ಅಡಿಕೆ ನಮ್ಮ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರಾಂತ್ಯದ ಪ್ರಮುಖ ಬೆಳೆಯಾಗಿದ್ದು, ಈ ಭಾಗದಲ್ಲಿ ಅಡಿಕೆ ಬೆಳೆಯು ರೈತರ ಜೀವನಾಡಿಯಾಗಿದೆ. ಅಡಿಕೆ ಬೆಳೆಯ ನಿಖರ ಆದಾಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ರೈತರು ಅಡಿಕೆ ಬೆಳೆಯ ಕೃಷಿಯ ಕಡೆ ಗಮನ ಹರಿಸುತ್ತಾರೆ.
ಅಡಿಕೆ ಬೆಳೆಯಲ್ಲಿ ಹಲವಾರು ಬಗೆಯ ತಳಿಗಳು ಇದೆ, ಆದರೂ ಅವೆಲ್ಲವೂ ಅಪೇಕ್ಷಿತ ಗುಣಗಳಿಂದ ಕೂಡಿರುವುದಿಲ್ಲ ಹಾಗೂ ಎಲ್ಲಾ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿರುವುದಿಲ್ಲ. ಆದ್ದರಿಂದ ಆಯಾ ಪ್ರದೇಶಕ್ಕೆ ಚೆನ್ನಾಗಿ ಹೊಂದುವಂತ ಅಧಿಕ ಇಳುವರಿಯನ್ನು ಕೊಡುವ, ಬೇಗ ಫಸಲನ್ನು ನೀಡುವ ಹಾಗೂ ಉತ್ತಮ ಗುಣಮಟ್ಟದ ಇಳುವರಿಯನ್ನು ಕೊಡುವ ತಳಿಗಳ ಬೀಜವನ್ನು (ಗೋಟು) ಸಸ್ಯಾಭಿವೃದ್ಧಿಗೆ ಉಪಯೋಗಿಸುವುದು ಅತಿ ಸೂಕ್ತವಾಗಿದೆ.
ಇದನ್ನೂ ಓದಿ: Bangalore Rain Forecast-ರಾಜ್ಯದ ಮಳೆ ಮುನ್ಸೂಚನೆ! 23 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!
ಆದರೆ ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಬೀಜಗಳ/ ಸಸಿಗಳ ಕೊರತೆ ಕಾಡುತ್ತಿದೆ. ಇದೇ ಕಾರಣದಿಂದಾಗಿ ವೈಜ್ಞಾನಿಕ ಪದ್ಧತಿಯಿಂದ ಉತ್ಕೃಷ್ಠ ಗುಣಮಟ್ಟದ ಸಸಿಗಳನ್ನು ಉತ್ಪಾದನೆ ಮಾಡಲು ಹೆಚ್ಚಿನ ಬೇಡಿಕೆ ಇದೆ. ಕೀಟಗಳು ಮತ್ತು ರೋಗಗಳಿಂದ ರಕ್ಷಣೆ ಹಾಗೂ ನೀರು, ಪೋಷಕಾಂಶಗಳ ಉತ್ತಮ ನಿರ್ವಹಣೆಯಿಂದ ಸಸಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಈ ರೀತಿಯ ಉತ್ಕೃಷ್ಠ ಗುಣಮಟ್ಟದ ಸಸಿಗಳನ್ನು ಕಾಳಜಿಯಿಂದ ಪೋಷಿಸುವ ನಿರ್ವಹಣೆಯಿಂದ ಮಾತ್ರ ಉತ್ಪಾದಿಸಬಹುದಾಗಿದೆ.
ಪ್ರಸ್ತುತ ಈ ಅಂಕಣದಲ್ಲಿ ಅಡಿಕೆ ಸಸಿಯನ್ನು ಬೆಳೆಸಲು ತಾಯಿ ಮರಗಳನ್ನು ಗುರುತಿಸಲು ಅನುಸರಿಸಬೇಕಾದ ಕ್ರಮಗಳೇನು? ಸಸಿ ಮಡಿಗಳಲ್ಲಿ ಸಸ್ಯಾಭಿವೃದ್ಧಿ ಮತ್ತು ಪಾಲಿಥೀನ್ ಚೀಲಗಳಲ್ಲಿ ಸಸ್ಯಾಭಿವೃದ್ಧಿ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: Mobile Repair Training- 30 ದಿನದ ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ!
