ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬೆಂಗಳೂರು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರವಾಸಿ ಆಕರ್ಷಣೆ ಸ್ಥಳಗಳನ್ನು ವೀಕ್ಷಿಸಲು ಬಿಎಂಟಿಸಿ ಇದೀಗ ವಿಶೇಷವಾಗಿ ʼದಿವ್ಯ ದರ್ಶನʼ ಎಂಬ ಒಂದು ದಿನದ ಪ್ಯಾಕೇಜ್ ಟೂರ್ ಸೇವೆಯನ್ನು ಪ್ರಾರಂಭ ಮಾಡಿದೆ.
ಬೆಂಗಳೂರು ನಗರವು ಕೇವಲ ಕೆಲಸಕ್ಕೆ ಮಾತ್ರವಲ್ಲದೆ, ಪ್ರಯಾಣಿಕರು ಕಡಿಮೆ ವೆಚ್ಚದಲ್ಲಿ, ಸುರಕ್ಷಿತ, ಆರಾಮದಾಯಕವಾಗಿ ಸುತ್ತಮುತ್ತಲಿನ ಇತಿಹಾಸ, ಸಂಸ್ಕೃತಿ, ಪ್ರಕೃತಿ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ತಾಂತ್ರಿಕ ತಾಣ ಸ್ಥಳಗಳನ್ನು ವೀಕ್ಷಣೆ ಮಾಡವ ಉದ್ದೇಶವಿದಾಗಿದೆ.
ಇದನ್ನೂ ಓದಿ: Diesel Pump Scheme-ಡಿಸೇಲ್ ಪಂಪ್ ಪಡೆಯಲು ಶೇ 90% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!
ಈ ಅಂಕಣದಲ್ಲಿ ಈ ಸೇವೆಯ ಪ್ರಮುಖ ಉದ್ದೇಶ, ಯಾವೆಲ್ಲ ಸ್ಥಳಗಳ ಭೇಟಿ? ಪ್ರವಾಸದ ದಿನಾಂಕಗಳು, ಮುಂಗಡ ಟಿಕೆಟ್ ಬುಕ್ಕಿಂಗ್ ಗಳನ್ನು ತೆಗೆದುಕೊಳ್ಳುವ ವಿಧಾನ? ನಿಗದಿಪಡಿಸಿದ ದರ ಎಷ್ಟು? ಯಾವ ಯಾವ ದಿನಗಳಲ್ಲಿ ಈ ಪ್ಯಾಕೇಜ್ ಲಭ್ಯವಿರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಈ ಪ್ಯಾಕೇಜ್ ಟೂರ್ ನಲ್ಲಿ ಯಾವೆಲ್ಲ ಸ್ಥಳಗಳನ್ನು ನೋಡಬಹುದು?
ಬಿಎಂಟಿಸಿಯಿಂದ ʼದಿವ್ಯ ದರ್ಶನʼಎಂಬ ಒಂದು ದಿನದ ಪ್ಯಾಕೇಜ್ ಟೂರ್‌ನಲ್ಲಿ ಬೆಂಗಳೂರಿನಲ್ಲಿರುವ ಒಟ್ಟು 8 ಪ್ರಮುಖ ದೇವಾಲಯಗಳ ದರ್ಶನವನ್ನು ಮಾಡಬಹುದು:
1) ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
2) ಶ್ರೀ ರಾಜರಾಜೇಶ್ವರಿ ದೇವಸ್ಥಾನ
3) ಶೃಂಗಗಿರಿ ಶೀ ಷಣ್ಮುಖ ದೇವಸ್ಥಾನ
4) ಶ್ರೀ ದೇವಿ ಕರುಮಾರಿ ಅಮ್ಮನವರ ದೇವಸ್ಥಾನ
5) ಇಸ್ಮಾನ್ ವೈಕುಂಟ ದೇವಸ್ಥಾನ
6) ಬನಶಂಕರಿ ದೇವಸ್ಥಾನ
7) ಓಂಕಾರೇಶ್ವರಿ ದೇವಸ್ಥಾನ
8) ಆರ್ಟ್ ಆಫ್ ಲಿವಿಂಗ್
ಇದನ್ನೂ ಓದಿ: Free Hostel Application-ಉಚಿತ BCM ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಇದನ್ನೂ ಓದಿ: Crop Insurance-ಬೆಳೆ ವಿಮೆ ಯೋಜನೆಯ ಕುರಿತು ಇಲ್ಲಿದೆ ಅಗತ್ಯ ಮಾಹಿತಿ!
