Sunday, June 22, 2025
No menu items!
HomeAgricultureDiesel Pump Scheme-ಡಿಸೇಲ್ ಪಂಪ್ ಪಡೆಯಲು ಶೇ 90% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

Diesel Pump Scheme-ಡಿಸೇಲ್ ಪಂಪ್ ಪಡೆಯಲು ಶೇ 90% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

ಕರ್ನಾಟಕ ಸರ್ಕಾರವು ಕೃಷಿಕರ ಅಭಿವೃದ್ಧಿಯ ಉದ್ದೇಶದಿಂದ ರೈತರಿಗೆ ಶೇ. 90% ವರಗೆ ಡಿಸೇಲ್ ಪಂಪ್‌ಗಳ(Diesel Pump Subsidy) ಮೇಲೆ ಸಬ್ಸಿಡಿ ನೀಡುವ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ರೈತರು ಪ್ರಯೋಜನ ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಡಿಸೇಲ್ ಪಂಪ್‌ಗಳು(Diesel Pump) ವಿದ್ಯುತ್ ಸಂಪರ್ಕ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೆಚ್ಚಾಗಿ ಉಪಯೋಗ ಮಾಡುತ್ತಿದ್ದು, ಸರ್ಕಾರವು ನವೀಕರಿತ ತಂತ್ರಜ್ಞಾನವನ್ನು ಗ್ರಾಮೀಣ ಭಾಗದ ರೈತರಿಗೆ ತಲುಪಿಸಲು ಉದ್ದೇಶವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಪಂಪ್‌ಗಳ ಸಹಾಯದಿಂದ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುವುದ ಜೊತೆಗೆ ಬೆಳೆಗಳಲ್ಲಿ ಬೆಳೆದ ಮೌಲ್ಯವನ್ನು ಸಹ ಹೆಚ್ಚಿಸುವುದರ ಉದ್ದೇಶವಾಗಿದೆ.

ಇದನ್ನೂ ಓದಿ: Free Hostel Application-ಉಚಿತ BCM ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಸಬ್ಸಿಡಿಯಲ್ಲಿ ಡಿಸೇಲ್ ಪಂಪ್ ಅನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಈ ಯೋಜನೆಯ ಉದ್ದೇಶವೇನು? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Who can apply for diesel pump-ಡಿಸೇಲ್ ಪಂಪ್ ಸೆಟ್ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅಭ್ಯರ್ಥಿಯ ಹೆಸರಿಗೆ ಕೃಷಿ ಭೂಮಿಯನ್ನು ಹೊಂದಿರಬೇಕು.

ರೈತರಿಗೆ ಕೃಷಿ ಚಟುವಟಿಕೆಗೆ ನೀರಿನ ಅಗತ್ಯವಿರುವವರು.

ಹಣ್ಣು, ಹೂವು, ತರಕಾರಿ ಅಂದರೆ ತೋಟಗಾರಿಕೆ ಮಾಡುವವರು.

ಸಹಾಯಧನವು ಜಿಲ್ಲೆಯ ಆಧಾರಿತವಾಗಿ ಬದಲಾಗುತ್ತಿರುತ್ತದೆ.

SC/ST ರೈತರಿಗೆ ಹೆಚ್ಚಿನ ಶೇಕಡಾವಾರು ಸಹಾಯಧನ ದೊರೆಯಬಹುದು.

ಈ ಹಿಂದೆ ಈ ಯೋಜನೆಗಳ ಮೂಲಕ ಸಹಾಯಧನವನ್ನು ಪಡೆದಿರಬಾರದು.

ಇದನ್ನೂ ಓದಿ: Crop Insurance-ಬೆಳೆ ವಿಮೆ ಯೋಜನೆಯ ಕುರಿತು ಇಲ್ಲಿದೆ ಅಗತ್ಯ ಮಾಹಿತಿ!

subsidy details- ಎಷ್ಟು ಸಬ್ಸಿಡಿಯನ್ನು ಪಡೆಯಬಹುದು?

ಕೃಷಿ ಭಾಗ್ಯ ಮತ್ತು ಕೃಷಿ ಯಾಂತ್ರೀಕರಣ ಯೋಜನೆಯ ಅಡಿಯಲ್ಲಿ ಕೃಷಿ ಇಲಾಖೆಯ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಶೇ 90% ಸಬ್ಸಿಡಿಯನ್ನು ಪಡೆಯಲು ರೈತರಿಗೆ ಅವಕಾಶವಿರುತ್ತದೆ.

disel pump

ಇದನ್ನೂ ಓದಿ: Horticulture Department- ತೋಟಗಾರಿಕೆ ಇಲಾಖೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

How to apply for diesel pump- ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?

ಅರ್ಹ ಅಭ್ಯರ್ಥಿಗಳು ನಿಮ್ಮ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Documents-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ/Aadhar card

ರೇಷನ್ ಕಾರ್ಡ/Ration card

ಪಹಣಿ/RTC

ಬ್ಯಾಂಕ್ ಪಾಸ್ ಬುಕ್ ಪ್ರತಿ/Bank passbook

ಪೋಟೋ/Photocopy

ನೀರಿನ ಮೂಲದ ಪ್ರಮಾಣ ಪತ್ರ/ಕೃಷಿ ಹೊಂಡ/Krishi honda

ಇದನ್ನೂ ಓದಿ: BPL Card Benefits- BPL Card ಕುಟುಂಬಗಳಿಗೆ ಈ ಸೇವೆ ಉಚಿತವಾಗಿ ಲಭ್ಯ!

Online Application- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಕೃಷಿ ಯಾಂತ್ರೀಕರಣ ಯೋಜನೆಯ ಅಡಿಯಲ್ಲಿ ಕೃಷಿ ಇಲಾಖೆಯಿಂದ ವಿವಿಧ ಯಂತೋಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಆನ್ಲೈನ್ ಮೂಲಕ ಇಲ್ಲಿ ನೀಡಿರುವ ವಿಧಾನವನ್ನು ಬಳಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲು ಇಲ್ಲಿ ಕ್ಲಿಕ್ Click Here ಮಾಡಿ ಅಧಿಕೃತ ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಇದಾದ ನಂತರ ಇಲ್ಲಿ ಕಾಣುವ “Farm Mechanisation Application Registration” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ಇಲ್ಲಿ ರೈತರ Farmer ID ಅನ್ನು ಹಾಕಿ “Get Details” ಬಟನ್ ಮೇಲೆ ಕ್ಲಿಕ್ ಮಾಡಿದರೆ ರಿಜಿಸ್ಟರ್ ಮಾಡಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು Fill ಮಾಡಿ “Verify and Continue” ಬಟನ್ ಮೇಲೆ ಕ್ಲಿಕ್ ಮಾಡಿಬೇಕು.

ಇದನ್ನೂ ಓದಿ: Free Aadhaar Update- ಉಚಿತವಾಗಿ ಆಧಾರ್ ಕಾರ್ಡ ಅಪ್ಡೇಟ್ ಕುರಿತು ಮಹತ್ವದ ಪ್ರಕಟಣೆ!

Step-4: ನಂತರ ಅರ್ಜಿ ನಮೂನೆಯು Open ಆಗುತ್ತದೆ. ಅಲ್ಲಿ ಕೇಳಿರುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯು ಮುಕ್ತಾಯಗೊಳ್ಳುತ್ತದೆ.

 

RELATED ARTICLES
- Advertisment -

Most Popular

Recent Comments