Adike Sasi Belesuva Vidhana-ಸಸಿಗಳನ್ನು ಬೆಳಸುವ ವಿಧಾನ ಮತ್ತು ಕೈಗೊಳ್ಳಬೇಕಾದ ಕೆಲವು ಮುಖ್ಯ ಚಟುವಟಕೆಗಳು:
ತಾಯಿ ಮರಗಳನ್ನು ಗುರುತಿಸುವುದು:
ಅಧಿಕ ಇಳುವರಿ ಕೊಡುವ ಆರೋಗ್ಯವಂತ ತಾಯಿ ಮರಗಳನ್ನು ಗುರುತಿಸಿ ಮಧ್ಯಮ ವಯಸ್ಸಿನ ಅಂದರೆ 25 ರಿಂದ 40 ವರ್ಷದ ಮರಗಳನ್ನು ಆಯ್ಕೆ ಮಾಡಬೇಕು. ಪ್ರತಿ ಮರ ಕನಿಷ್ಟ 12 ಎಲೆಗಳನ್ನು ಹೊಂದಿರುವುದರ ಜೊತೆಗೆ ಮರದ ಗೆಣ್ಣುಗಳು ಹತ್ತಿರವಾಗಿರಬೇಕು. ಇಂತಹ ಮರಗಳಲ್ಲಿ ಕೊನೆಗಳು ಪೂರ್ಣ ಹಣ್ಣಾದ, ಮಧ್ಯಭಾಗದ ಕೊನೆಗಳಲ್ಲಿ 35 ಗ್ರಾಂ ಗಿಂತಲೂ ಹೆಚ್ಚು ತೂಕವಿರುವ ಕಾಯಿಗಳನ್ನು ಆಯ್ದುಕೊಳ್ಳಬೇಕು, ನಂತರ ಆ ಆಯ್ದ ಕಾಯಿಗಳನ್ನು ನೀರಿನಲ್ಲಿ ಹಾಕಿ ತಳ ಸೇರಿರುವ ಕಾಯಿಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸಬೇಕು.
ಇದನ್ನೂ ಓದಿ: Farm Pond Subsidy- ಶೇ 90% ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣ!
ಸಸಿ ಮಡಿಗಳಲ್ಲಿ ಸಸ್ಯಾಭಿವೃದ್ಧಿ:
ಆರಿಸಿದ ಕಾಯಿಗಳನ್ನು ಕೊಯ್ಲು ಮಾಡಿದ 8-10 ದಿನಗಳ ಒಳಗೆ ಮಡಿಗಳಲ್ಲಿ ನೆಡಬೇಕು. ನಂತರ ಮಡಿಗಳು ಭಾಗಶ: ನೆರಳಿರುವ ಪ್ರದೇಶಗಳಲ್ಲಿರಬೇಕು. 30 ಸೆಂ. ಮೀ. ಆಳ ಮತ್ತು ಅನುಕೂಲಕ್ಕೆ ತಕ್ಕ ಉದ್ದಗಲವಿರುವ ಕಾಲುವೆಗಳನ್ನು ತೆಗೆದು ಮರಳಿನಿಂದ ತುಂಬಬೇಕು. ಇಂತಹ ಮಡಿಗಳಲ್ಲಿ ಬೀಜದ ಕಾಯಿಗಳನ್ನು ತೊಟ್ಟಿನಭಾಗ ಮೇಲಿರುವಂತೆ 5 ಸೆಂ. ಮೀ. ಅಂತರದಲ್ಲಿ ನಾಟಿ ಮಾಡಬೇಕು.
ಆ ನಂತರ ಕಾಯಿಗಳು ಮುಚ್ಚುವಂತೆ ಮರಳನ್ನು ಹರಡಬೇಕು. ಪ್ರತಿ ದಿನ ನೀರು ಹಾಕುತ್ತಿರಬೇಕು. ಸುಮಾರು 40 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯಲು ಪ್ರಾರಂಭವಾಗುತ್ತವೆ. ಈ ಪದ್ಧತಿಯಲ್ಲಿ ಮೊಳಕೆಯೊಡೆದ ಬೀಜಗಳನ್ನು ಬೇರ್ಪಡಿಸುವಾಗ ಹಾಗೂ ಇರುವೆಗಳ ಭಾದೆಯಿಂದ ಶೇ. 15 ರಿಂದ 20 ಬೀಜಗಳು ಹಾನಿಗೊಳಗಾಗುತ್ತವೆ. ಇದರ ನಿರ್ವಹಣೆಗೆ ಕಾರ್ಬೋಫ್ಯುರಾನ್ ಕೀಟನಾಶಕವನ್ನು ಉಪಯೋಗಿಸಬೇಕು.