ಯಾವೆಲ್ಲ ದಿನಗಳಲ್ಲಿ ಈ ಟೂರ್ ಲಭ್ಯವಿರುತ್ತದೆ ಹಾಗೂ ನಿಹದಿ ಪಡಿಸಿದ ಸಮಯ?
ಪ್ರತಿ ಶನಿವಾರ ಹಾಗೂ ಭಾನುವಾರ ಹಾಗೂ ಎಲ್ಲ್ ಸಾರ್ವತ್ರಿಕ ರಜಾ ದಿನಗಳಲ್ಲಿ ಈ ಸ್ಥಳಗಳನ್ನು ವೀಕ್ಷಣೆ ಮಾಡಬಹುದು.
ಪ್ರತಿ ದಿನವು ಅಂದರೆ ಮೇಲೆ ತಿಳಿಸಿರುವ ದಿನಗಳಲ್ಲಿ ಬೆಳಗ್ಗೆ 8.30 ಕ್ಕೆ ಮೆಜೆಸ್ಟಿಕ್ ನಿಂದ ಬಸ್ ಹೊರಡಲಿದ್ದು, ಸಂಜೆ 6 ಗಂಟೆಗೆ ಸರಿಯಾಗಿ ಬಸ್ ಹಿಂತಿರುಗುತ್ತದೆ.
ಈ ಒಂದು ದಿನದ ಪ್ಯಾಕೇಜ್ ಟೂರ್ ನಲ್ಲಿ ಸರ್ಕಾರವು ನಿಗದಿಪಡಿಸಿದ ಶುಲ್ಕವೆಷ್ಟು?
ವಯಸ್ಕರಿಗೆ- ₹450
ಮಕ್ಕಳಿಗೆ- ₹350
ಇದನ್ನೂ ಓದಿ: Horticulture Department- ತೋಟಗಾರಿಕೆ ಇಲಾಖೆಯಡಿ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು:
ಬಿಎಂಟಿಸಿ ಈ ಪ್ಯಾಕೇಜ್ ಸೇವೆಗಾಗಿ ಮುಂಗಡ ಬುಕ್ಕಿಂಗ್ ಅವಕಾಶವಿದ್ದು, ಇಚ್ಛಿಸಿದವರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ಮಾಡಿ ವಿವರಗಳನ್ನು ಪರಿಶೀಲಿಸಿ ಟಿಕೆಟ್ ಬುಕ್ ಮಾಡಬಹುದು ಅಥವಾ ನಿಮ್ಮ ಹತ್ತಿರದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಾಹಿತಿಕೇಂದ್ರವನ್ನು ಸಂಪರ್ಕಿಸಿ ಬುಕ್ಕಿಂಗ್ ಮಾಡಬಹುದು.
ಇದನ್ನೂ ಓದಿ: BPL Card Benefits- BPL Card ಕುಟುಂಬಗಳಿಗೆ ಈ ಸೇವೆ ಉಚಿತವಾಗಿ ಲಭ್ಯ!
For more information-ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಯಾಣಿಕರು ಮುಂಗಡ ಸೀಟ್ ಗಳನ್ನು ಕಾಯ್ದಿರಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here
ಸಹಾಯವಾಣಿ ಸಂಖ್ಯೆ: 08022483777 ಅಥವಾ 7760991212