Sunday, December 22, 2024
No menu items!
HomeNewsYashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!

Yashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!

ರಾಜ್ಯ ಸರಕಾರದಿಂದ ಸಹಕಾರಿ ಸಂಘಗಳ ಮೂಲಕ ಯಶಸ್ವಿನಿ ಕಾರ್ಡ(Yashasvini Card) ಅನ್ನು ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ಈಗಾಗಲೇ ಈ ಕಾರ್ಡ ಅನ್ನು ಹೊಂದಿರುವವರು ನವೀಕರಣ(Yashasvini Card renewal) ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಈ ಕಾರ್ಡ ಪ್ರಯೋಜನಗಳೇನು? ಇತರೆ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರೆದಂತೆಲ್ಲಾ ಮನುಷ್ಯನ ಜೀವನ ಶೈಲಿ(lifestyle) ಹಾಗೂ ಜೀವನದಲ್ಲಿ ಹಲವಾರು ರೀತಿಯಾದಂತಹ ಬದಲಾವಣೆ ಗಳನ್ನು ನಾವು ಕಾಣುತ್ತಿದ್ದೇವೆ. ಮನುಷ್ಯರ ಆರೋಗ್ಯದ(Health) ವಿಷಯಕ್ಕೆ ಬಂದರೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ವಿವಿಧ ರೀತಿಯ ಕಾಯಿಲೆಗಳಿಗೆ ಮನುಷ್ಯ ತುತ್ತಾಗುತ್ತಿರುವುದು ಕೆಲವೊಂದು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ತಾವು ಕೂಡಿ ಇಟ್ಟಿರುವಂತಹ ಹಣವನ್ನು ಭರಿಸುವ ಅಗತ್ಯತೆ ಎದುರಾಗಿತ್ತದೆ.

ಇದನ್ನೂ ಓದಿ: Weather Forecast-2024: ಕರ್ನಾಟಕ ಮಳೆ ಮುನ್ಸೂಚನೆ! ದಿನಾಂಕ: 13-12-2024

ಹೆಚ್ಚು ಹೆಚ್ಚು ಆಸ್ಪತ್ರೆಗಳು ನಿರ್ಮಾಣವಾದ್ದರಿಂದ ಹಾಗೂ ಎಲ್ಲಾ ಕಾಯಿಲೆಗಳಿಗೆ ತಂತ್ರಜ್ಞಾನದಿಂದಲೇ ಚಿಕಿತ್ಸೆಯನ್ನು ಕೊಡುವ ಅವಶ್ಯಕತೆ ಹೆಚ್ಚಾಗಿರುವುದರಿಂದ ಕೆಲವೊಂದು ಕಾಯಿಲೆಗಳಿಗೆ ಹೆಚ್ಚು ಹಣ ಬೇಕಾಗುತ್ತದೆ ಆದ್ದರಿಂದ ಎಲ್ಲಾ ವರ್ಗದ ಜನರು ಚಿಕಿತ್ಸೆಯನ್ನು ಪಡೆದುಕೊಳ್ಳಲು ಅರ್ಥಿಕವಾಗಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಇದೇ ಕಾರಣಕ್ಕೆ ಸರ್ಕಾರ ಬಡವರಿಗಾಗಿ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗಾಗಿ ಹಾಗೂ ಎಲ್ಲಾ ವರ್ಗದ ಜನರಿಗೆ ಎಲ್ಲಾ ರೀತಿಯಾದಂತಹ ಚಿಕಿತ್ಸೆಗಳು ದೊರೆಯಲಿ ಎಂದು ಕೆಲವೊಂದು ಮಾರ್ಗೋಪಾಯಗಳನ್ನು ಮಾಡಿಕೊಟ್ಟಿದೆ ಅದರಲ್ಲಿ ಯಶಸ್ವಿನಿ ಕಾರ್ಡ್(Yashasvini Card) ಸೌಲಭ್ಯವು ಒಂದು ಈ ಕಾರ್ಡ್ ನ ಸಹಾಯದಿಂದ ಯಶಸ್ವಿನಿ ಕಾರಣ ಅಡಿಯಲ್ಲಿ ಹಲವು ಕಾಲೆಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಹೀಗಿದೆ.

ಇದನ್ನೂ ಓದಿ: Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ!

Yashasvini Yojana-ಯಶಸ್ವಿನಿ ಯೋಜನೆ:

ಈ ಯೋಜನೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು ಇದನ್ನು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ರಕ್ಷಣೆಯ ಸಲುವಾಗಿ 2003ರಲ್ಲಿ ಜೂನ್ 1 ರಂದು ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಅವರು ಜಾರಿಗೆ ತಂದರು ಇದು ಕರ್ನಾಟಕ ರಾಜ್ಯದ ಗ್ರಾಮೀಣ ಸಹಕಾರಿ ಸಂಘಗಳಿಗೆ ರೂಪ ಕೊಂಡಿರುವ ಒಂದು ಸ್ವಯಂ ನಿಧಿ ಶಸ್ತ್ರ ಚಿಕಿತ್ಸೆ ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಬಡ ಮತ್ತು ಮಧ್ಯಮ ಕುಟುಂಬಗಳಿಗೆ ವೈದ್ಯಕೀಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.

yashaasvini yojana

ಇದನ್ನೂ ಓದಿ: Student Scholarship- ಈ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ರೂ 25,000 ಸಾವಿರ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ!