ಇದನ್ನೂ ಓದಿ: Diploma Textile- ಡಿಪ್ಲೋಮಾ ಟೆಕ್ಸ್‌ಟೈಲ್ ಟೆಕ್ನಾಲಜಿ ಕೋರ್ಸ್‌ಗೆ ಅರ್ಜಿ ಆಹ್ವಾನ!

ಪಾಲಿಥೀನ್ ಚೀಲಗಳಲ್ಲಿ ಸಸ್ಯಾಭಿವೃದ್ಧಿ:
ಮೊಳಕೆಯೊಡೆದ ಬೀಜಗಳು 2 ರಿಂದ 3 ಎಲೆಗಳಿರುವ ಸಸಿಗಳನ್ನು ಪ್ರಾಥಮಿಕ ನರ್ಸರಿಯಿಂದ ಬೇರು ಸಮೇತ ತೆಗೆದು 25 x 15 ಸೆಂ.ಮೀ. ಅಳತೆಯ ಪಾಲಿಥೀನ್ ಚೀಲಗಳಲ್ಲಿ ಮಣ್ಣು, ಗೊಬ್ಬರ ಮತ್ತು ಮರಳು (1:1:1) ಮಿಶ್ರಣ ಮಾಡಿ ಪಾಲಿಥೀನ್ ಚೀಲಗಳಿಗೆ ತುಂಬಿ ನಾಟಿ ಮಾಡಬೇಕು.
ಇಂತಹ ಎಳೆ ಸಸಿಗಳನ್ನು ಶೇ. 50ರ ಅನುಪಾತದಲ್ಲಿ ನೆರಳಿನಲ್ಲಿಡಬೇಕು. 10 x 10 ಅಡಿಯಲ್ಲಿ ಸುಮಾರು 1200 ರಿಂದ 1500 ಸಸಿಗಳ ಅಂತರದಲ್ಲಿ ಸ್ಪ್ರಿಂಕ್ಲರ್ ಮೂಲಕ ಸಸಿಗಳಿಗೆ ನೀರನ್ನು ಒದಗಿಸಬೇಕು. ಸಸಿಗಳನ್ನು 2 ರಿಂದ 3 ತಿಂಗಳಿಗೊಮ್ಮೆ ಸ್ಥಳವನ್ನು ಬದಲಿಸುವುದರಿಂದ ಸಸಿಗಳ ಕಾಂಡ ಸಧೃಡವಾಗಿ ಬೆಳೆಯಲು ಹಾಗೂ ಬೇರುಗಳ ನೆಲೆಯೂರಿಕೆಯನ್ನು ತಡೆಯಲು ಸಹಕಾರಿಯಾಗುತ್ತದೆ. ನಾಟಿ ಮಾಡಲು 12 ರಿಂದ 18 ತಿಂಗಳ ವಯಸ್ಸಿನ ಗಿಡ್ಡ ಮತ್ತು ಕನಿಷ್ಠ 5 ಗರಿಗಳಿರುವ ಸಸಿಗಳನ್ನು ಆರಿಸಬೇಕು.
ಇದನ್ನೂ ಓದಿ: GKVK Bengaluru-ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ 59 ನೇ ಘಟಿಕೋತ್ಸವ!13 ಚಿನ್ನದ ಪದಕ ಪಡೆದ ದೀಪ್ತಿ!
ಅಡಿಕೆ ಕೃಷಿ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಒಮ್ಮೆ ಭೇಟಿ ಮಾಡಬಹುದು.
ಮಾಹಿತಿ ಕೃಪೆ-ಸುದೀಪ್ ಹೆಚ್. ಪಿ. ಮತ್ತು ನಾಗರಾಜಪ್ಪ ಅಡಿವಪ್ಪರ್ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
ಮೊಬೈಲ್ ಸಂಖ್ಯೆ: 9538560628