗಾರರಾಗಿ ಅವಕಾಶಗಳಿವೆ.
ಇದನ್ನೂ ಓದಿ: Farm Pond Subsidy-ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!
ಮಾರ್ಕೆಟಿಂಗ್ ಮತ್ತು ಮಾರಾಟ:
ಜವಳಿ ಉತ್ಪನ್ನಗಳ ಮಾರಾಟ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬಹುದು, ವಿಶೇಷವಾಗಿ ರಫ್ತು ಕಂಪನಿಗಳಲ್ಲಿ ಗ್ರಾಹಕರಿಗೆ ತಾಂತ್ರಿಕ ಬೆಂಬಲವನ್ನು ಒದಗಿಸುವ ಮಾರಾಟ ತಂಡಗಳಲ್ಲಿ ಭಾಗಿಯಾಗಬಹುದು.
ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗಗಳು:
ಕೇಂದ್ರ ಜವಳಿ ಸಚಿವಾಲಯ, ರಾಜ್ಯ ಜವಳಿ ಇಲಾಖೆಗಳು ಅಥವಾ ಸರ್ಕಾರಿ ಜವಳಿ ಸಂಶೋಧನಾ ಸಂಸ್ಥೆಗಳಲ್ಲಿ ತಾಂತ್ರಿಕ ಹುದ್ದೆಗಳು.
ಖಾಸಗಿ ಕಂಪನಿಗಳಾದ ರೇಮಂಡ್, ಅರವಿಂದ್ ಮಿಲ್ಸ್, ವಿಮಲ್ ಟೆಕ್ಸ್‌ಟೈಲ್ಸ್‌ನಂತಹ ದೊಡ್ಡ ಜವಳಿ ಉದ್ಯಮಗಳಲ್ಲಿ ಉದ್ಯೋಗ ಪಡೆಯಲು ಸಹಕಾರಿ.
ಉದ್ಯಮಶೀಲತೆ:
ಸ್ವಂತ ಜವಳಿ ಉತ್ಪಾದನಾ ಘಟಕ, ಬುಟಿಕ್ ಅಥವಾ ಗಾರ್ಮೆಂಟ್ ತಯಾರಿಕೆಯ ಉದ್ಯಮವನ್ನು ಪ್ರಾರಂಭಿಸಬಹುದು.
ರಫ್ತು-ಆಧಾರಿತ ಜವಳಿ ವ್ಯಾಪಾರದಲ್ಲಿ ತೊಡಗಿಕೊಳ್ಳಬಹುದು.
ಇದನ್ನೂ ಓದಿ: PM Kisan-2025: ಪಿ ಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಪ್ರಕಟ!
ಉದ್ಯೋಗ ಮಾರುಕಟ್ಟೆಯ ಬೇಡಿಕೆ:
ಭಾರತದ ಜವಳಿ ಉದ್ಯಮವು ದೇಶದ ಒಟ್ಟು ರಫ್ತಿನಲ್ಲಿ ಸುಮಾರು 15% ರಷ್ಟು ಕೊಡುಗೆ ನೀಡುತ್ತದೆ ಮತ್ತು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಹೆಚ್ಚಿನ ವಿವರಗಳಿಗಾಗಿ:
ಸಂಸ್ಥೆಯ ಜಾಲತಾಣ https://gpt.karnataka.gov.in/gittbengaluru/public/ ಭೇಟಿ ನೀಡಿ. ಅಥವಾ ಪ್ರಾಂಶುಪಾಲೆ ಶ್ರೀಮತಿ ಉಷಾ ಎಸ್. (ಮೊ: 9481101049) ಅಥವಾ ವಿಭಾಗದ ಮುಖ್ಯಸ್ಥ ಶ್ರೀನಿವಾಸಯ್ಯ ವಿ. (ಮೊ: 9448705205) ರವರನ್ನು ಸಂಪರ್ಕಿಸಬಹುದು. ಇಲ್ಲವೇ ಸಂಸ್ಥೆಯ ಕಾರ್ಯಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.