Yashasvini Card Benefits-ಯಶಸ್ವಿನಿ ಕಾರ್ಡ ಪಡೆಯುವುದರ ಲಾಭಗಳು:

ಈ ಒಂದು ಆರೋಗ್ಯ ವಿಮಾ ಕಾರ್ಡನಿಂದ ಹಲವು ಸೌಲಭ್ಯಗಳನ್ನು ಪಡೆಯಬಹುದು ಅದರಲ್ಲಿಯೂ ಪ್ರಮುಖವಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಸೌಲತ್ತುಗಳನ್ನು ಪಡೆಯಲು ಈ ಕಾರ್ಡ್ ಉಪಯೋಗಕಾರಿಯಾಗಿದೆ. ಯಶಸ್ವಿನಿ ಕಾರ್ಡ್ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ ವೈದ್ಯಕೀಯ ವೆಚ್ಚ ತಗ್ಗಿಸಲು ಜನರಿಗೆ ಹೆಚ್ಚು ಸಹಕಾರಿಯಾಗಿದೆ.

ಈ ಕಾರ್ಡ್ ಹೊಂದಿರುವವರು 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದು ಹಾಗೂ ಈ ಕಾರ್ಡ ನ ಅಡಿಯಲ್ಲಿ 823 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ಒಳಗೊಂಡಿದ್ದು ಕಾರ್ಡ ಸದಸ್ಯರು ಆಸ್ಪತ್ರೆಗೆ ದಾಖಲಾದರೆ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಭರಿಸಬಹುದಾಗಿದೆ.

Who can appy for Yashasvini card-ಯಶಸ್ವಿನಿ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳೇನು?

ಯಶಸ್ವಿನಿ ಕಾರ್ಡ ಪಡೆಯಲು ಬಯಸುವ ಫಲಾನುಭವಿಗಳು ಗ್ರಾಮದ ಸಹಕಾರ ಸಂಘ ಒಂದರಲ್ಲಿ ಸದಸ್ಯರಾಗಿರಬೇಕು ಹಾಗೂ ಸದಸ್ಯರಾಗಿ ಕನಿಷ್ಠ ಮೂರು ತಿಂಗಳು ಕಳೆದಿರಬೇಕು ಗ್ರಾಮೀಣ ಸಹಕಾರ ಸಂಘದಲ್ಲಿ ಅಥವಾ ಬ್ಯಾಂಕುಗಳಲ್ಲಿ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಸಂಘದ ಸದಸ್ಯರು ಅಥವಾ ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರು ಯಶಸ್ವಿ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ!

Documents required to get Yashasvini card-ಯಶಸ್ವಿನಿ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು?

(1) ಸಹಕಾರಿ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿರಬೇಕು/Should have membership in cooperative societies.
(2) ಪ್ರತಿ ಸದಸ್ಯರ ಆಧಾರ್ ಕಾರ್ಡ್ ಪ್ರತಿ/Aadhar card copy of each member
(3) ರೇಷನ್ ಕಾರ್ಡ್ ಪ್ರತಿ/Copy of Ration Card
(4) ಇತ್ತೀಚಿನ ಭಾವಚಿತ್ರ/Recent photograph

How to apply-ಯಶಸ್ವಿನಿ ಕಾರ್ಡಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಗತ್ಯ ದಾಖಲಾತಿಗಳ ಸಮೇತ ಅರ್ಹ ಅರ್ಜಿದಾರರು ನಿಮ್ಮ ಹತ್ತಿರದ ಸಹಕಾರಿ ಸಂಘದ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ನಿಗಧಿಪಡಿಸಿದ ಶುಲ್ಕವನ್ನು ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!

Yashasvini card fee-ಶುಲ್ಕದ ವಿವರ:

(1) ಕುಟುಂಬ ಒಂದಕ್ಕೆ ವಾರ್ಷಿಕ ರೂ.500/-ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.100/- ಗಳನ್ನು ಪಾವತಿಸಬೇಕು.

(2) ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000/- ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿಗಿ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200/-ಗಳನ್ನು ಪಾವತಿಸದ್ದು.

(3) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರಿಗೆ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುವುದರಿಂದ ಈ ವರ್ಗದವರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.

RELATED ARTICLES
- Advertisment -

Most Popular

Recent Comments